ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇ-ಮೇಲ್‌ಗಳು ಸ್ಕರ್ಟ್ ನಂತೆ ಶಾರ್ಟ್ ಆಗಿರ್ಬೇಕು'

'ಇ-ಮೇಲ್‌ಗಳು ಸ್ಕರ್ಟ್ ನಂತೆ ಶಾರ್ಟ್ ಆಗಿರ್ಬೇಕು, ಆಕರ್ಷಕವಾಗಿರಬೇಕು' ಎಂದು ಬಿ.ಕಾಂ (ಆನರ್ಸ್‌) ಪಠ್ಯದಲ್ಲಿ ಮುದ್ರಣಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 08: 'ಇ-ಮೇಲ್‌ಗಳು ಎಷ್ಟು ಶಾರ್ಟ್ ಮತ್ತು ಆಕರ್ಷಕವಾಗಿರಬೇಕು ಎಂದರೆ ಮಿನಿ ಸ್ಕರ್ಟ್‌ನಂತಿರಬೇಕು' ಎಂದು ಬಿಕಾಂ (ಆನರ್ಸ್‌) ಪಠ್ಯದಲ್ಲಿ ಮುದ್ರಣಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ದೆಹಲಿ ವಿಶ್ವವಿದ್ಯಾನಿಲಯದ ಮಾನ್ಯತೆ ಹೊಂದಿರುವ ಕಾಲೇಜಿನ ವಾಣಿಜ್ಯ ವಿಭಾಗದ ಮಾಜಿ ಮುಖ್ಯಸ್ಥ ಸಿ.ಬಿ.ಗುಪ್ತಾ ಬರೆದಿರುವ ಪಠ್ಯ ಪುಸ್ತಕ ಈಗ ಚರ್ಚೆಯ ವಿಷಯವಾಗಿದೆ.

Write e-mails as short as skirts: DU textbook causes a stir

'ಬೇಸಿಕ್ ಬ್ಯುಸಿನೆಸ್ ಕಮ್ಯುನಿಕೇಶನ್' ಪಠ್ಯದಲ್ಲಿ ಇಮೇಲ್ ಬಗ್ಗೆ ವಿವರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ದೆಹಲಿ ವಿವಿ ಕಾಲೇಜುಗಳಲ್ಲಿ ಈ ಪಠ್ಯ ಬಳಸುವಂತೆ ವಿದ್ಯಾರ್ಥಿಗಳಿಗೆ ಬಹುತೇಕ ಪ್ರಾಧ್ಯಾಪಕರು ಶಿಫಾರಸು ಮಾಡಿದ್ದಾರೆ.

ಕಳೆದ ಹತ್ತು ವರ್ಷಗಳಿಂದಲೂ ಈ ಪುಸ್ತಕ ಬಳಕೆಯಲ್ಲಿದ್ದು, "ಇ-ಮೇಲ್ ಸಂದೇಶಗಳು ಸ್ಕರ್ಟ್ ನಂತೆ ಇರಬೇಕು. ಅಸಕ್ತಿದಾಯಕವಾಗುವಷ್ಟು ಗಿಡ್ಡ ಹಾಗೂ ಎಲ್ಲ ಅಂಶಗಳನ್ನೂ ಮುಚ್ಚುವಷ್ಟು (ಒಳಗೊಳ್ಳುವಷ್ಟು) ಉದ್ದ ಇರಬೇಕು" ಎಂದು ವಿವರಿಸಲಾಗಿದೆ.

'ಇದು ಸಮಾಜದಲ್ಲಿ ಸೆಕ್ಸಿಸಂ ಅಧಿಕೃತಗೊಳಿಸುವ ಪ್ರಯತ್ನ' ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ. ವಿದೇಶಿ ಲೇಖಕರು ಬರೆದ ಈ ವಿವರಣೆಯನ್ನು ಪಠ್ಯದಿಂದ ಕಿತ್ತು ಹಾಕಲಾಗಲು ಪಬ್ಲಿಷರ್ಸ್ ಗೆ ಸೂಚಿಸಲಾಗಿದೆ ಎಂದು ಸಿ.ಬಿ.ಗುಪ್ತಾ ಹೇಳಿದ್ದಾರೆ.

English summary
A textbook has advised students to write emails as short as skirts. The B.Com (Honours) textbook advises students to write emails short enough to be interesting like skirts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X