ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವ ದಂಪತಿಯ ಸಂತೋಷದ ನಡುವೆ ಬಂತು ಕೊರೊನಾ: ಬೇಸರದಲ್ಲಿ ಪತಿ

|
Google Oneindia Kannada News

ನವ ದೆಹಲಿ, ಮಾರ್ಚ್ 19: ಕೊರೊನಾ ವೈರಸ್ ಎಷ್ಟೋ ಜನರ ಜೀವನವನ್ನು ಉಲ್ಟಾ ಮಾಡಿದೆ. ಹೊಸದಾಗಿ ಮದುವೆಯಾದ ಪುಣೆಯ ದಂಪತಿಗಳು ಕೊರೊನಾದಿಂದ ದೂರದೂರ ಆಗಿದ್ದಾರೆ.

ಪುಣೆಯ ವೈದ್ಯ ದಂಪತಿ ಸಿದ್ದಾರ್ಥ್ ಮತ್ತು ಮೋನಿಕಾ ಫೆಬ್ರವರಿ 14 ಪ್ರೇಮಿಗಳ ದಿನದ ಸಂಭ್ರಮದಲ್ಲಿ ಮದುವೆ ಆಗಿದ್ದರು. ವಿವಾಹದ ಬಳಿಕ 14 ದಿನ ವಿದೇಶಕ್ಕೆ ಹನಿಮೂನ್ ಪ್ರವಾಸ ಹೋಗಿದ್ದರು. ಅಲ್ಲಿಂದ ವಾಪಸ್ ಬಂದ ಮೇಲೆ ಭಾರತದಲ್ಲಿ ಕೊರೊನಾ ವೈರಸ್ ಹೆಚ್ಚಾಗಿದೆ. ಗಂಡ, ಹೆಂಡತಿ ಕೆಲವು ದಿನಗಳ ಕಾಲ ಬೇರೆ ಬೇರೆ ಇರುವ ಪರಿಸ್ಥಿತಿ ಎದುರಾಗಿದೆ.

ಹಲವು ದೇಶಕ್ಕೆ ಬಾಗಿಲು ಮುಚ್ಚಿದ ಭಾರತ ಆ ಒಂದು ರಾಷ್ಟ್ರಕ್ಕೆ ಅವಕಾಶ ಕೊಟ್ಟಿದ್ಯಾ?ಹಲವು ದೇಶಕ್ಕೆ ಬಾಗಿಲು ಮುಚ್ಚಿದ ಭಾರತ ಆ ಒಂದು ರಾಷ್ಟ್ರಕ್ಕೆ ಅವಕಾಶ ಕೊಟ್ಟಿದ್ಯಾ?

ಫ್ರಾನ್ಸ್, ಸ್ವಿಜರ್ಲ್ಯಾಂಡ್ ಸೇರಿದಂತೆ ಯೂರೋಪ್ ಪ್ರವಾಸಕ್ಕೆ ಸಿದ್ದಾರ್ಥ್ ಮತ್ತು ಮೋನಿಕಾ ಹೋಗಿ ಬಂದರು. ಮಾರ್ಚ್ 5 ಮುಂಬೈ ವಿಮಾನ ನಿಲ್ದಾಣದಲ್ಲಿ ಅವರಿಗೆ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗಿತ್ತು. ಆ ನಂತರ ಸಿದ್ದಾರ್ಥ್ ಆಫೀಸ್‌ಗೆ ತೆರಳಿದಿದ್ದರು. ಕೆಲ ದಿನಗಳ ಬಳಿಕ ಅವರಿಗೆ ಶೀತ ಕಾಣಿಸಿಕೊಂಡಿತು.

Young Doctor Couple Went Into Self Quarantine

ಶೀತ ಕೊರೊನಾ ಲಕ್ಷಣಗಳಲ್ಲಿ ಒಂದಾಗಿರುವ ಕಾರಣ ಅವರನ್ನು ಒಂಟಿಯಾಗಿ ಮನೆಯಲ್ಲಿಯೇ ವಾಸ (ಕ್ವಾರಂಟೈನ್) ಆಗಿ ಇಡಲಾಗಿದೆ. 14 ದಿನ ಅವರು ಏಕಾಂಗಿಯಾಗಿ ಸಿದ್ದಾರ್ಥ್ ಇರಬೇಕಿದೆ. ತಮ್ಮ ಇಂತಹ ಸ್ಥಿತಿಯನ್ನು ಅವರು ಹಂಚಿಕೊಂಡಿದ್ದು, ಆರೋಗ್ಯದ ಮಹತ್ವದ ಬಗ್ಗೆ ಹೇಳಿದ್ದಾರೆ.

ಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳ

ಸಿದ್ದಾರ್ಥ್ ಪತ್ನಿ ಮೋನಿಕಾ ಡಾಕ್ಟರ್ ಆಗಿದ್ದಾರೆ. ತಂದೆಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿಗೆ ಕ್ವಾರಂಟೈನ್ ನಲ್ಲಿ ಇಟ್ಟಿರುವ ವಿಷಯ ತಿಳಿದು ಅವರು ಅದನ್ನು ಪಾಲಿಸುವಂತೆ ತಿಳಿಸಿದ್ದಾರೆ.

English summary
Coronavirus in India : A young doctor went into self quarantine after his Europe honeymoon. They got married on February 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X