ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಜಿದಾರರ ದಾಖಲೆಗಳನ್ನು ನೋಡಿ ಬೆಚ್ಚಿಬಿದ್ದ ನ್ಯಾಯಾಧೀಶರು

|
Google Oneindia Kannada News

ನವದೆಹಲಿ, ಆಗಸ್ಟ್‌ 06: ಒಂದೇ ಪ್ರಕರಣದಲ್ಲಿ 51 ದಾಖಲೆಗಳನ್ನು ಸಲ್ಲಿಸುವ ಮೂಲಕ ನೀವು ನಮ್ಮನ್ನು ಭಯಭೀರತನ್ನಾಗಿಸಿದ್ದೀರಿ ಎಂದು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಹೇಳಿದೆ.

ನ್ಯಾ. ಎನ್ ರಮಣ ಮತ್ತು ನ್ಯಾ. ಸೂರ್ಯಕಾಂತ್ ಅವರ ಪೀಠವು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹೊರಡಿಸಿರುವ ಹೊಸ ಸುಂಕದ ಆದೇಶಕ್ಕೆ ಸಂಬಂಧಿಸಿದ ಪ್ರಕರಣದ ಅರ್ಜಿದಾರರಿಗೆ ಹೇಳಿತು.

ಒಂದೇ ಪ್ರಕರಣಕ್ಕೆ ನೀವು 51 ದಾಖಲೆಗಳನ್ನು ಹೇಗೆ ಸಲ್ಲಿಸಿದಿರಿ, ನಿನ್ನೆ ನಾವು ಇದನ್ನು ಸಾಗಿಸಲು ಲಾರಿಯನ್ನು ತೆಗೆದುಕೊಂಡು ಬರಬೇಕಾಗುತ್ತದೆ.ಒಂದೇ ಪ್ರಕರಣದಲ್ಲಿ 51 ವಾಲ್ಯೂಮ್‌ಗಳನ್ನು ಸಲ್ಲಿಸುವ ಮೂಲಕ ನೀವು ನಮ್ಮನ್ನು ಭಯಭೀತಗೊಳಿಸಿದ್ದೀರಿ ಎಂದು ಸಿಜೆಐ ಟೀಕಿಸಿದ್ದಾರೆ.

You Are Terrorising Us By Filing 51 Volumes In A Single Case: SC

ನ್ಯಾಯಾಲಯವು ಬಾಂಬೆ ಹೈಕೋರ್ಟ್‌ನ ಜೂನ್ 30ರ ತೀರ್ಪಿನ ವಿರುದ್ಧದ ಮೇಲ್ಪನವಿಯನ್ನು ವಿಚಾರಣೆಗೆ ಒಳಪಡಿಸಿತು. ಒಂದು ಚಾನೆಲ್‌ನ ದರವು ಗುಚ್ಚದಲ್ಲಿ ಅತ್ಯಂತ ಹೆಚ್ಚಿನ ದರದ ಚಾನೆಲ್‌ನ ಮೂರನೇ ಒಂದಕ್ಕಿಂತ ಹೆಚ್ಚಿರಬಾರದು ಎಂಬ ಕಳೆದ ವರ್ಷದ ಟ್ರಾಯ್‌ನ ಶುಲ್ಕ ಆದೇಶದಲ್ಲಿನ ಷರತ್ತನ್ನು ರದ್ದುಗೊಳಿಸಿರುವ ಬಾಂಬೆ ಉಚ್ಚ ನ್ಯಾಯಾಲಯವು ಉಳಿದಂತೆ ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ.

2020 ಜ.1ರಂದು ಟ್ರಾಯ್ ಹೊರಡಿಸಿದ್ದ ನೂತನ ಶುಲ್ಕ ನಿಯಮಗಳಂತೆ ನೆಟ್‌ವರ್ಕ್ ಸಾಮರ್ಥ್ಯ ಶುಲ್ಕವನ್ನು ತಗ್ಗಿಸಲಾಗಿತ್ತು ಮತ್ತು ಇದು ಬಳಕೆದಾರರಿಗೆ ಲಾಭದಾಯಕವಾಗಿತ್ತು.

