ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಡರ್ ಮಾಡಿದ್ದೊಂದು ಪಿಜ್ಜಾ, ಮನೆಗೆ ಬಂದಿದ್ದೇ ಬೇರೆ; ಕೋಟಿ ರೂ ಪರಿಹಾರ ಕೇಳಿದ ಮಹಿಳೆ

|
Google Oneindia Kannada News

ನವದೆಹಲಿ, ಮಾರ್ಚ್ 13: ತಾನು ಸಸ್ಯಾಹಾರಿ ಪಿಜ್ಜಾಗೆ ಆರ್ಡರ್ ಮಾಡಿದ್ದು, ಮಾಂಸಾಹಾರಿ ಪಿಜ್ಜಾ ನೀಡಲಾಗಿದೆ ಎಂದು ಮಹಿಳೆಯೊಬ್ಬರು ಅಮೆರಿಕ ಮೂಲದ ಪಿಜ್ಜಾ ರೆಸ್ಟೊರೆಂಟ್ ಮೇಲೆ ದೂರು ನೀಡಿದ್ದು, ಈ ತಪ್ಪಿಗೆ ಒಂದು ಕೋಟಿ ಪರಿಹಾರ ನೀಡಬೇಕೆಂದು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಅಷ್ಟಕ್ಕೂ ಈ ಸಂಗತಿ ನಡೆದಿರುವುದು ಒಂದು ವರ್ಷದ ಹಿಂದೆ. ಉತ್ತರ ಪ್ರದೇಶದ ಘಾಜಿಬಾದ್ ನಿವಾಸಿ ದೀಪಾಲಿಯವರು 2019ರ ಮಾರ್ಚ್ 21ರಂದು ರೆಸ್ಟೊರೆಂಟ್ ‌ನಿಂದ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ ಅವರ ಮನೆಗೆ ತಪ್ಪಾಗಿ ಮಾಂಸಾಹಾರಿ ಪಿಜ್ಜಾ ನೀಡಲಾಗಿತ್ತು.

3 ವರ್ಷ ಹಣ ಉಳಿಸಿ ಪಿಜ್ಜಾ ಅಂಗಡಿ ತೆಗೆದರೆ ಮರು ದಿನವೇ ಹೀಗಾಯಿತಾ?3 ವರ್ಷ ಹಣ ಉಳಿಸಿ ಪಿಜ್ಜಾ ಅಂಗಡಿ ತೆಗೆದರೆ ಮರು ದಿನವೇ ಹೀಗಾಯಿತಾ?

ಈ ಬಗ್ಗೆ ವಿವರಣೆ ನೀಡಿರುವ ದೀಪಾಲಿ, "ಅಂದು ಹೋಲಿ ಹಬ್ಬವಿದ್ದು, ಹಬ್ಬದ ಆಚರಣೆ ನಂತರ ನಮ್ಮ ಕುಟುಂಬದವರಿಗೆ ತುಂಬಾ ಹಸಿವಾಗಿತ್ತು. ಹೀಗಾಗಿ ಸಸ್ಯಾಹಾರಿ ಪಿಜ್ಜಾ ಆರ್ಡರ್ ಮಾಡಿದ್ದೆವು. ಆದರೆ 30 ನಿಮಿಷ ತಡವಾಗಿ ಡೆಲಿವರಿ ಮಾಡಲಾಗಿದೆ. ಅದನ್ನೂ ಕ್ಷಮಿಸಿ, ಹಸಿವಾಗಿದ್ದರಿಂದ ಪಿಜ್ಜಾ ತಿನ್ನಲು ಶುರು ಮಾಡಿದೆವು. ಆದರೆ ಬಾಯಿಗೆ ಇಟ್ಟ ನಂತರ ಅದು ಮಾಂಸಾಹಾರಿ ಎಂದು ತಿಳಿಯಿತು. ಅಣಬೆ ಬದಲು ಅದರಲ್ಲಿ ಮಾಂಸದ ತುಂಡುಗಳನ್ನು ಇಡಲಾಗಿತ್ತು" ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 Woman Seeks 1 Crore Compensation For Getting Non Veg Pizza

ತಕ್ಷಣವೇ ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದು, ದೂರು ನೀಡಿದೆ. ಆನಂತರ ಮಾರ್ಚ್ 26ರಂದು ಪಿಜ್ಜಾ ರೆಸ್ಟೊರೆಂಟ್ ನಿರ್ದೇಶಕರು ಕರೆ ಮಾಡಿ, ತಮ್ಮ ಔಟ್‌ಲೆಟ್‌ನಿಂದ ಇಡೀ ಕುಟುಂಬಕ್ಕೆ ಉಚಿತವಾಗಿ ಪಿಜ್ಜಾ ನೀಡುವುದಾಗಿ ತಿಳಿಸಿದರು. ಇದು ಸಾಮಾನ್ಯ ವಿಷಯವಲ್ಲ. ನಮ್ಮ ಧಾರ್ಮಿಕ ನಂಬಿಕೆಗಳನ್ನೇ ಕಂಪನಿ ಹಾಳು ಮಾಡಿದೆ. ಶಾಶ್ವತವಾಗಿ ಮಾನಸಿಕ ನೋವನ್ನು ನೀಡಿದೆ. ಈ ಪಾಪವನ್ನು ತೊಳೆದುಕೊಳ್ಳಲು ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಹಣ ಖರ್ಚಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕಾಗಿ ಒಂದು ಕೋಟಿ ರೂಪಾಯಿ ಪರಿಹಾರವನ್ನು ಕೇಳಿದ್ದಾರೆ.

ದೆಹಲಿ ಜಿಲ್ಲಾ ಗ್ರಾಹಕ ನ್ಯಾಯಾಲಯ, ಮಹಿಳೆಯ ದೂರಿಗೆ ಉತ್ತರಿಸುವಂತೆ ಪಿಜ್ಜಾ ರೆಸ್ಟೊರೆಂಟ್‌ಗೆ ಸೂಚಿಸಿದ್ದು, ಮಾರ್ಚ್ 17ಕ್ಕೆ ವಿಚಾರಣೆ ಮುಂದೂಡಿದೆ.

English summary
vegetarian woman has sought compensation of ₹ 1 crore for delivering non-vegetarian pizza
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X