ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಯೆಲ್ಲೋ ಅಲರ್ಟ್: ವಾಯುಮಾಲಿನ್ಯ ಉತ್ತುಂಗ

|
Google Oneindia Kannada News

ನವದೆಹಲಿ ಡಿಸೆಂಬರ್ 26: ದಿನೇ ದಿನೇ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕೆ ಬರುವಂತೆ ಲಕ್ಷಣಗಳು ಕಾಣಿಸುತ್ತಿಲ್ಲ. ಭಾನುವಾರವೂ ದೆಹಲಿಯ ಗಾಳಿಯ ಗುಣಮಟ್ಟ ತುಂಬಾ ಕಳಪೆಯಾಗಿದೆ. ಇಂದು ಮಾಲಿನ್ಯ ಗರಿಷ್ಠ ಮಟ್ಟದಲ್ಲಿದೆ. ಇಂದು ರಾಜಧಾನಿಯ AQI 430 ಆಗಿದ್ದು ಇದು ಅತ್ಯಂತ ಕಳಪೆ ವಿಭಾಗದಲ್ಲಿ ಬರುತ್ತದೆ. ದೀಪಾವಳಿಯ ನಂತರ ಹೆಚ್ಚುತ್ತಿರುವ ದೆಹಲಿ ವಾಯುಮಾಲಿನ್ಯ ಕಡಿಮೆಯಾಗುತ್ತಿಲ್ಲ. ಮೇಲಿಂದ ಮೇಲೆ ಹೆಚ್ಚುತ್ತಿರುವ ಚಳಿ ಮತ್ತು ಮಂಜು ದೆಹಲಿಯ ಜನರ ತೊಂದರೆಯನ್ನು ಹೆಚ್ಚಿಸಿದೆ. ಅಧಿಕ ಶೀತದಿಂದಾಗಿ ವಾತಾವರಣದ ಗಡಿ ಪದರವು ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದಾಗಿ ಗಾಳಿಯ ವೇಗವು ಗಮನಾರ್ಹವಾಗಿ ಕಡಿಮೆಯಾಗುತ್ತಿದೆ. ಇದರಿಂದಾಗಿ ಮಾಲಿನ್ಯವು ಹೆಚ್ಚಾಗುತ್ತದೆ.

ಯೆಲ್ಲೋ ಅಲರ್ಟ್: ರಾಷ್ಟ್ರ ರಾಜದಾನಿಯಲ್ಲಿ ಇಂದು ಲಘು ಮಳೆಯಾಗುವ ಸಾಧ್ಯತೆ ಇರುವುದರಿಂದ ಇಂದಿನಿಂದ ದೆಹಲಿಯ ಸ್ಥಿತಿ ಸುಧಾರಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಬೆಳಗ್ಗೆಯಿಂದಲೇ ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದೆ. ಹೀಗಾಗಿ IMD ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ದೆಹಲಿ ತಾಪಮಾನ ಉಳಿಕೆಯಾಗುವ ಸಾಧ್ಯತೆ: ಒಂದು ವೇಳೆ ಮಳೆಯಾದರೆ ಸಹಜವಾಗಿಯೇ ಚಳಿ ಹೆಚ್ಚಾಗಿ ಮಾಲಿನ್ಯ ಪ್ರಮಾಣ ಕಡಿಮೆಯಾಗಲಿದೆ ಎನ್ನುತ್ತಿದೆ IMD ಹೇಳಿದೆ. ಇಂದು ದೆಹಲಿಯ ಕನಿಷ್ಠ ತಾಪಮಾನವು 8 ಡಿಗ್ರಿಗಳಷ್ಟು ಇರಬಹುದೆಂದು ಅಂದಾಜಿಸಲಾಗಿದೆ.

ತುಂಬಾ ಕಳಪೆ ಯಾವ ಪ್ರದೇಶ?

ತುಂಬಾ ಕಳಪೆ ಯಾವ ಪ್ರದೇಶ?

ಪುಸಾ, ದೆಹಲಿ - 463 AQI ತುಂಬಾ ಕಳಪೆಯಾಗಿದೆ

ಪಂಜಾಬಿ ಬಾಗ್-483 AQI⁠ ತುಂಬಾ ಕೆಟ್ಟದು

ಶಾದಿಪುರ್, ದೆಹಲಿ - 467 AQI ತುಂಬಾ ಕಳಪೆಯಾಗಿದೆ

ದೆಹಲಿ ಮಿಲ್ಕ್ ಸ್ಕೀಮ್ ಕಾಲೋನಿ 423 AQI ತುಂಬಾ ಕಳಪೆಯಾಗಿದೆ

ಅಶೋಕ್ ವಿಹಾರ್ ದೆಹಲಿ 482 AQI ಅತ್ಯಂತ ಕಳಪೆಯಾಗಿದೆ

NSIT ದ್ವಾರಕಾ, 462 AQI ತುಂಬಾ ಕಳಪೆಯಾಗಿದೆ

ಲೋಧಿ ರಸ್ತೆ, 451 AQI ತುಂಬಾ ಕೆಟ್ಟದಾಗಿದೆ

ಎನ್‌ಸಿಆರ್ ಪ್ರದೇಶ?

