ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಟ್ಟ ಮಾತು ಮರೆತು ಹೋದಿರಲ್ಲಾ: ಸ್ಮೃತಿ ಇರಾನಿ ಭಾವುಕ ಟ್ವೀಟ್

|
Google Oneindia Kannada News

ನವದೆಹಲಿ, ಆಗಸ್ಟ್ 7: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್(67) ಅಗಲುವಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾವುಕ ಟ್ವೀಟ್ ಮಾಡಿದ್ದಾರೆ.

''ಅಕ್ಕಾ ಲಕ್ಷಾಂತರ ಮಹಿಳೆಯರಿಗೆ ಪ್ರೇರಣೆಯಾಗಿದ್ದಿರಿ, ನಿಮ್ಮ ಅಕಾಲಿಕ ನಿಧನ ನಮ್ಮಲ್ಲೆರಿಗೂ ದಿಗ್ಭ್ರಮೆ ಉಂಟು ಮಾಡಿದೆ. ಒಬ್ಬ ಸಕ್ರಿಯ ಕಾರ್ಯಕರ್ತರಾಗಿ ಮಹಿಳೆಯರ ಅಭಿವೃದ್ಧಿ ಕುರಿತು ನಮ್ಮ ಜೀವನವನ್ನು ಸಮರ್ಪಿಸಿದರೆ ಅದೇ ಸುಷ್ಮಾ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ'' ಎಂದು ಟ್ವೀಟ್ ಮಾಡಿದ್ದಾರೆ.

ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ

''ನೀವು ನನಗೊಂದು ವಚನ ನೀಡಿದ್ದಿರಿ ಆದರೆ ಅದನ್ನು ಪೂರ್ಣಗೊಳಿಸಲೇ ಇಲ್ಲ, ಅಲ್ಲೊಂದು ರೆಸ್ಟೋರೆಂಟ್ ಇದೆ ಅಲ್ಲಿ ಸೆಲೆಬ್ರಿಟಿ ಲಂಚ್‌ಗೆ ನನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಿರಿ ಆದರೆ ನೀವು ನೀಡಿದ್ದ ವಾಗ್ದಾನವನ್ನು ಪೂರ್ತಿ ಮಾಡಲೇ ಇಲ್ಲ'' ಎಂದಿದ್ದಾರೆ.

ಸುಷ್ಮಾ ಸ್ವರಾಜ್: ಇಂದಿರಾ ವಿರುದ್ದ ಪ್ರಚಾರ, ಸೋನಿಯಾ ವಿರುದ್ದ ಸ್ಪರ್ಧೆ ಸುಷ್ಮಾ ಸ್ವರಾಜ್: ಇಂದಿರಾ ವಿರುದ್ದ ಪ್ರಚಾರ, ಸೋನಿಯಾ ವಿರುದ್ದ ಸ್ಪರ್ಧೆ

ಸುಷ್ಮಾ ಸ್ವರಾಜ್ ಅವರ ಅಂತಿಮ ಯಾತ್ರೆ ಇಂದು ಮಧ್ಯಾಹ್ನ 3 ಗಂಟೆಗೆ ನೆರವೇರಲಿದೆ. ಅದಕ್ಕೂ ಮುನ್ನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮೃತದೇಹವನ್ನು ಇರಿಸಲಾಗುತ್ತದೆ.

ಅಂತ್ಯಕ್ರಿಯೆಗೂ ಮುನ್ನ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನ

ಅಂತ್ಯಕ್ರಿಯೆಗೂ ಮುನ್ನ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನ

ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಅದಕ್ಕೂ ಮುನ್ನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮೃತದೇಹವನ್ನು ಇರಿಸಲಾಗುತ್ತಿದ್ದು, ಅಂತಿಮ ದರ್ಶನವನ್ನು ಪಡೆಯಬಹುದಾಗಿದೆ.

ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು

ಸುಷ್ಮಾ ಅಂತಿಮ ದರ್ಶನ ಪಡೆದ ಗಣ್ಯರು

ಸುಷ್ಮಾ ಅಂತಿಮ ದರ್ಶನ ಪಡೆದ ಗಣ್ಯರು

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಹೇಮಾಮಾಲಿನಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇತರೆ ಗಣ್ಯರು ಸುಷ್ಮಾ ಸ್ವರಾಜ್ ಅವರ ನಿವಾಸಕ್ಕೆ ತೆರಳಿ ಅವರ ಅಂತಿಮ ದರ್ಶನ ಪಡೆದಿದ್ದಾರೆ.

