ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಯಪ್ರಜ್ಞೆ ಮೆರೆದು ಪ್ರಾಣ ಉಳಿಸಿದ ಪೊಲೀಸ್ ಪೇದೆ!

By Vanitha
|
Google Oneindia Kannada News

ನಾಸಿಕ್, ಸೆಪ್ಟೆಂಬರ್, 15 : ನಾಸಿಕ್ ಕುಂಭಮೇಳ ಪ್ರಯುಕ್ತ ಗೋದಾವರಿ ನದಿಯಲ್ಲಿ ಮಿಂದು ಪವಿತ್ರರಾಗಲು ಹಲವಾರು ಭಕ್ತರು ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಒಂದು ಸಾಹಸಮಯ ಘಟನೆ ಸೋಮವಾರ ನಡೆದಿದೆ.

ನಾಸಿಕ್ ಮೇಳದ ಜನಸಾಗರವನ್ನು ನಿಯಂತ್ರಣದಲ್ಲಿರಿಸಲು ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿತು. ಅದರಲ್ಲಿ ಮನೋಜ್ ಬರಹಟೆ ಎಂಬ ಪೊಲೀಸ್ ಅಧಿಕಾರಿ 20 ಅಡಿ ಎತ್ತರದ ನಾಲೆಯಿಂದ ನದಿಗೆ ಹಾರಿ ಒಬ್ಬ ವ್ಯಕ್ತಿಯ ಜೀವವನ್ನು ಬದುಕಿಸಿದ್ದಾನೆ. ಸಮಯಪ್ರಜ್ಞೆ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.[ಚಿತ್ರಗಳಲ್ಲಿ : ನಾಸಿಕ್ ಕುಂಭಮೇಳದಲ್ಲಿ ಪವಿತ್ರ ಸ್ನಾನ]

Young policeman jumps off 20-feet-bridge to save man life in Kumbh mela

24 ವರ್ಷದವನಾದ ಮನೋಜ್ ಬರಹಟೆ ಪೊಲೀಸ್ ಕಾನ್ ಸ್ಟೆಬಲ್ ತರಬೇತಿ ಪಡೆಯುತ್ತಿದ್ದನು. ಈ ನಿಮಿತ್ತ ಕುಂಭಮೇಳದ ನಿಯಂತ್ರಣಕ್ಕಾಗಿ ನಿಯೋಜನೆಗೊಂಡಿದ್ದನು. ಈತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ವ್ಯಕ್ತಿಯ ಪ್ರಾಣವನ್ನು ಉಳಿಸಲು ತನ್ನ ಜೀವದ ಹಂಗು ತೊರೆದು ಅಮರ್ ಧಾಮ್ ಎಂಬ ನಾಲೆಯಿಂದ 20 ಅಡಿ ಆಳಕ್ಕೆ ಧುಮುಕಿದ್ದಾನೆ.

ಕುಂಭಮೇಳದಲ್ಲಿ ಪ್ರಾಣ ಕಳೆದುಕೊಳ್ಳಲು ಒಬ್ಬ ವ್ಯಕ್ತಿ ನಾಲೆಯ ಮೇಲೆ ನಿಂತಿರುವುದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ಆತನನ್ನು ತಡೆಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಆತ ನದಿಗೆ ಹಾರಿದ್ದಾನೆ. ಇದನ್ನು ನೋಡಿದ ಮನೋಜ್ ಅವರು ಮೀನ-ಮೇಷ ಎಣಿಸದೆ ನೀರಿಗೆ ಹಾರಿ ಸಾವು ಬದುಕಿನ ಮಧ್ಯೆ ಸಿಲುಕಿದ್ದ ವ್ಯಕ್ತಿಯನ್ನು ಉಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

English summary
A young policeman at the ongoing Kumbh Mela in Nashik did not think twice before jumping off a 20-feet high bridge into water to save a man's life on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X