ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರೇ ಇಲ್ಲದೆ ಜಗತ್ತು ಶೂನ್ಯವಾಗುತ್ತದೆ.. ಯಾವಾಗ ಗೊತ್ತಾ?

|
Google Oneindia Kannada News

ನವದೆಹಲಿ, ಮೇ 08: ನೀರು ಏಷ್ಟು ಅಮೂಲ್ಯವಾಗಿದೆ ಎಂದರೆ ದಿನನಿತ್ಯವು ಮೂಲ ಅವಶ್ಯಕತೆಯೇ ನೀರು. ನೀರು ಇಲ್ಲದಿದ್ದರೆ ಜಗತ್ತೇ ಶೂನ್ಯ ಅನಿಸುತ್ತದೆ. ಆದರೆ ನೀರಿನ ಕೊರತೆಯು 2050ರ ಹೊತ್ತಿಗೆ ಜಗತ್ತಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಶೇ.80ರಷ್ಟು ಕೃಷಿ ಪ್ರದೇಶಗಳಲ್ಲಿ ಅಮೂಲ್ಯ ನೀರು ಸಿಗುವುದಿಲ್ಲ ಎಂದು ಜಾಗತಿಕ ಕೃಷಿಗಾಗಿ ನೀರಿನ ಅವಶ್ಯಕತೆಗಳ ಕುರಿತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ ಸಂಶೋಧನೆ ನಡೆಸಿದೆ.

ಕೃಷಿ ಪ್ರದೇಶವು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ

ಕೃಷಿ ಪ್ರದೇಶವು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ

ಹವಾಮಾನ ಬದಲಾವಣೆಯಿಂದ ಜಗತ್ತು ವಿನಾಶದ ಅಂಚಿನಲ್ಲಿದೆ. ಈ ಪರಿಸ್ಥಿತಿ ಬದಲಾಗದಿದ್ದರೆ, 2050ರ ವೇಳೆಗೆ ಪ್ರಪಂಚದ 80 ಪ್ರತಿಶತದಷ್ಟು ಕೃಷಿ ಪ್ರದೇಶವು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಜಾಗತಿಕ ಕೃಷಿಗಾಗಿ ಪ್ರಸ್ತುತ ಮತ್ತು ಭವಿಷ್ಯದ ನೀರಿನ ಅವಶ್ಯಕತೆಗಳ ಕುರಿತು ಬೀಜಿಂಗ್‌ನಲ್ಲಿರುವ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ನಡೆಸಿದ ಸಂಶೋಧನೆಯಲ್ಲಿ ಇದು ಬಹಿರಂಗವಾಗಿದೆ.

ಮಾನವ ಜನಸಂಖ್ಯೆಗಿಂತ ಎರಡು ಪಟ್ಟು ವೇಗವಾಗಿ ಹೆಚ್ಚಾಗಿದೆ

ಮಾನವ ಜನಸಂಖ್ಯೆಗಿಂತ ಎರಡು ಪಟ್ಟು ವೇಗವಾಗಿ ಹೆಚ್ಚಾಗಿದೆ

ಕಳೆದ 100 ವರ್ಷಗಳಲ್ಲಿ ಜಗತ್ತಿನಲ್ಲಿ ನೀರಿನ ಬೇಡಿಕೆಯು ಮಾನವ ಜನಸಂಖ್ಯೆಗಿಂತ ಎರಡು ಪಟ್ಟು ವೇಗವಾಗಿ ಹೆಚ್ಚಾಗಿದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಕೃಷಿ ತಂತ್ರಗಳು ಕೃಷಿ ಮಣ್ಣಿನಲ್ಲಿ ಮಳೆ ನೀರನ್ನು ಸಂರಕ್ಷಿಸುತ್ತದೆ ಇದರಿಂದಾಗಿ ಕೃಷಿ ಪ್ರದೇಶಗಳಲ್ಲಿಯೂ ನೀರನ್ನು ಉಳಿಸಿಕೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

