ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2100 ಹೊತ್ತಿಗೆ ಜನಸಂಖ್ಯೆಯಲ್ಲಿ ಭಾರತವೇ ನಂ.1!

|
Google Oneindia Kannada News

ಮಾನವಸಂಪನ್ಮೂಲ ಎನ್ನಿಸಿಕೊಳ್ಳಬೇಕಾದ್ದು ಜನಸಂಖ್ಯೆಯಾಗಿ ದೇಶದ ಅತ್ಯಂತ ದೊಡ್ಡ ಸಮಸ್ಯೆ ಎನ್ನಿಸುವುದು ಅದು ಮಿತಿ ಮೀರಿದಾಗ. ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಇಂದು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಬಹುಮುಖ್ಯ ಕಾರಣ ಎನ್ನಿಸುವುದು ಜನಸಂಖ್ಯೆಯ ಹೆಚ್ಚಳ.

ಜನಸಂಖ್ಯೆಯ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿಯ ಕೊರತೆ, ಜನರಲ್ಲಿ ಈ ಬಗ್ಗೆ ಅರಿವಿನ ಅಭಾವದಿಂದಾಗಿ ಭಾರತ 2100 ರ ಹೊತ್ತಿಗೆ ಚೀನಾವನ್ನೂ ಮೀರಿ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ ಎಂದು ಪ್ಯೂ ರೀಸರ್ಚ್ ಸೆಂಟರ್ ನೀಡಿದ ಅಂಕಿ ಸಂಖ್ಯೆಯಿಂದ ತಿಳಿದುಬಂದಿದೆ.

ಎಂಟೇ ಎಂಟು ವರ್ಷದಲ್ಲಿ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ! ಎಂಟೇ ಎಂಟು ವರ್ಷದಲ್ಲಿ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ!

ಜನಸಂಖ್ಯೆಗೆ ಸಂಬಂಧಿಸಿದ ವಿಷಯಗಳ ಕುರಿತು, ಸಮಸ್ಯೆಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಜುಲೈ 11 ನೇ ದಿನಾಂಕವನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತದೆ.

World population day: India will be No.1 in population by 2100

2100ರಲ್ಲಿ ಭಾರತದ ಜನಸಂಖ್ಯೆ 1450 ಮಿಲಿಯನ್ ಗಡಿ ದಾಟಲಿದೆ ಎಂದು ಅಂಕಿಸಂಖ್ಯೆಗಳು ಹೇಳುತ್ತವೆ. ಸದ್ಯಕ್ಕೆ ಭಾರತಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ(1400ಮಿಲಿಯನ್) ಚೀನಾ 2100 ರ ಹೊತ್ತಿಗೆ 1065 ಮಿಲಿಯನ್ ನಷ್ಟು ಜನಸಂಖ್ಯೆಯನ್ನು ಹೊಂದಿರಲಿದೆ ಎಂದು ಪ್ಯೂ ರೀಸರ್ಚ್ ಹೇಳಿದೆ. ಅಂದರೆ ಈಗಿನದಕ್ಕಿಂತ ಸುಮಾರು ಮುನ್ನೂರೈವತ್ತು ಮಿಲಿಯನ್ ಜನಸಂಖ್ಯೆ ಕಡಿಮೆಯಾಗಲಿದೆ. ಈಗಾಗಲೇ ಜನಸಂಖ್ಯಾ ನಿಯಂತ್ರಣಕ್ಕೆ ಅದು ತೆಗೆದುಕೊಂಡಿರುವ ಕಟ್ತುನಿಟ್ಟಿನ ಕ್ರಮಗಳು ಮತ್ತು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿರುವುದರಿಂದ ಭವಿಷ್ಯದಲ್ಲಿ ಚೀನಾ ಜನಸಂಖ್ಯೆಯ ಭಾರತಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರಲಿದೆ.

ಜುಲೈ 11 ವಿಶ್ವ ಜನಸಂಖ್ಯಾ ದಿನದ ಬಗ್ಗೆ ನಿಮಗೆಷ್ಟು ಗೊತ್ತು?ಜುಲೈ 11 ವಿಶ್ವ ಜನಸಂಖ್ಯಾ ದಿನದ ಬಗ್ಗೆ ನಿಮಗೆಷ್ಟು ಗೊತ್ತು?

ಆದರೆ ಭಾರತ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಪಟ ತೊಟ್ಟರೂ ಈಗಿರುವುದಕ್ಕಿಂತ(1380 ಮಿ.) 2100 ರಲ್ಲಿ ಭಾರತದ ಜನಸಂಖ್ಯೆ ಸುಮಾರು ಎಪ್ಪತ್ತು ಮಿಲಿಯನ್ ನಷ್ಟು ಹೆಚ್ಚಾಗಲಿದೆ. ಅಂದರೆ 2100 ರ ಹೊತ್ತಿಗೆ ಭಾರತದ ಜನಸಂಖ್ಯೆ 1450 ಮಿಲಿಯನ್ ಆಗಲಿದೆ ಎಂದು ಈ ಅಂಕಿ ಅಂಶಗಳು ಹೇಳಿವೆ.

ಜನಸಂಖ್ಯಾ ದಿನದ ಮಹತ್ವ
* ವಿಶ್ವಸಂಸ್ಥೆಯ ಅಂಕಿಸಂಖ್ಯೆಯ ಪ್ರಕಾರ ಪ್ರತಿವರ್ಷವೂ ಜನಸಂಖ್ಯೆಗೆ 83 ಮಿಲಿಯನ್ ಜನರು ಸೇರ್ಪಡೆಯಾಗುತ್ತಾರೆ. 2030 ರ ಹೊತ್ತಿಗೆ ಇದು 8.6 ಬಿಲಿಯನ್ ಮಾರ್ಕ್ ತಲುಪುವ ಸಾಧ್ಯತೆ ಇದೆ.

* ಭಾರತ ವಿಶ್ವದ ಕೇವಲ 2 ಪ್ರತಿಶತದಷ್ಟು ಜಾಗವನ್ನು ಪಡೆದಿದೆ. ಆದರೆ ವಿಶ್ವದ ಜನಸಂಖ್ಯೆಯಲ್ಲಿ ಶೇ.16 ರಷ್ಟು ಭಾರತದ್ದಾಗಿದೆ!

* ಭಾರತದ ಒಟ್ಟು ಜನಸಂಖ್ಯೆಯ ಶೇ.35 ರಷ್ಟು ಜನರು ಮೂರು ರಾಜ್ಯಗಳಲ್ಲಿ ಬದುಕುತ್ತಿದ್ದಾರೆ. ಬಿಹಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ.

* ಹೆಚ್ಚು ಜನಸಂಖ್ಯೆ ಸಮಾಜದ ಹಲವು ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಅದರಲ್ಲಿ ಬಡತನ ಅತೀ ಮುಖ್ಯವಾದುದು.

English summary
World population Day: According to data provided by Pew Research Center India will try to accommodate 1450 million people in year 2100.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X