ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಳೋದು ಹೆಣ್ಣಿಂದ, ಮನುಜ ಬೀಳೋದು ಹೆಣ್ಣಿಂದ: ಇದು ದೆಹಲಿ ಫಲಿತಾಂಶ!

|
Google Oneindia Kannada News

ನವದೆಹಲಿ, ಫೆಬ್ರವರಿ.14: ಆಳುವುದು ಹೆಣ್ಣಿಂದ ಮನುಜ ಬೀಳುವುದು ಹೆಣ್ಣಿಂದ.. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಜಯಭೇರಿ ಬಾರಿಸಿದ್ದು, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದರೂ ಭಾರತೀಯ ಜನತಾ ಪಕ್ಷವು ಸೋಲು ಅನುಭವಿಸಿದ್ದು ಕೂಡಾ ಅದೇ ಹೆಣ್ಣಿಂದ.

ನವದೆಹಲಿಯಲ್ಲಿ ರಾಜಕೀಯ ಪಕ್ಷಗಳು ಸೋಲು ಗೆಲುವಿನ ಪರಾಮರ್ಶೆ ನಡೆಸುತ್ತಿವೆ. 70 ವಿಧಾನಸಭಾ ಕ್ಷೇತ್ರಗಳ ಪೈಕಿ ಆಪ್ 62 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ಮೂರನೇ ಬಾರಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅಣಿಯಾಗಿದ್ದಾರೆ.

ಇದರ ಮಧ್ಯೆ ಲೋಕನೀತಿ ಮತ್ತು ಸಿಎಸ್ ಡಿಎಸ್ ಸಂಸ್ಥೆಗಳು ನಡೆಸಿದ ಚುನಾವಣಾ ಫಲಿತಾಂಶದ ಮೇಲಿನ ಸಮೀಕ್ಷೆಯು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಗೆಲುವಿನ ಗುಟ್ಟನ್ನು ರಟ್ಟು ಮಾಡಿದೆ. ಬಿಜೆಪಿ 8 ಸ್ಥಾನ ಗೆಲ್ಲುವುದಕ್ಕೆ ಪುರುಷ ಮತದಾರರು ಕಾರಣವಾದರೆ, ಆಪ್ ಅಧಿಕಾರಕ್ಕೆ ಏರಲು ಮಹಿಳೆಯರೇ ಕಾರಣ ಎಂಬ ಅಂಶವನ್ನು ಸಮೀಕ್ಷಾ ವರದಿ ಹೊರ ಹಾಕಿದೆ.

ಆಪ್ ಚಿಹ್ನೆಗೆ ಮಹಿಳೆಯರ ಸಂಪೂರ್ಣ ಬೆಂಬಲ

ಆಪ್ ಚಿಹ್ನೆಗೆ ಮಹಿಳೆಯರ ಸಂಪೂರ್ಣ ಬೆಂಬಲ

ದೆಹಲಿಯಲ್ಲಿ ಮೊದಲಿನ ಚುನಾವಣೆಗಳನ್ನು ಗಮನಿಸಿದಾಗ 2020ರಲ್ಲಿ ನಡೆದ ವಿಧಾನಸಭಾ ಚುನಾವಣೆಯು ಸಾಕಷ್ಟು ವಿಭಿನ್ನವಾಗಿದೆ. ಪುರುಷರು ಬಿಜೆಪಿಗೆ ಬೆಂಬಲ ಸೂಚಿಸಿದ್ದರೆ ಮಹಿಳೆಯರ ಬೆಂಬಲ ಸಂಪೂರ್ಣ ಆಮ್ ಆದ್ಮಿ ಪಕ್ಷಕ್ಕೆ ಇತ್ತು. ಶೇಕಡಾವಾರು ಮತದಾನವನ್ನು ಅವಲೋಕಿಸಿದಾಗ ಅತಿಹೆಚ್ಚು ಮಹಿಳೆಯರು ಆಪ್ ಚಿಹ್ನೆಗೆ ತಮ್ಮ ಮತ ಚಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಪರರ ಮಾತು ಕೇಳದೇ ಮತದಾನ ಮಾಡಿದ್ದಕ್ಕೆ ಗೆಲುವು

