ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಹುದ್ದೆ ಮೇಲೆ ಕಣ್ಣು: ಆಸೆ ಹೊರಹಾಕಿದ ಯಶವಂತ್ ಸಿನ್ಹಾ

|
Google Oneindia Kannada News

ನವದೆಹಲಿ, ಜನವರಿ 21: ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ವಿರೋಧ ಪಕ್ಷಗಳ ಆರೋಪ, ಪ್ರತಿಭಟನೆಗಳಿಗೆ ಬಲ ನೀಡಿರುವ ಬಿಜೆಪಿಯ ಮಾಜಿ ಮುಖಂಡರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ತಮ್ಮ ಮುಂದಿನ ರಾಜಕೀಯ ಗತಿಯನ್ನು ಬದಲಿಸಲು ಈ 'ಮೋದಿ ವಿರೋಧಿ' ನೀತಿಗೆ ಅಂಟಿಕೊಂಡಿದ್ದಾರೆಯೇ?

ಯಶವಂತ್ ಸಿನ್ಹಾ ಅವರ ರಾಜಕೀಯ ಆಕಾಂಕ್ಷೆ ಈ ಅನುಮಾನಗಳನ್ನು ಹೆಚ್ಚಿಸುತ್ತದೆ. ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.

ಮಮತಾ ಬ್ಯಾನರ್ಜಿ ಉತ್ತಮ ಪ್ರಧಾನಿಯಾಗಬಲ್ಲರು: ಯಶವಂತ್ ಸಿನ್ಹಾಮಮತಾ ಬ್ಯಾನರ್ಜಿ ಉತ್ತಮ ಪ್ರಧಾನಿಯಾಗಬಲ್ಲರು: ಯಶವಂತ್ ಸಿನ್ಹಾ

ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು ಸೂಕ್ತ ಹಾದಿಗೆ ಕೊಂಡೊಯ್ಯುವ ಸಾಮರ್ಥ್ಯ ಇರುವ ಹೊಸ ಪ್ರಧಾನಿ ಯಾರಿದ್ದಾರೆ ಎಂಬ ಪ್ರಶ್ನೆಗೆ ಯಶವಂತ್ ಸಿನ್ಹಾ 'ನಾನು ಸಮೀಪವಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

Yashwant Sinha next prime minister i am the closest bjp rebel

ದೆಹಲಿ ವಿಶ್ವವಿದ್ಯಾಲಯದ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯೋಗ ಸೃಷ್ಟಿಯ ಸಾಧ್ಯತೆಯ ಕನಸುಗಳ ಬಗ್ಗೆ ಅವರು ಮಾತನಾಡಿದರು.

'ನೀವು 1.2 ಕೋಟಿ ಉದ್ಯೋಗದ ಬಗ್ಗೆ ಮಾತನಾಡುತ್ತೀರಿ. ನಾನು ನಿರ್ಮಿಸಬೇಕಾದ ಮಿಲಿಯನ್‌ಗಟ್ಟಲೆ ಕಿಲೋಮೀಟರ್‌ಗಳ ಬಗ್ಗೆ ಮಾತನಾಡುತ್ತೇನೆ. ಕೃಷಿ, ನೀರಾವರಿ ಯೋಜನೆಗಳು, ಸಂಗ್ರಹ ಸಂಸ್ಕರಣೆ ಮತ್ತು ಟೌನ್‌ಶಿಪ್‌ಗಳನ್ನು ಮಾಡಬೇಕಿದೆ. ಈ ಕೆಲಸಗಳನ್ನು ನಾವು ಮಾಡುತ್ತಾ ಹೋದಂತೆ 1.2 ಕೋಟಿಯಲ್ಲ, ಎರಡು ಮೂರು ಕೋಟಿ ಉದ್ಯೋಗಗಳನ್ನು ಪ್ರತಿವರ್ಷ ಸೃಷ್ಟಿಸಬಹುದು. ಆದರೆ ನಾವು ಅದನ್ನು ಮಾಡುತ್ತಿಲ್ಲ. ಅದೇ ನಿಜವಾದ ಸಮಸ್ಯೆ. ಈ ಸಿದ್ಧಾಂತವನ್ನು ಅಳವಡಿಸಲು ಸಿದ್ಧನಾಗಿರುವ ವ್ಯಕ್ತಿಯನ್ನು ನಾವು ಹುಡುಕಬೇಕು.'

ರಫೇಲ್ ತೀರ್ಪು: ಮೇಲ್ಮನವಿ ಸಲ್ಲಿಸಲಿರುವ ಅರುಣ್ ಶೌರಿ, ಯಶವಂತ್ ಸಿನ್ಹಾರಫೇಲ್ ತೀರ್ಪು: ಮೇಲ್ಮನವಿ ಸಲ್ಲಿಸಲಿರುವ ಅರುಣ್ ಶೌರಿ, ಯಶವಂತ್ ಸಿನ್ಹಾ

'ಯಾರು ಆ ವ್ಯಕ್ತಿ?'

'ಅದಕ್ಕೆ ಸಮೀಪ ಯಾರಿದ್ದಾರೆ? ಅದಕ್ಕೆ ಹತ್ತಿರ ಇರುವುದು ನಾನು, ನಾನೇ'.

ಸಿನ್ಹಾ ಹೀಗೆ ನಗುತ್ತಾ ಹೇಳಿದಾಗ ಸಭಾಂಗಣದಲ್ಲಿ ಕುಳಿತಿದ್ದವರೆಲ್ಲ ನಗುವಿನ ಅಲೆ ಎಬ್ಬಿಸಿದರು.

ನಿತಿನ್ ಗಡ್ಕರಿ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ನರಕದಲ್ಲಿಯೂ ಭರವಸೆ ಇಲ್ಲ. ಏಕೆಂದರೆ, ಈಗಿನ ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷರು ಪಕ್ಷದ ಮೇಲೆ ಹೊಂದಿರುವ ಬಿಗಿ ಹಿಡಿತ ಹಾಗಿದೆ. ಒಂದು ವೇಳೆ ಅವರು ಸೋತರೂ, 200ಕ್ಕಿಂತ ಕಡಿಮೆ ಸೀಟು ಬಂದರೂ ಅವರು ಪಕ್ಷದ ನಾಯಕತ್ವವನ್ನು ತ್ಯಜಿಸುವುದಿಲ್ಲ ಎಂದು ಸಿನ್ಹಾ ಹೇಳಿದರು.

English summary
BJP Former leader, ex finance minister Yashwanth Sinha said indirectly that he is also a aspirant of Prime Minister chair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X