ಹಿಂದೆ 130ರೂ.ಗಳಿಗೆ ಎಲ್ಲಾ ಉಚಿತ ಚಾನೆಲ್‌ಗಳು ಲಭ್ಯವಾಗುತ್ತಿದ್ದು, ಬಳಕೆದಾರರು ಹೆಚ್ಚುವರಿ ಚಾನೆಲ್‌ಗಳನ್ನು ವೀಕ್ಷಿಸಲು ಹೆಚ್ಚಿನ ಹಣವನ್ನು ಪಾವತಿಸಬೇಕಿತ್ತು.

ಆದರೆ ನೂತನ ಶುಲ್ಕ ನಿಯಮಗಳಡಿ ಬಳಕೆದಾರರು 130ರೂ.ಗಳನ್ನು ಪಾವತಿಸಿದರೆ 200 ಚಾನೆಲ್‌ಗಳು ಲಭ್ಯವಾಗುತ್ತಿದ್ದವು. ಪ್ರತಿ ಚಾನೆಲ್‌ನ ಶುಲ್ಕಗಳಲ್ಲಿ ಬದಲಾವಣೆಗಳನ್ನು ಮಾಡಲು ಟ್ರಾಯ್ ಆದೇಶಿಸಿತ್ತು.

ನೂತನ ನಿಯಮಗಳು ನಿರಂಕುಶ ಮತ್ತು ಅಸಮಂಜಸವಾಗಿವೆ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಉದ್ಯಮ ಪಾಲುದಾರರು ತೀರ್ಪನ್ನು ಅಧ್ಯಯನ ಮಾಡುವಂತಾಗಲು ಮತ್ತು ತಮ್ಮ ಭವಿಷ್ಯದ ಕ್ರಮವನ್ನು ಕೈಗೊಳ್ಳದಂತೆ ಟ್ರಾಯ್‌ಗೆ ನಿರ್ದೇಶಿಸಿ ಕಳೆದ ವರ್ಷದ ಆಗಸ್ಟ್‌ ಮತ್ತು ಅಕ್ಟೋಬರ್‌ನಲ್ಲಿ ಉಚ್ಚ ನ್ಯಾಯಾಲವು ನೀಡಿದ್ದ ಆದೇಶಗಳನ್ನು ವಿಸ್ತರಿಸುವಂತೆ ಅರ್ಜಿದಾರರು ಕೋರಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ತನ್ನ ಆದೇಶಗಳ ಅವಧಿಯನ್ನು ಆರು ವಾರಗಳ ಕಾಲ ವಿಸ್ತರಿಸಿತ್ತು.

ಈ ಹಿಂದೆ ಗ್ರಾಹಕರು ತಾವು ನೋಡದ ಚಾನಲ್‌ಗಳಿಗೂ ಹಣ ಪಾವತಿಸಬೇಕಿತ್ತು. ಅದನ್ನು ತಪ್ಪಿಸಲೆಂದು ಕಳೆದ ವರ್ಷ ಏಪ್ರಿಲ್‌ನಲ್ಲಿ ಟ್ರಾಯ್‌ ಜಾರಿಮಾಡಿದ ನಿಯಮದಿಂದ ಗ್ರಾಹಕರಿಗೆ ನಿರೀಕ್ಷಿಸಿದಷ್ಟು ಅನುಕೂಲವಾಗಿರಲಿಲ್ಲ.

ನೀವು ನೋಡುವ ಚಾನಲ್‌ಗಳಿಗಷ್ಟೇ ಹಣ ಕೊಡಿ ಎಂಬ ಸೂತ್ರದ ಮೇಲೆ ಟ್ರಾಯ್‌ ಹೊಸ ದರ ನಿಯಮ ಜಾರಿಗೆ ತಂದಿತ್ತು. ಆದರೆ, ದರ ವ್ಯವಸ್ಥೆ ಬದಲಾದರೂ ಮಾಸಿಕ ಶುಲ್ಕ ಕಡಿಮೆ ಮಾಡದ ಕೇಬಲ್‌ ಆಪರೇಟರ್‌ಗಳು ಗ್ರಾಹಕರಿಂದ ಮೊದಲಿಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರು.

