• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ವಿಟ್ಟರ್ ಲೋಕ- ಮೋದಿ ನಾಗಾಲೋಟ: 6 ರಿಂದ 4ಕ್ಕೆ ಜಿಗಿತ

By Srinath
|

ನವದೆಹಲಿ, ಜೂನ್ 26: ದೇಶದ ಪ್ರಧಾನಿಯಾಗಿ ಒಂದು ತಿಂಗಳನ್ನು ಪೂರೈಸುತ್ತಿರುವ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರಿದ ದಿನದಿಂದ ಒಂದೇ ಸಮನೆ ಅನಾಕಾನೇಕ ದಾಖಲೆಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ.

ಮಾಧ್ಯಮದ ಜತೆಗಿನ ತಮ್ಮ ಸಂವಾದವನ್ನು ಟ್ವಿಟ್ಟರ್/ ಫೇಸ್ ಬುಕ್ ಗೆ ಸೀಮಿತಗೊಳಿಸಿರುವ ಪ್ರಧಾನಿ ಮೋದಿ ಅವರು ದಿನೇ ದಿನೆ ಹೆಚ್ಚು ಜನಪ್ರಿಯವಾಗುತ್ತಿರುವ ಸಾಮಾಜಿಕ ಜಾಲತಾಣವಾದ ಟ್ವಿಟರಿನಲ್ಲಿ, ವಿಶ್ವದಲ್ಲೇ ಅತಿ ಹೆಚ್ಚು ಫಾಲೋಯರ್ಸ್ ಅನ್ನು ಹೊಂದಿರುವ ನಾಲ್ಕನೆಯ ವ್ಯಕ್ತಿಯಾಗಿದ್ದಾರೆ. ಮೇ ತಿಂಗಳಲ್ಲಿ ಪ್ರಧಾನಿಯಾಗಿ ಆಯ್ಕೆಯಾಗುವ ಮುನ್ನ ನರೇಂದ್ರ ಮೋದಿ 6ನೇ ಸ್ಥಾನದಲ್ಲಿದ್ದರು. (ಮೋದಿ ವರದಿಗಾರಿಕೆ: ಹಳೆಯ ಸೊಗಡಿಲ್ಲ; ಹೊಸ ಸೊಗಸು!)

ಜೂ. 25ಕ್ಕೆ ಅನ್ವಯವಾಗುವಂತೆ ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನದ ಟ್ವಿಟರ್ ಖಾತೆಗಿಂತ ಭಾರತದ ಪ್ರಧಾನಿ ಹೆಚ್ಚು ಫಾಲೋಯರ್ಸ್ ಹೊಂದಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಸೆನೆಟ್ ಸದಸ್ಯರಾಗಿದ್ದಾಗ 2007ರ ಮಾರ್ಚ್ 5ರಂದು ಮೊದಲ ಬಾರಿಗೆ ಟ್ವಿಟರಿಗೆ ಅಂಕಿತ ಹಾಕಿದ್ದರು. ಕುತೂಹಲದ ಸಂಗತಿಯೆಂದರೆ ಆಫ್ರಿಕ ಮತ್ತು ಏಷ್ಯಾ ಪೆಸಿಫಿಕ್ ದೇಶಗಳ ಸರ್ಕಾರಗಳು ಟ್ವಿಟರ್ ಖಾತೆಯನ್ನೇ ಹೊಂದಿಲ್ಲ ಎಂಬ ಅಂಶವೂ TwitterCounter website ಅಧ್ಯಯನದಿಂದ ತಿಳಿದುಬಂದಿದೆ.

ವಿಶ್ವದಲ್ಲಿ ಸದ್ಯಕ್ಕೆ ಗರಿಷ್ಠ ಫಾಲೋಯರ್ಸ್ ಹೊಂದಿರುವ 5 ಮಂದಿ:

1. ಬರಾಕ್ ಒಬಾಮ @BarackObama - 4.3 ಕೋಟಿ

2. ಪೋಪ್ ಫ್ರಾನ್ಸಿನ್ @Pontifex - 1.4 ಕೋಟಿ

3. ಸುಸಿಲೋ ಬಾಮ್‌ಬಾಂಗ್ @SBYudhoyono - 50 ಲಕ್ಷ

4. ನರೇಂದ್ರ ಮೋದಿ @NarendraModi - 49, 81,574

5. ಶ್ವೇತ ಭವನ @WhiteHouse 49,79,707

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
World Twitter follwers Narendra Modi leads in fourth place overtakes White House. Since his election in May month, Prime Minister Narendra Modi (@NarendraModi) has become the fourth-most followed world leader on Twitter, with 49, 81,574 followers. He has surpassed the United States White House account, @WhiteHouse (49,79,707).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more