ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರದಿ ಪಡೆದುಕೊಳ್ಳುವುದು ನನ್ನ ಹಕ್ಕು: ಸಿಜೆಐ ವಿರುದ್ಧ ದೂರುದಾರ ಮಹಿಳೆ ಹೇಳಿಕೆ

|
Google Oneindia Kannada News

ನವದೆಹಲಿ, ಮೇ 7: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಮಹಿಳೆ, ಸುಪ್ರೀಂಕೋರ್ಟ್‌ನ ಆಂತರಿಕ ಸಮಿತಿ ನೀಡಿರುವ ವರದಿಯ ಪ್ರತಿಯನ್ನು ತಮಗೆ ನೀಡುವಂತೆ ಬೇಡಿಕೆ ಇರಿಸಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ ಮೂವರು ಸದಸ್ಯರ ಸಮಿತಿ ರಂಜನ್ ಗೊಗೊಯ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಈ ವರದಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದ ಸಮಿತಿ, ವರದಿಯ ಪ್ರತಿಯನ್ನು ತಮಗೆ ನೀಡಬೇಕೆಂಬ ಮಹಿಳೆಯ ಮನವಿಯನ್ನು ತಿರಸ್ಕರಿಸಿತ್ತು.

ಗೊಗೊಯ್ ವಿರುದ್ಧ ಪ್ರತಿಭಟನೆ: ಸುಪ್ರೀಂಕೋರ್ಟ್ ಹೊರಗೆ ಸೆಕ್ಷನ್ 144 ಜಾರಿಗೊಗೊಯ್ ವಿರುದ್ಧ ಪ್ರತಿಭಟನೆ: ಸುಪ್ರೀಂಕೋರ್ಟ್ ಹೊರಗೆ ಸೆಕ್ಷನ್ 144 ಜಾರಿ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮಹಿಳೆ, ಇದು ನ್ಯಾಯಾಂಗದ ಅಣಕ ಎಂದು ಟೀಕಿಸಿದ್ದಾರೆ.

woman complainant demanded copy committe report sexual harassment case CJI Ranjan Gogoi

ಸಮಿತಿ ನಿರ್ಧಾರದ ಕುರಿತು ಬೇಸರ ವ್ಯಕ್ತಪಡಿಸಿರುವ ಅವರು, ವರದಿ ಪಡೆದುಕೊಳ್ಳುವ ತಮ್ಮ ಹಕ್ಕನ್ನು ನಿರಾಕರಿಸಲಾಗಿದೆ ಎಂದಿದ್ದಾರೆ. ಉದ್ಯೋಗ ಸ್ಥಳದಲ್ಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದ ಕಾನೂನಿನ ಅನ್ವಯ ವರದಿಯ ಪ್ರತಿಯನ್ನು ಪಡೆದುಕೊಳ್ಳುವುದು ತಮ್ಮ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪ: ಸಿಜೆಐ ರಂಜನ್‌ ಗೊಗೊಯ್‌ಗೆ ಕ್ಲೀನ್‌ಚಿಟ್ಲೈಂಗಿಕ ಕಿರುಕುಳ ಆರೋಪ: ಸಿಜೆಐ ರಂಜನ್‌ ಗೊಗೊಯ್‌ಗೆ ಕ್ಲೀನ್‌ಚಿಟ್

ದೂರುದಾರರಿಗೆ ವರದಿಯ ಪ್ರತಿ ನೀಡದೆ ಇರುವುದು ಸಹಜ ನ್ಯಾಯದ ತತ್ವಗಳ ಉಲ್ಲಂಘನೆಯಾಗಲಿದೆ. ಮತ್ತು ಪ್ರಜಾಪ್ರಭುತ್ವದ ಸಂಪೂರ್ಣ ಅಣಕ ಎಂದು ಹೇಳಿದ್ದಾರೆ.

ಸಿಜೆಐ ಕ್ಲೀನ್‌ ಚಿಟ್‌ಗೆ ದೂರುದಾರ ಮಹಿಳೆ ಅಸಮಾಧಾನ ಸಿಜೆಐ ಕ್ಲೀನ್‌ ಚಿಟ್‌ಗೆ ದೂರುದಾರ ಮಹಿಳೆ ಅಸಮಾಧಾನ

'ಸಮಿತಿ ಮುಂದೆ ಹಾಜರಾಗದೆ ಇರಲು ವಾಸ್ತವ ಕಾರಣಗಳನ್ನು ನೀಡಿದ್ದರೂ ಸಮಿತಿಯು ನನ್ನ ವಿರುದ್ಧ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಸಮಿತಿಯು ಸಹಜ ನ್ಯಾಯದ ಮೂಲ ತತ್ವಗಳನ್ನೇ ಪರಿಗಣಿಸಿಲ್ಲ' ಎಂದು ದೂರಿದ್ದಾರೆ.

'ಆರಂಭದಿಂದಲೂ ನನ್ನನ್ನು ಹೊರಗಿನವಳಂತೆ ಕಡೆಗಣಿಸಲಾಯಿತು. ಪ್ರಕ್ರಿಯೆ ಕುರಿತು ನನಗೆ ಮಾಹಿತಿ ನೀಡಲಿಲ್ಲ. ನನ್ನ ಮೂಲ ಹಕ್ಕುಗಳು ಹಾಗೂ ವಿಚಾರಣಾ ಪ್ರಕ್ರಿಯೆಗೆ ಸಂಬಂಧಿಸಿದ ಕ್ರಮಗಳ ಬಗ್ಗೆ ನನಗೆ ಮಾಹಿತಿ ಕೊಡಲಿಲ್ಲ' ಎಂದು ಆರೋಪಿಸಿದ್ದಾರೆ.

English summary
Woman complainant said it is her right to get the copy of committee report on sexual harassment case against Supreme Court CJI Ranjan Gogoi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X