ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯ ಖಾತರಿ ಇಲ್ಲದ ಸಹಮತದ ಸೆಕ್ಸ್‌ ಅತ್ಯಾಚಾರವಲ್ಲ: ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಆಗಸ್ಟ್ 22: ಮದುವೆಯಾಗುವುದಿಲ್ಲ ಎಂದು ಗೊತ್ತಿದ್ದರೂ ಮಹಿಳೆಯು ಪುರುಷನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ಮದುವೆಯ ಭರವಸೆ ಇಲ್ಲ ಎಂಬುದನ್ನು ಅರಿತಿದ್ದರೂ ಪುರುಷನೊಂದಿಗೆ ಸುದೀರ್ಘಾವಧಿಗೆ ದೈಹಿಕ ಸಂಪರ್ಕ ಹೊಂದುವುದನ್ನು ಮುಂದುವರಿಸಿದ್ದರೆ, ಮದುವೆಯಾಗಿ ಸುಳ್ಳು ಭರವಸೆ ನೀಡಿ ನಂಬಿಸಿ ಅತ್ಯಾಚಾರ ಎಸಗಿದ್ದಾಗಿ ಆರೋಪ ಮಾಡಲು ಸಾಧ್ಯವಿಲ್ಲ ಎಂದು ಅದು ತೀರ್ಪಿತ್ತಿದೆ.

ಸಿಆರ್‌ಪಿಎಫ್‌ನ ಡೆಪ್ಯುಟಿ ಕಮಾಂಡೆಂಟ್ ವಿರುದ್ಧ ಮಾರಾಟ ತೆರಿಗೆ ಇಲಾಖೆಯಲ್ಲಿ ಸಹಾಯಕ ಕಮಿಷನರ್ ಆಗಿರುವ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಆರೋಪವನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ ಮತ್ತು ಇಂದಿರಾ ಬ್ಯಾನರ್ಜಿ ಈ ಆದೇಶ ನೀಡಿದ್ದಾರೆ.

 ಗರ್ಭಿಣಿ ಮೇಲೆ ಅತ್ಯಾಚಾರ, ಜೀವಬಿಟ್ಟ ಭ್ರೂಣ: ಅಮಾನವೀಯ ಕೃತ್ಯ ಬಹಿರಂಗ ಗರ್ಭಿಣಿ ಮೇಲೆ ಅತ್ಯಾಚಾರ, ಜೀವಬಿಟ್ಟ ಭ್ರೂಣ: ಅಮಾನವೀಯ ಕೃತ್ಯ ಬಹಿರಂಗ

ಇವರಿಬ್ಬರೂ ಆರು ವರ್ಷಗಳಿಂದ ಸಂಬಂಧ ಹೊಂದಿದ್ದರು. ಅನೇಕ ಸಂದರ್ಭಗಳಲ್ಲಿ ಪರಸ್ಪರರ ಮನೆಗಳಲ್ಲಿ ವಾಸಿಸಿದ್ದರು. ಇದು ಅವರು ಸಹಮತದ ಸಂಬಂಧ ಹೊಂದಿದ್ದರು ಎಂಬುದನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಎಂಟು ವರ್ಷ ಸಹಬಾಳ್ವೆ ಸಂಬಂಧ

ಎಂಟು ವರ್ಷ ಸಹಬಾಳ್ವೆ ಸಂಬಂಧ

ದೂರು ನೀಡಿರುವ ಮಹಿಳೆ, ತಮಗೆ 1998ರಿಂದಲೂ ಸಿಆರ್‌ಪಿಎಫ್‌ನ ಅಧಿಕಾರಿ ಪರಿಚಯವಿದ್ದು, ಮದುವೆಯಾಗುವುದಾಗಿ ಭರವಸೆ ನೀಡಿದ 2008ರಿಂದ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದರು. 2016ರವರೆಗೂ ಇಬ್ಬರೂ ಪರಸ್ಪರರ ಮನೆಗಳಿಗೆ ಹೋಗಿ ಕೆಲವು ದಿನ ಒಟ್ಟಿಗೆ ಇರುತ್ತಿದ್ದರು. 2014ರಲ್ಲಿ ಮಹಿಳೆಯ ಜಾತಿ ವಿಚಾರವನ್ನು ಕೆದಕಿದ ಅವರು ಅದರ ಆಧಾರದಲ್ಲಿ ಮದುವೆಯಾಗುವುದು ಕಷ್ಟ ಎಂದು ಹೇಳಿದ್ದರು. ಆದರೆ, ಸಂಬಂಧವನ್ನು ಮುಂದುವರಿಸಿದ್ದರು.

ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆ

ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆ

2016ರಲ್ಲಿ ಸಿಆರ್‌ಪಿಎಫ್ ಅಧಿಕಾರಿಯು ತಮಗೆ ಮತ್ತೊಬ್ಬ ಮಹಿಳೆಯೊಂದಿಗೆ ತಮಗೆ ನಿಶ್ಚಿತಾರ್ಥವಾಗಿದೆ ಎಂದು ತಿಳಿಸಿದರು. ಅದಾದ ಬಳಿಕ ಮಹಿಳೆ ಅವರ ವಿರುದ್ಧ ಮದುವೆಯಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಇದರಲ್ಲಿ ಇಬ್ಬರೂ ಸಹಮತದ ಲೈಂಗಿಕ ಸಂಬಂಧ ಹೊಂದಿದ್ದರು. ಇಷ್ಟು ಸುದೀರ್ಘ ಸಮಯ ಸಂಬಂಧ ಹೊಂದಿದ್ದರೆ ಮತ್ತು ಮದುವೆಯಾಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಸಂಬಂಧ ಮುಂದುವರಿಸಿದ್ದರೆ ಅದನ್ನು ಅತ್ಯಾಚಾರ ಎನ್ನಲಾಗದು ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ಗುರುಗ್ರಾಮದಲ್ಲಿ ಉಜ್ಬೇಕಿಸ್ತಾನದ ಮಹಿಳೆ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರಗುರುಗ್ರಾಮದಲ್ಲಿ ಉಜ್ಬೇಕಿಸ್ತಾನದ ಮಹಿಳೆ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ

ಭರವಸೆ ಮತ್ತು ಉಲ್ಲಂಘನೆ ನಡುವೆ ವ್ಯತ್ಯಾಸವಿದೆ

ಭರವಸೆ ಮತ್ತು ಉಲ್ಲಂಘನೆ ನಡುವೆ ವ್ಯತ್ಯಾಸವಿದೆ

ಮದುವೆಯ ಕುರಿತ ಯಾವುದೇ ಸುಳ್ಳು ಭರವಸೆಗಳು ತಕ್ಷಣದ ಸಂದರ್ಭಕ್ಕೆ ಆಗಿರಬೇಕು ಅಥವಾ ಲೈಂಗಿಕ ಕ್ರಿಯೆಗೆ ಒಳಪಡುವ ವಿಚಾರದಲ್ಲಿ ಮಹಿಳೆಯನ್ನು ಒಲಿಸಿಕೊಳ್ಳುವುದಾಗಿರಬೇಕು. ಸಂಬಂಧವು ಮುರಿದುಹೋಗುತ್ತದೆ ಎಂಬುದು ಗೊತ್ತಿದ್ದರೂ ಹೊಂದಾಣಿಕೆಯಿಂದ ಇರುವುದು ಮತ್ತು ಉತ್ತಮ ನಂಬಿಕೆ ಬೆಳೆಸಿ ಅದನ್ನು ಪೂರೈಸದೆಯೇ ಭರವಸೆ ಉಲ್ಲಂಘಿಸುವ ಸುಳ್ಳು ಭರವಸೆಗಳ ನಡುವೆ ವ್ಯತ್ಯಾಸವಿದೆ ಎಂದು ನ್ಯಾಯಾಲಯ ಹೇಳಿತು.

ಭರವಸೆಯ ಉಲ್ಲಂಘನೆ ಎಂದು ಪರಿಗಣಿಸಲಾಗದು

ಭರವಸೆಯ ಉಲ್ಲಂಘನೆ ಎಂದು ಪರಿಗಣಿಸಲಾಗದು

ಮದುವೆಯ ಭರವಸೆಯು ಸುಳ್ಳಾಗಿದ್ದರೆ ಮತ್ತು ಭರವಸೆ ನೀಡುವ ಸಂದರ್ಭದಲ್ಲಿ ವ್ಯಕ್ತಿಯ ಉದ್ದೇಶವೇ ಅದಕ್ಕೆ ಬದ್ಧನಾಗದೆ ಇದ್ದರೂ ಮಹಿಳೆಯನ್ನು ದೈಹಿಕ ಸಂಪರ್ಕಕ್ಕೆ ಒಳಗಾಗುವಂತೆ ಒಲಿಸಿಕೊಳ್ಳುವುದಾಗಿದ್ದರೆ, ಮಹಿಳೆಯ ಸಹಮತದ ವಿಚಾರದಲ್ಲಿ ವಾಸ್ತವದ ತಪ್ಪುಗ್ರಹಿಕೆಯಿದೆ. ಇನ್ನೊಂದೆಡೆ, ಭರವಸೆಯ ಉಲ್ಲಂಘನೆಯನ್ನು ಸುಳ್ಳು ಭರವಸೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸುಳ್ಳು ಭರವಸೆಯನ್ನು ಸೃಷ್ಟಿಸಲು ಭರವಸೆ ನೀಡಿದ ವ್ಯಕ್ತಿಯು, ಅದನ್ನು ನೀಡಿದ ಸಂದರ್ಭದಲ್ಲಿ ತನ್ನ ಮಾತುಗಳಿಗೆ ಬದ್ಧನಾಗಿರುವ ಯಾವ ಉದ್ದೇಶವನ್ನೂ ಹೊಂದಿರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪೋಕ್ಸೊ ತಿದ್ದುಪಡಿ ಅಂಗೀಕಾರ: ಅಪ್ರಾಪ್ತರ ಮೇಲಿನ ಅತ್ಯಾಚಾರಕ್ಕೆ ಗಲ್ಲುಪೋಕ್ಸೊ ತಿದ್ದುಪಡಿ ಅಂಗೀಕಾರ: ಅಪ್ರಾಪ್ತರ ಮೇಲಿನ ಅತ್ಯಾಚಾರಕ್ಕೆ ಗಲ್ಲು

English summary
Supreme Court said, If a woman continues to having sexual relationship with a man awaring unsure of marriage cannot accuse as a rape.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X