ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಕಿಲ್ ಇಂಡಿಯಾ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತು

|
Google Oneindia Kannada News

ನವದೆಹಲಿ, ಜುಲೈ.15: ವಿಶ್ವ ಯುವ ಕೌಶಲ್ಯ ದಿನಾಚರಣೆಯ ಹಿನ್ನೆಲೆ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಮೂಲದ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕೇಂದ್ರ ಸರ್ಕಾರವು ಸ್ಕಿಲ್ ಇಂಡಿಯಾ ಮಿಷನ್ ಪ್ರಾರಂಭಿಸಿ ಇಂದಿಗೆ ಐದು ವರ್ಷಗಳು ಪೂರೈಸಿದ್ದು, 5ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಮೇಲೆ ಇಡೀ ದೇಶದ ಲಕ್ಷ್ಯ ನೆಟ್ಟಿದೆ. ಈ ಸಂದರ್ಭವನ್ನು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಡಿಜಿಟಲ್ ಕಾನ್ಕ್ಲೇವ್ ಆಯೋಜಿಸಿದೆ.

ಭಾರತದಲ್ಲಿ ಮುಂದಿನ 5-7 ವರ್ಷದಲ್ಲಿ 75,000 ಕೋಟಿ ಹೂಡಿಕೆ: ಗೂಗಲ್‌ ಸಿಇಒ ಸುಂದರ್ ಪಿಚೈಭಾರತದಲ್ಲಿ ಮುಂದಿನ 5-7 ವರ್ಷದಲ್ಲಿ 75,000 ಕೋಟಿ ಹೂಡಿಕೆ: ಗೂಗಲ್‌ ಸಿಇಒ ಸುಂದರ್ ಪಿಚೈ

ಸ್ಕಿಲ್ ಇಂಡಿಯಾ ಎನ್ನುವುದು ಭಾರತ ಸರ್ಕಾರದ ಒಂದು ಉಪಕ್ರಮವಾಗಿದ್ದು, ದೇಶದ ಯುವಜನರನ್ನು ಕೌಶಲ್ಯ ಸಮೂಹಗಳೊಂದಿಗೆ ಸಬಲೀಕರಣಗೊಳಿಸಲು ಪ್ರಾರಂಭಿಸಲಾಗಿದೆ. ಇದರಿಂದ ಅಧಿಕ ಉದ್ಯೋಗ ಸೃಷ್ಟಿ ಜೊತೆಗೆ ಉತ್ಪಾದಕತೆ ಪ್ರಮಾಣವನ್ನು ಹೆಚ್ಚಿಸುತ್ತದೆ.

World Youth Skills day: Prime Minister Narendra Modi To Deliver Video Address On Occasion On July 15

ಸ್ಕಿಲ್ ಇಂಡಿಯಾ ಅಡಿ ಶಿಕ್ಷಣ:

ದೇಶದಲ್ಲಿ ಸ್ಕಿಲ್ ಇಂಡಿಯಾ ಯೋಜನೆ ಅಡಿಯಲ್ಲಿ ಹಲವು ವಲಯಗಳಲ್ಲಿ ಶಿಕ್ಷಣವನ್ನು ನೀಡುತ್ತದೆ. ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನಡಿಯಲ್ಲಿ ಉದ್ಯಮ ಮತ್ತು ಸರ್ಕಾರ ಎರಡರಿಂದಲೂ ಗುರುತಿಸಲ್ಪಟ್ಟ ಮಾನದಂಡಗಳಿಗೆ ಹೊಂದಿಕೆಯಾಗುತ್ತವೆ.

ಕೋರ್ಸ್‌ಗಳು ವ್ಯಕ್ತಿಯ ಕೆಲಸದ ಪ್ರಾಯೋಗಿಕ ವಿತರಣೆಯತ್ತ ಗಮನಹರಿಸಲು ಸಹಾಯ ಮಾಡುತ್ತದೆ. ಜೊತೆಗೆ ಆತನ ತಾಂತ್ರಿಕ ಪರಿಣತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಕಂಪನಿಯು ಆತನಿಗೆ ಕೆಲಸದ ತರಬೇತಿ ನೀಡುವುದಕ್ಕೆ ಹಣವನ್ನು ವ್ಯಯ ಮಾಡುವ ಅಗತ್ಯವಿರುವುದಿಲ್ಲ. ಬದಲಿಗೆ ಆತನ ಪ್ರೊಫೈಲ್ ಆಧಾರದಲ್ಲೇ ವ್ಯಕ್ತಿಯ ಸಾಮರ್ಥ್ಯವನ್ನು ಆಧರಿಸಿ ಉದ್ಯೋಗಕ್ಕೆ ನೇಮಿಸಿಕೊಳ್ಳಲು ಸಾಧ್ಯವಾಗುತ್ತದೆ.

English summary
World Youth Skills day: Prime Minister Narendra Modi To Deliver Video Address On Occasion On July 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X