ಯಾರಿಗೆ ಏನು ಉಪಯೋಗ? ಗ್ರಾಹಕರಿಗೆ ಆಗುವ ಅನುಕೂಲ

ಹಳೇ ದರಕ್ಕೆ 200 ಚಾನಲ್‌ಗಳು ಉಚಿತವಾಗಿ ಸಿಗುತ್ತವೆ.

ತನಗೆ ಬೇಕಾದ ಚಾನಲ್‌ಗೆ ಮಾತ್ರ ಹಣ ಪಾವತಿಸುತ್ತಾನೆ, ಇದರಿಂದ ದುಂದುವೆಚ್ಚ ತಪ್ಪಿಸಬಹುದು.

ಅನಗತ್ಯವಾಗಿ ಪ್ರಸಾರ ಆಗುವ ಚಾನಲ್‌ಗಳ ಕಿರಿಕಿರಿಯಿಂದ ಮುಕ್ತವಾಗಬಹುದು.

ಒಂದಕ್ಕಿಂತ ಹೆಚ್ಚು ಟೀವಿ ಕನೆಕ್ಷನ್‌ ಹೊಂದಿರುವ ಚಂದಾದಾರರಿಗೆ ಹೆಚ್ಚುವರಿ ಕನೆಕ್ಷನ್‌ಗಳ ದರ ಕಡಿಮೆಯಾಗುತ್ತದೆ.

ಟೀವಿ ಚಾನಲ್‌ಗಳಿಗೆ ಆಗುವ ಲಾಭ

ಚಾನಲ್‌ಗಳ ಪ್ರಸಾರಕರು ತಮ್ಮ ಚಾನಲ್‌ಗೆ ತಾವೇ ಮೌಲ್ಯ ನಿಗದಿಪಡಿಸಬಹುದು ಅಥವಾ ಉಚಿತವಾಗಿ ನೀಡಬಹುದು.

ಗ್ರಾಹಕನಿಗೆ ನೇರವಾಗಿ ಅದೇ ಬೆಲೆಗೆ ಚಾನಲ್‌ ತಲುಪುತ್ತದೆ.

ಇದರಿಂದ ಚಾನಲ್‌ ಪ್ರಸಾರಕರಿಗೆ ನಿರ್ದಿಷ್ಟಆದಾಯ ಹರಿದುಬರಲಿದೆ.

ಡಿಸ್ಟ್ರಿಬ್ಯೂಟರ್‌ಗೆ ಸಿಗುವ ಅನುಕೂಲ

ವಿತರಕ ಬ್ರಾಡ್‌ಕಾಸ್ಟರ್‌ರೊಂದಿಗೆ (ಟೀವಿ ಚಾನಲ್‌) ನೇರ ಒಪ್ಪಂದ ಮಾಡಿಕೊಂಡು ಚಾನಲ್‌ ನೀಡಬೇಕು. ಕಾನೂನಿಗೆ ವಿರುದ್ಧವಾಗಿ ಚಾನಲ್‌ ಪ್ರಸಾರ ಮಾಡಲು ಅವಕಾಶವಿರುವುದಿಲ್ಲ.

ಪ್ರಸಾರಕ ವಿತರಕನಿಗೆ ನೇರವಾಗಿ ಹಣ ಸಂದಾಯ ಮಾಡುತ್ತಾನೆ ಅಥವಾ ಆತ ಗ್ರಾಹಕನಿಗೆ ವಿಧಿಸುವ ಹಣದಲ್ಲಿಯೇ ವಿತರಕನಿಗೆ ಒಂದು ಭಾಗವನ್ನು ನೀಡುತ್ತಾನೆ.

Recommended Video

ಶ್ರೀಲಂಕಾದಲ್ಲಿ ಆಹಾರಕ್ಕೆ ಹಾಹಾಕಾರ: ಆರ್ಥಿಕ ಬಿಕ್ಕಟ್ಟಿನಿಂದ ತುರ್ತುಪರಿಸ್ಥಿತಿ ಘೋಷಣೆ | Oneindia Kannada

ವಿತರಕ ತನ್ನ ಸೇವೆಯನ್ನು ಮತ್ತಷ್ಟುಉನ್ನತೀಕರಿಸುವ ಅವಕಾಶವನ್ನು ಹೊಂದಿರುತ್ತಾನೆ.

English summary
The Supreme Court on Friday rebuked a litigant for filing voluminous documents running into 51 volumes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X