ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಂಡ ಹಾಕಿದ್ರೆ ಇಲ್ಲೇ ಆತ್ಮಹತ್ಯೆ ಮಾಡ್ಕೊತೀನಿ: ಯುವತಿ ಬೆದರಿಕೆ

|
Google Oneindia Kannada News

ನವದೆಹಲಿ,ಸೆಪ್ಟೆಂಬರ್ 16: ಚಲನ್ ಕೊಟ್ರೆ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಯುವತಿ ಟ್ರಾಫಿಕ್ ಪೊಲೀಸರಿಗೆ ಬೆದರಿಕೆಯೊಡ್ಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ನೂತನ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಟ್ರಾಫಿಕ್‌ ಪೊಲೀಸರು ಸುಮಾರು 6 ಲಕ್ಷದ ವರೆಗೂ ದಂಡ ವಿಧಿಸಿದ್ದರು.

8 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?8 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?

ಟ್ರಾಫಿಕ್‌ ಪೊಲೀಸರ ಪ್ರಕಾರ, ದ್ವಿಚಕ್ರ ವಾಹನದಲ್ಲಿ ತೆರಳುವಾಗ ಮಹಿಳೆಯು ಫೋನಿನಲ್ಲಿ ಮಾತನಾಡುತ್ತಿದ್ದರು. ನಂಬರ್‌ ಪ್ಲೇಟ್‌ ಒಡೆದಿರುವ ಸ್ಕೂಟರ್‌ನಲ್ಲಿ ಬರುತ್ತಿದ್ದ ಯುವತಿಯು ಹೆಲ್ಮೆಟ್‌ ಕೂಡ ಸರಿಯಾಗಿ ಧರಿಸಿರಲಿಲ್ಲ.

Woman Threatens to Commit Suicide After Get Challan

ದೆಹಲಿ ಕಾಶ್ಮೀರಿ ಗೇಟ್‌ನಲ್ಲಿ ಸಂಚಾರ ದಟ್ಟಣೆ ವೇಳೆಯಲ್ಲಿ ಇಂಥದ್ದೊಂದು ನಾಟಕ ನಡೆದಿದ್ದು, ದ್ವಿಚಕ್ರ ವಾಹನದಲ್ಲಿ ಆಫೀಸಿಗೆ ತೆರಳುತ್ತಿದ್ದ ಮಹಿಳೆಯನ್ನು ಟ್ರಾಫಿಕ್‌ ಪೊಲೀಸರು ತಡೆದು ಚಲನ್‌ ನೀಡಿದಾಗ ಯುವತಿಯು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ.

ದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರ

ಟ್ರಾಫಿಕ್ ಪೊಲೀಸರು ಗಾಡಿಯನ್ನು ತಡೆದ ತಕ್ಷಣವೇ ಪೊಲೀಸರ ಎದುರು ನಾಟಕ ಆರಂಭಿಸಿದ್ದಾರೆ. ಮಹಿಳೆ ಹೆಲ್ಮೆಟ್‌ನ್ನು ರಸ್ತೆಗೆಸೆದು ತನ್ನ ತಾಯಿಗೆ ಕರೆ ಮಾಡಿ ದಂಡ ವಿಧಿಸಿದ್ದರ ಬಗ್ಗೆ ದೂರು ನೀಡಿ ಬಳಿಕ , ಚಲನ್ ನಾಣು ಪಡೆಯುವುದಿಲ್ಲ ಎಂದು ಹೇಳಿ ನಾನು ಆತ್ಮಹತ್ಯೆ ಮಾಡಿಕೊಂಡರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾಳೆ. ಇಷ್ಟೆಲ್ಲಾ ನಾಟಕದ ಬಳಿಕ ಚಲನ್ ನೀಡದೆ ಮಹಿಳೆಯನ್ನು ಕಳುಹಿಸಿಕೊಟ್ಟಿದ್ದಾರೆ.

English summary
Woman Threatens to Commit Suicide After Get Challan, While there have been many reports of traffic police fining violators with hefty amounts as much as Rs 40,000 and 1 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X