ಪರರ ಮಾತು ಕೇಳದೇ ಮತದಾನ ಮಾಡಿದ್ದಕ್ಕೆ ಗೆಲುವು

ದೆಹಲಿ ವಿಧಾನಸಭಾ ಚುನಾವಣೆ ಮತದಾನದ ಸಂದರ್ಭದಲ್ಲಿ ಮಹಿಳೆಯರು ಮನೆಯ ಪುರುಷರು ಹೇಳಿದಂತೆ ನಡೆದುಕೊಳ್ಳುತ್ತಿದ್ದರು. ಆದರೆ ಈ ಬಾರಿ ಚುನಾವಣೆಯಲ್ಲಿ ಸ್ವಾತಂತ್ರ್ಯವಾಗಿ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಪುರುಷರು ಬಿಜೆಪಿಗೆ ಬೆಂಬಲ ಸೂಚಿಸಿದರೆ ಮಹಿಳೆಯರು ಆಪ್ ಗೆ ಜೈ ಎಂದಿದ್ದಾರೆ.

ದೆಹಲಿ ಮತದಾನದಲ್ಲಿ ಮಹಿಳೆಯರದ್ದೇ ಮೇಲುಗೈ

ದೆಹಲಿ ಮತದಾನದಲ್ಲಿ ಮಹಿಳೆಯರದ್ದೇ ಮೇಲುಗೈ

ಶೇಕಡಾವಾರು ಮತದಾನದ ಪ್ರಮಾಣವನ್ನು ಪರಾಮರ್ಶಿಸಿದಾಗ ಮಹಿಳೆಯರು ಮೇಲುಗೈ ಸಾಧಿಸಿರುವ ಬಗ್ಗೆ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವಂತೆ ಕಳೆದ ಬಾರಿ ಕಾಂಗ್ರೆಸ್ ಗೆ ಮತ ನೀಡಿದ ಪುರುಷರ ಪ್ರಮಾಣದಲ್ಲಿ ಶೇ.4ರಷ್ಟು ಕಡಿಮೆಯಾಗಿದೆ. ಬಿಜೆಪಿ ಶೇ.43ರಷ್ಟು ಪುರುಷರು ಮತದಾನ ಮಾಡಿದ್ದರೆ, ಈ ಸಂಖ್ಯೆಯಲ್ಲಿ ಶೇ.11ರಷ್ಟು ಏರಿಕೆ ಕಂಡು ಬಂದಿದೆ. ಆಪ್ ಗೆ ಶೇ.49ರಷ್ಟು ಪುರುಷರು ಮತ ಚಲಾಯಿಸಿದ್ದರೂ ಕೂಡಾ ಈ ಪ್ರಮಾಣದಲ್ಲಿ ಶೇ.6ರಷ್ಟು ಇಳಿಕೆಯಾಗಿದೆ. ಇನ್ನು, ಇತರರಿಗೆ ಶೇ.3ರಷ್ಟು ಪುರುಷರು ಮತದಾನ ಮಾಡಿದ್ದು, ಕಳೆದ ಬಾರಿಗೆ ಹೋಲಿಸಿದರೆ ಶೇ.1ರಷ್ಟು ಮತದಾನ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಇನ್ನು, ಮಹಿಳಾ ಮತದಾರರ ಶೇಕಡಾವಾರು ಪ್ರಮಾಣವನ್ನು ಗಮನಿಸಿದಾಗ ಕಾಂಗ್ರೆಸ್ ಗೆ ಮತದಾನ ಮಾಡಿದ ಮಹಿಳೆಯರ ಸಂಖ್ಯೆಯಲ್ಲಿ ಶೇ.7ರಷ್ಟು ಇಳಿಕೆಯಾಗಿದ್ದು, ಈ ಬಾರಿ ಶೇ.03ರಷ್ಟು ಮತದಾನ ಮಾಡಿದ್ದಾರೆ. ಬಿಜೆಪಿಗೆ ಶೇ.1ರಷ್ಟು ಮಹಿಳೆಯರು ಮಾತ್ರ ಹೆಚ್ಚುವರಿಯಾಗಿ ಮತ ನೀಡಿದ್ದಾರೆ. ಉಳಿದಂತೆ ಶೇ.60ರಷ್ಟು ಮಹಿಳೆಯರು ಆಪ್ ಗೆ ಮತದಾನ ಮಾಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಶೇ.7ರಷ್ಟು ಮತದಾನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇತರರಿಗೆ ಶೇ.2ರಷ್ಟು ಮತ ನೀಡಿದ್ದು, ಕಳೆದ ಬಾರಿಗಿಂತ ಶೇ.1ರಷ್ಟು ಮತದಾನ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.

