ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಶಾಲೆ ತೆರೆಯುವ ಬಗ್ಗೆ ರಾಜ್ಯಗಳ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲ್ಲ': ಸುಪ್ರೀಂ ಕೋರ್ಟ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 20: "ಯಾವಾಗ ಶಾಲೆಯನ್ನು ತೆರೆಯಬೇಕು ಎಂಬ ರಾಜ್ಯ ಸರ್ಕಾರಗಳ ನಿರ್ಧಾರದ ಬಗ್ಗೆ ಆಗಲಿ ಅಥವಾ ಶಾಲೆಯನ್ನು ತೆರೆಯದಿರುವ ರಾಜ್ಯ ಸರ್ಕಾರಗಳ ನಿರ್ಧಾರ ಬಗ್ಗೆ ನ್ಯಾಯಾಲಯವು ಯಾವುದೇ ಹಸ್ತಕ್ಷೇಪವನ್ನು ಮಾಡುವುದಿಲ್ಲ," ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಡಿ ವೈ ಚಂದ್ರಚೂಢ ಹಾಗೂ ಬಿ ವಿ ನಾಗರತ್ನರನ್ನು ಒಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಾಪೀಠವು ರಾಜ್ಯ ಸರ್ಕಾರಗಳು ಈ ಕೊರೊನಾ ಸಂದರ್ಭದಲ್ಲಿ ಶಾಲೆಗಳನ್ನು ತೆರಯುವ ಬಗ್ಗೆ ಪ್ರತಿಕ್ರಿಯೆ ನೀಡಿ, "ರಾಜ್ಯ ಸರ್ಕಾರವನ್ನು ತೆರಯುವ ನಿರ್ಧಾರ ರಾಜ್ಯ ಸರ್ಕಾರಗಳಿಗೆ ಸಂಬಂಧ ಪಟ್ಟಿದ್ದು, ಕೋರ್ಟ್ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ," ಎಂದು ತಿಳಿಸಿದೆ.

ಟಾಸ್ಕ್ ಫೋರ್ಸ್ ವರದಿ ಬಳಿಕ 1 ರಿಂದ 5 ನೇ ತರಗತಿ ಪ್ರಾರಂಭ: ಬಿ.ಸಿ. ನಾಗೇಶ್ಟಾಸ್ಕ್ ಫೋರ್ಸ್ ವರದಿ ಬಳಿಕ 1 ರಿಂದ 5 ನೇ ತರಗತಿ ಪ್ರಾರಂಭ: ಬಿ.ಸಿ. ನಾಗೇಶ್

"ಶಾಲೆಗಳನ್ನು ತೆರೆಯಲು ಹಾಗೂ ಶಾಲೆಯನ್ನು ಆರಂಭ ಮಾಡಲು ರಾಜ್ಯಗಳಿಗೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್‌ಗೆ ಯಾವುದೇ ಡೇಟಾವಾಗಲಿ ಅಥವಾ ಪರಿಣಿತಿಯನ್ನಾಗಲಿ ಹೊಂದಿಲ್ಲ. ಅದು ಕೂಡಾ ಮಕ್ಕಳ ಜೀವಕ್ಕೆ ಈ ಕೊರೊನಾ ಸಂದರ್ಭದಲ್ಲಿ ಅಪಾಯವಿರುವಾಗ," ಎಂದು ಸುಪ್ರೀಂ ಕೋರ್ಟ್‌ನ ದ್ವಿ ಸದಸ್ಯ ನ್ಯಾಯಾಪೀಠ ಹೇಳಿದೆ.

Won’t interfere with States decisions on school reopening said Supreme Court

"ಈ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವಾಗ ರಾಜ್ಯ ಸರ್ಕಾರಗಳು ಬಹಳ ಎಚ್ಚರದಿಂದ ಇರಬೇಕು. ಹೀಗಿರುವಾಗ ಕೋರ್ಟ್ ಕೂಡಾ ಈ ವಿಚಾರದಲ್ಲಿ ತೀರ್ಪು ನೀಡುವ ಸಂದರ್ಭದಲ್ಲಿ ಜಾಗರೂಕರಾಗಿರುವುದು ಮುಖ್ಯ," ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.

ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಧಾರಗಳ ಬಗ್ಗೆ ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಹೇಳಿಕೆಯನ್ನು ನೀಡಿದೆ. ಈ ಬಗ್ಗೆ ಮಾತನಾಡಿದ ನ್ಯಾಯಾಧೀಶ ಡಿ ವೈ ಚಂದ್ರಚೂಢ, "ವಿದ್ಯಾರ್ಥಿಯು ಹೀಗೆ ತನ್ನ ವಾದದ ಪರವಾಗಿ ಇರುವ ಯಾವುದೇ ಡೇಟಾ ಹೊಂದಿಲ್ಲದೆ, ಈ ರೀತಿಯಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕುವ ಬದಲಾಗಿ ತನ್ನ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು," ಎಂದು ಕಿವಿಮಾತು ಹೇಳಿದ್ದಾರೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಹೇಳಿಕೆ!ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಹೇಳಿಕೆ!

"ಕೊರೊನಾ ವೈರಸ್‌ ಸೋಂಕಿನ ವಿಚಾರದಲ್ಲಿ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯು ರಾಜ್ಯದ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆಯ ಆಧಾರದಲ್ಲಿ ನಿರ್ಧಾರವಾಗಲಿದೆ. ಇದು ಬದಲಾವಣೆ ಆಗುತ್ತದೆ. ಕೊರೊನಾ ವೈರಸ್‌ ಸೋಂಕು ಯಾವ ಪ್ರದೇಶದಲ್ಲಿ ಎಷ್ಟು ಇದೆ ಎಂಬುವುದನ್ನು ಸರಿಯಾಗಿ ಅವಲೋಕನ ಮಾಡಿ, ಶಾಲೆಯನ್ನು ತೆರಯುವುದು ಆಯಾ ರಾಜ್ಯಗಳ ನಿರ್ಧಾಕ್ಕೆ ಬಿಟ್ಟಿದ್ದು. ಈ ಶಾಲೆಗಳನ್ನು ತೆರಯುವ ವಿಚಾರವು ರಾಜ್ಯ ಸರ್ಕಾರಗಳಿಗೆಯೇ ಬಿಟ್ಟು ಬಿಡುವುದು ಉತ್ತಮ. ನಾವು ರಾಜ್ಯದ ಆಡಳಿತವನ್ನು ನಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ," ಎಂದು ಕೂಡಾ ಇದೇ ಸಂದರ್ಭದಲ್ಲಿ ನ್ಯಾಯಾಧೀಶ ಡಿ ವೈ ಚಂದ್ರಚೂಢ ಉಲ್ಲೇಖಿಸಿದ್ದಾರೆ.

ಇನ್ನು ಶಿಕ್ಷಕರು ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆಯನ್ನು ಪಡೆದಿದ್ದಾರೆ. ಆದರೆ ಮಕ್ಕಳು ಇನ್ನೂ ಕೂಡಾ ಕೋವಿಡ್‌ ವಿರುದ್ದದ ಲಸಿಕೆಯನ್ನು ಪಡೆದಿಲ್ಲ ಎಂಬುವುದನ್ನು ನ್ಯಾಯಾಧೀಶೆ ನಾಗಾರತ್ನ ಒತ್ತಿ ಹೇಳಿದರು. "ಮಕ್ಕಳು ಮತ್ತೆ ಶಾಲೆಗೆ ಬರುವಂತೆ ಮಾಡುವುದು ಅಥವಾ ಶಾಲೆಯನ್ನು ಮತ್ತೆ ತೆರೆಯುವುದರ ವಿಚಾರದಲ್ಲಿ ಸರ್ಕಾರಗಳು ಜವಾಬ್ದಾರಿಯಾಗು‌ತ್ತದೆ. ಇದಕ್ಕೆ ಸರ್ಕಾರವೇ ಉತ್ತರ ನೀಡಬೇಕು. ಈ ಕೊರೊನಾ ವೈರಸ್‌ ಸೋಂಕಿನ ಸಂದರ್ಭದಲ್ಲಿ ಶಾಲೆಯನ್ನು ತೆರಯುವಂತೆ ನಾವು ಸರ್ಕಾರಕ್ಕೆ ಆದೇಶ ನೀಡಲು ಸಾಧ್ಯವಿಲ್ಲ. ಇನ್ನು ಮುಂದೆ ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯು ದೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಆದರೂ ಅದು ವಿನಾಶಕಾರಿಯಾಗಲಾರದು," ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

"ಶಾಲೆಯನ್ನು ದೈಹಿಕವಾಗಿ ತೆರೆಯಬೇಕೇ? ಬೇಡವೇ, ಯಾವಾಗ ಶಾಲೆಯನ್ನು ತೆರೆಯುವುದು ಎಂಬ ವಿಚಾರಗಳು ಆಡಳಿತಕ್ಕೆ ಸೇರಿದ್ದು, ಕೋರ್ಟ್ ಈ ವಿಚಾರದಲ್ಲಿ ಯಾವುದೇ ಆದೇಶವನ್ನು ನೀಡದು," ಎಂದು ಕೂಡಾ ನ್ಯಾಯಾಧೀಶೆ ನಾಗಾರತ್ನ ಹೇಳಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
The Supreme Court said the judiciary will not interfere with State governments' decision when or not to open schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X