"ಹಸಿರು ಮನೆ ಅನಿಲ ಹೊರಸೂಸುವಿಕೆಯ ಹೆಚ್ಚಳವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಈ ಹೊರಸೂಸುವಿಕೆಯು ಹೀಗೆಯೇ ಮುಂದುವರಿದರೆ, ಬೆಳೆ ಭೂಮಿಯಲ್ಲಿ ನೀರಿನ ಕೊರತೆಯು ಹೆಚ್ಚು ವೇಗವಾಗಿ ಸಂಭವಿಸಬಹುದು. ಇದು ಆಹಾರ ಭದ್ರತೆಗೆ ದೊಡ್ಡ ಅಪಾಯವನ್ನು ಉಂಟುಮಾಡಬಹುದು. ನೀರಿನ ಬಿಕ್ಕಟ್ಟು ತಪ್ಪಿಸಲು ದೊಡ್ಡ ಮಟ್ಟದ ಕಾರ್ಯತಂತ್ರ ರೂಪಿಸಬೇಕಿದೆ,'' ಎಂದು ಪ್ರಮುಖ ಸಂಶೋಧಕ ಲಿಯು ಹೇಳಿದ್ದಾರೆ.

ಇದಕ್ಕಾಗಿ ಹಳೆಯ ಸಂಪ್ರದಾಯಗಳಿಗೆ ಮರಳಬೇಕಿದೆ

ಇದಕ್ಕಾಗಿ ಹಳೆಯ ಸಂಪ್ರದಾಯಗಳಿಗೆ ಮರಳಬೇಕಿದೆ

"ಇದಕ್ಕಾಗಿ ಹಳೆಯ ಸಂಪ್ರದಾಯಗಳಿಗೆ ಮರಳಬೇಕಿದೆ. ಹುಲ್ಲಿನಿಂದ ಮಣ್ಣನ್ನು ಮುಚ್ಚುವುದರಿಂದ ಆವಿಯಾಗುವಿಕೆ ಕಡಿಮೆಯಾಗುತ್ತದೆ. ಅದೇ ರೀತಿ ಕೃಷಿಯಲ್ಲಿ ಕಾಲಕ್ಕೆ ತಕ್ಕಂತೆ ನೀರು ಭೂಮಿಗೆ ನೀರು ಉಣಿಸಬೇಕು. ಮಳೆಗೆ ಅನುಗುಣವಾಗಿ ಋತುಮಾನಕ್ಕೆ ಅನುಗುಣವಾಗಿ ಕೃಷಿ ಪದ್ಧತಿ ಬದಲಾಗಬೇಕಾಗಿದ್ದು ಉತ್ತಮ ನೀರಾವರಿ ವ್ಯವಸ್ಥೆಗೆ ಗಮನ ನೀಡಬೇಕು," ಎಂದು ಅವರು ಸಂಶೋಧನೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

 ಭಾರತದಲ್ಲೂ ಮಳೆ ಕಡಿಮೆ ಆಗಲಿದೆ:

ಭಾರತದಲ್ಲೂ ಮಳೆ ಕಡಿಮೆ ಆಗಲಿದೆ:

ಉತ್ತರ-ಪಶ್ಚಿಮ ಭಾರತ, ಮಧ್ಯ-ಪಶ್ಚಿಮ ಅಮೆರಿಕದಂತಹ ಪ್ರದೇಶಗಳು ತೀವ್ರ ನೀರಿನ ಕೊರತೆಯನ್ನು ಎದುರಿಸಲಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಇದರಿಂದ ಸಾಗುವಳಿ ಭೂಮಿ ಕುಗ್ಗುವ ಸಾಧ್ಯತೆ ಇದೆ. ಈಶಾನ್ಯ ಚೀನಾದಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಅಮೇರಿಕಾದ ಕೊಲೊರಾಡೋ ನದಿಯ ಜಲಾನಯನ ಪ್ರದೇಶವು ಕುಗ್ಗುತ್ತಿದೆ ಎಂದು ಅಧ್ಯಯನ ಹೇಳಿದೆ. ಇದಕ್ಕಾಗಿ ಜಲಾಶಯಗಳಲ್ಲಿ ಕೋಟ್ಯಂತರ ಗ್ಯಾಲನ್ ನೀರು ಸಂಗ್ರಹಿಸುವುದಾಗಿಯೂ ಅಮೆರಿಕ ಘೋಷಿಸಿದೆ.

English summary
Water scarcity will worsen world conditions by 2050. 80 Percent of the world’s agricultural land has to face a severe water crisis. Research of the Chinese Academy of Sciences.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X