ಸುಷ್ಮಾ ಸ್ವರಾಜ್ ಇನ್ನಿಲ್ಲ: ಕಂಬನಿ ಮಿಡಿದ ಕಾಂಗ್ರೆಸ್‌ ಸುಷ್ಮಾ ಸ್ವರಾಜ್ ಇನ್ನಿಲ್ಲ: ಕಂಬನಿ ಮಿಡಿದ ಕಾಂಗ್ರೆಸ್‌

ಸುಷ್ಮಾ ಸ್ವರಾಜ್ ನಿಧನಕ್ಕೆ ಕಾಂಗ್ರೆಸ್‌ ಕಂಬನಿ

ಸುಷ್ಮಾ ಸ್ವರಾಜ್ ನಿಧನಕ್ಕೆ ಕಾಂಗ್ರೆಸ್‌ ಕಂಬನಿ

ಮಾಜಿ ವಿದೇಶಾಂಗ ಸಚಿವೆ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದು, ರಾಜಕೀಯ ಎದುರಾಳಿಯ ನಿಧನಕ್ಕೆ ಕಾಂಗ್ರೆಸ್ ಕಂಬನಿ ಮಿಡಿದಿದೆ. ಸುಷ್ಮಾ ಸ್ವರಾಜ್ ಅವರ ಅಕಾಲಿಕ ನಿಧನದ ಸುದ್ದಿ ತೀವ್ರ ದುಖಃ ತಂದಿದೆ. ಅವರ ಕುಟುಂಬ ಮತ್ತು ಅವರ ಪ್ರೀತಿ ಪಾತ್ರರಿಗೆ ಸುಷ್ಮಾ ಸ್ವರಾಜ್ ಅಗಲಿಕೆಯ ನೋವು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಜೊತೆಗೆ ಸೋನಿಯಾ ಗಾಂಧಿಯವರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅವರ ಅಂತಿಮ ದರ್ಶನ ಪಡೆದರು.

ಸೋನಿಯಾ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವ ಚಾಲೆಂಜ್

ಸೋನಿಯಾ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವ ಚಾಲೆಂಜ್

ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು ಸುಷ್ಮಾ ಅವರಷ್ಟು ವಿರೋಧಿಸಿದ ಮತ್ತೊಮ್ಮ ಮಹಿಳಾ ನಾಯಕಿ ದೇಶದಲ್ಲಿರಲಿಲ್ಲ. 2004ರಲ್ಲಿ ಕಾಂಗ್ರೆಸ್ ಪಕ್ಷ ಯುಪಿಎ ಎಂಬ ಮಿತ್ರಕೂಟ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಸಿದ್ಧತೆ ನಡೆಸಿತ್ತು.

ಸೋನಿಯಾಗಾಂಧಿಯವರೇ ಪ್ರಧಾನಿಯಾಗುತ್ತಾರೆ ಎಂಬ ವರದಿಗಳು ಹರಿದಾಡುತ್ತಿದ್ದವು. ಸಂದರ್ಭದಲ್ಲಿ ಸುಷ್ಮಾ ಅವರು ಒಡ್ಡಿದ ಒಂದು ಚಾಲೆಂಜ್ ದೇಶಾದ್ಯಂತ ಭಾರಿ ಹೆಸರು ಮಾಡಿತ್ತು.
ಇಟಲಿ ಮೂಲದ ಸೋನಿಯಾ ಏನಾದರೂ ದೇಶದ ಪ್ರಧಾನಿಯಾದರೆ ತಲೆ ಬೋಳಿಸಿಕೊಂಡು ಬಿಳಿ ಸೀರೆ ಉಟ್ಟು, ಧಾನ್ಯಗಳನ್ನು ತಿಂದು ಜೀವನ ನಡೆಸುತ್ತೇನೆ ಎಂದಿದ್ದರು.

English summary
You Left Without Fulfilling Your Promise Smriti Irani Tweet, Sushma Swaraj's untimely death has left many heart broken. One of the most beloved political leaders of India, Sushma Swaraj passed away due to cardiac arrest on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X