ದಲಿತ ಮಹಿಳೆಯರಿಂದ ಆಪ್ ಗೆ ಹೆಚ್ಚಿನ ಬೆಂಬಲ

ದಲಿತ ಮಹಿಳೆಯರಿಂದ ಆಪ್ ಗೆ ಹೆಚ್ಚಿನ ಬೆಂಬಲ

ಆಮ್ ಆದ್ಮಿ ಪಕ್ಷಕ್ಕೆ ದಲಿತ ಮಹಿಳೆಯರು ಅತಿಹೆಚ್ಚು ಬೆಂಬಲವನ್ನು ಸೂಚಿಸಿರುವ ಬಗ್ಗೆ ಮತದಾನದ ಅಂಕಿ-ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ. ಜತ್, ಗುಜ್ಜರ್, ಯಾದವ್ ಜನಾಂಗದ ಪುರುಷರಿಗೆ ಹೋಲಿಸಿದರೆ ಆಮ್ ಆದ್ಮಿ ಪಕ್ಷಕ್ಕೆ ಶೇ.18ರಷ್ಟು ಮಹಿಳೆಯರು ಹೆಚ್ಚು ಮತದಾನ ಮಾಡಿದ್ದಾರೆ ಎನ್ನಲಾಗಿದೆ.

ಮಹಿಳೆಯರಿಗೆ ಫ್ಲೀ ಬಸ್ ಪಾಸ್ ಘೋಷಿಸಿದ ಆಪ್ ಸರ್ಕಾರ

ಮಹಿಳೆಯರಿಗೆ ಫ್ಲೀ ಬಸ್ ಪಾಸ್ ಘೋಷಿಸಿದ ಆಪ್ ಸರ್ಕಾರ

ಕಳೆದ 2019ರ ಅಕ್ಟೋಬರ್ ನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು ಘೋಷಿಸಿತು. ರಾಷ್ಟ್ರ ರಾಜಧಾನಿಯಲ್ಲಿ ಶೇ.50ರಷ್ಟು ಮಹಿಳೆಯರಿಗೆ ಈ ಯೋಜನೆ ತಲುಪುವಲ್ಲಿ ಯಶಸ್ವಿಯಾಯಿತು ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದರಿಂದಾಗಿ ಬಿಜೆಪಿಗಿಂತ ಆಪ್ ಗೆ ಶೇ.42ರಷ್ಟು ಮಹಿಳೆಯರು ಆಮ್ ಆದ್ಮಿಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕುಡಿಯುವ ನೀರು, ವಿದ್ಯುತ್ ಬಿಲ್ ನಲ್ಲಿ ಸಬ್ಸಿಡಿ ನೀಡಿದ ಆಪ್

ಕುಡಿಯುವ ನೀರು, ವಿದ್ಯುತ್ ಬಿಲ್ ನಲ್ಲಿ ಸಬ್ಸಿಡಿ ನೀಡಿದ ಆಪ್

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ವಿದ್ಯುತ್ ಮತ್ತು ಕುಡಿಯುವ ನೀರಿನ ಶುಲ್ಕವನ್ನು ದಿನೇ ದಿನೆ ಏರಿಕೆ ಮಾಡುತ್ತಿದೆ. ಇದರ ಮಧ್ಯೆ ದೆಹಲಿಯಲ್ಲಿ ವಿದ್ಯುತ್ ಬಿಲ್ ಮತ್ತು ಕುಡಿಯುವ ನೀರಿನ ಶುಲ್ಕಕ್ಕೆ ಆಪ್ ಸರ್ಕಾರ ಸಬ್ಸಿಡಿ ನೀಡಿದ್ದು ಮತದಾರರನ್ನು ಹೆಚ್ಚಾಗಿ ಆಕರ್ಷಿಸಿತು ಎಂದು ಹೇಳಲಾಗುತ್ತಿದೆ.

English summary
Womens Are Take A Main Part In Aam Admi Party Victory In Delhi Assembly Election. The CSDS Survey Releaved The Secrete Of BJP Defeat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X