ಎನ್‌ಸಿಆರ್ ಪ್ರದೇಶ?

ಗುರುಗ್ರಾಮ್‌ನಲ್ಲಿ AQI 412

ಫರಿದಾಬಾದ್‌ನಲ್ಲಿ AQI 387

ಗಾಜಿಯಾಬಾದ್‌ನಲ್ಲಿ AQI 349

ಗ್ರೇಟರ್ ನೋಯ್ಡಾದಲ್ಲಿ AQI 354

ಮೊರಾದಾಬಾದ್‌ನಲ್ಲಿ AQI 338

ಆಗ್ರಾದಲ್ಲಿ AQI 365

ಜೈಪುರದಲ್ಲಿ AQI 349

ಲಕ್ನೋದಲ್ಲಿ AQI 368

ಅಂಬಾಲಾದಲ್ಲಿ AQI 323

ದೆಹಲಿಯಲ್ಲಿ ಮಂಜು

ದೆಹಲಿಯಲ್ಲಿ ಮಂಜು

ದೆಹಲಿಯಲ್ಲಿ ಬೆಳಗ್ಗೆ 8 ಗಂಟೆವರೆಗೂ ಮಂಜು ಕವಿದಿದೆ. ವಾಯುಮಾಲಿನ್ಯದಿಂದಾಗಿ ದೆಹಲಿಯಲ್ಲಿ ಹವಾಮಾನ ಹದಗೆಡಬಹುದು ಮತ್ತು ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದು ಚಳಿಗಾಲವನ್ನು ಹೆಚ್ಚಿಸಲಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಚಳಿಯಾಗಲಿದೆ ಹಾಗಾಗಿ ಆರೋಗ್ಯದ ಬಗ್ಗೆ ಎಲ್ಲರೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

ವಾಯು ಮಾಲಿನ್ಯ ನಿಯಮಗಳ ಬಹಿರಂಗ ಉಲ್ಲಂಘನೆ

ವಾಯು ಮಾಲಿನ್ಯ ನಿಯಮಗಳ ಬಹಿರಂಗ ಉಲ್ಲಂಘನೆ

ನಿರ್ಮಾಣ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸುಪ್ರೀಂ ಕೋರ್ಟ್ ಆದೇಶದ ಬಹಿರಂಗ ಉಲ್ಲಂಘನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ತನಿಖಾ ವರದಿಯ ಪ್ರಕಾರ, ನವದೆಹಲಿಯ ನೇತಾಜಿ ನಗರದಲ್ಲಿ ಡಿಸೆಂಬರ್ 16 ರಂದು ಮುಂಜಾನೆ 4 ರ ಸುಮಾರಿಗೆ, ಎರ್ತ್ ಮೂವರ್ಸ್, ಡ್ರಿಲ್ಲಿಂಗ್ ಮೆಷಿನ್‌ಗಳು ಮತ್ತು ಜನರೇಟರ್‌ಗಳು ಹ್ಯಾಲೊಜೆನ್ ದೀಪಗಳ ಅಡಿಯಲ್ಲಿ ಪೂರ್ಣ ಸ್ವಿಂಗ್‌ನಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಇದೇ ರೀತಿಯ ದೃಶ್ಯಗಳು ದೆಹಲಿಯ ವಜೀರಾಬಾದ್ ಸೇತುವೆಯಲ್ಲಿ ಡಿಸೆಂಬರ್ 16 ರಂದು ಬೆಳಗಿನ ಜಾವ 2 ರ ಸುಮಾರಿಗೆ ಕಂಡುಬಂದವು. ಮೆಟ್ರೋ ಪಿಲ್ಲರ್‌ಗಳ ಕಾಮಗಾರಿ ಹಾನಿಕಾರಕ ಕಪ್ಪು ಹೊಗೆಯನ್ನು ಹೊರಸೂಸುವುದು ಕಂಡುಬಂದಿದೆ. ಸಾರಿಗೆ ಅಧಿಕಾರಿಗಳು ಮತ್ತು ಪೊಲೀಸರು ಲಂಚ ಪಡೆದು ಮಾಲಿನ್ಯಕಾರಕ ಡೀಸೆಲ್ ಟ್ರಕ್‌ಗಳನ್ನು ದೆಹಲಿಗೆ ಪ್ರವೇಶಿಸಲು ಅನುಮತಿಸುತ್ತಿದ್ದಾರೆ ಎಂದು ಇಂಡಿಯಾ ಟುಡೇ ಟಿವಿ ತನಿಖೆಯಿಂದ ತಿಳಿದುಬಂದಿದೆ.

English summary
Delhi's air quality remained very poor on Sunday as well and pollution was at peak levels. Even today the AQI of Rajdhani is 430 which comes in the very poor category.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X