ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃತ ಪತಿಯ ವೀರ್ಯಕ್ಕಾಗಿ ಬೇಡಿಕೆ ಇಟ್ಟ ಪತ್ನಿ

By Mahesh
|
Google Oneindia Kannada News

ನವದೆಹಲಿ, ಜುಲೈ 11: ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ವೈದ್ಯರ ಮುಂದೆ ನಂಬಲಸಾಧ್ಯವಾದ ಬೇಡಿಕೆಯೊಂದು ಬಂದಿದೆ. ಮೃತ ಪತಿಯ ವೀರ್ಯ ತೆಗೆದುಕೊಡಿ ಎಂದು ಪತ್ನಿಯೊಬ್ಬರು ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಆಸ್ಪತ್ರೆಗೆ ತರುವಾಗ ದಾರಿಮಧ್ಯದಲ್ಲಿ ಯುವಕನೊಬ್ಬ ಮೃತಪಟ್ಟಿದ್ದ. ಸಂತಾನಭಾಗ್ಯ ಕಾಣದ ಆತನ ಪತ್ನಿ ಈಗ ತನ್ನ ಪತಿಯ ವೀರ್ಯದಿಂದಲೇ ಸಂತಾನ ಪಡೆಯಲು ಇಚ್ಛಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.[Manufacturing Defect: ಪುರುಷ ನಾಶ ಸನ್ನಿಹಿತ]

ಈ ದಂಪತಿಗೆ ಮದುವೆಯಾಗಿ ಕೆಲ ವರ್ಷವಾಗಿದ್ದು, ಇನ್ನೂ ಮಕ್ಕಳಾಗಿರಲಿಲ್ಲ. ಇತ್ತೀಚೆಗೆ ಮೃತ ಪಟ್ಟ ಯುವಕನ ತಂದೆ ತಾಯಿ ಕೂಡಾ ಸೊಸೆಯ ಮನವಿಗೆ ದನಿಗೂಡಿಸಿದ್ದಾರೆ

Woman asks AIIMS doctors for dead hubby's sperm to conceive
ಮಾರ್ಗ ಸೂಚಿ ಇದೆಯೇ?: postmortem sperm retrieval (PMSR) ಬಗ್ಗೆ ಭಾರತದಲ್ಲಿ ಸರಿಯಾದ ಮಾರ್ಗ ಸೂಚಿ ಇಲ್ಲ. ಮರಣೋತ್ತರವಾಗಿ ವ್ಯಕ್ತಿಯೊಬ್ಬನ ವೀರ್ಯ ಪಡೆಯುವ ಸಂಬಂಧ ಮಾರ್ಗಸೂಚಿ ಇಲ್ಲದ ಕಾರಣ ಈ ಮನವಿಯನ್ನು ತಿರಸ್ಕರಿಸಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಭವಿಷ್ಯದಲ್ಲಿ ಇಂಥ ಗೊಂದಲ ತಪ್ಪಿಸಲು ಸೂಕ್ತ ಮಾರ್ಗಸೂಚಿ ಸಿದ್ಧಪಡಿಸುವುದು ಒಳ್ಳೆಯದು ಎಂದಿದ್ದಾರೆ.[ಬ್ರಾಹ್ಮಣ ಹುಡುಗನ ವೀರ್ಯಕ್ಕೆ ಭಾರೀ ಬೇಡಿಕೆ]

ಹ್ಯೂಮನ್ ರಿಪ್ರೊಡಕ್ಟಿವ್ ಸೈನ್ಸಸ್ ಎಂಬ ನಿಯತಕಾಲಿಕದಲ್ಲಿ ಬರೆದ ಲೇಖನವೊಂದರಲ್ಲಿ ಈ ವಿಷಯವನ್ನು ವೈದ್ಯರು ಬಹಿರಂಗಪಡಿಸಿದ್ದಾರೆ. ಭವಿಷ್ಯದಲ್ಲಿ ಇಂಥ ಗೊಂದಲ ತಪ್ಪಿಸಲು ಸೂಕ್ತ ಮಾರ್ಗಸೂಚಿ ಸಿದ್ಧಪಡಿಸುವಂತೆ ವೈದ್ಯರು ಮನವಿ ಮಾಡಿದ್ದಾರೆ.

ಎಐಐಎಂಎಸ್‌ನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ಅವರ ಪ್ರಕಾರ, ವ್ಯಕ್ತಿಯೊಬ್ಬ ಮೃತಪಟ್ಟ ಒಂದು ದಿನದವರೆಗೂ ಆತನ ವೃಷಣದಲ್ಲಿ ವೀರ್ಯ ಜೀವಂತವಿರುತ್ತದೆ. ಅದನ್ನು ಸಂಗ್ರಹಿಸುವುದು ಸುಲಭ ವಿಧಾನ. ಕೇವಲ ಐದು ನಿಮಿಷದಲ್ಲಿ ವೀರ್ಯವನ್ನು ಹೊರತೆಗೆಯಬಹುದು. ಆದರೆ, ಇದರಲ್ಲಿ ನೈತಿಕ ಹಾಗೂ ಕಾನೂನು ಸಂಕೀರ್ಣತೆಗಳಿವೆ ಎಂದಿದ್ದಾರೆ.[ಈ ದಂಪತಿಗಳಿಗೆ ಐಐಟಿ ವಿದ್ಯಾರ್ಥಿಯ ವೀರ್ಯವೇ ಬೇಕಂತೆ!]

ದೇಶದಲ್ಲಿ ಎಆರ್‌ಟಿ ನಿಯಮಾವಳಿಯ ಪ್ರಕಾರ, ಮೃತ ಪತಿಯ ವೀರ್ಯವನ್ನು ಕೃತಕ ಗರ್ಭಧಾರಣೆ ವಿಧಾನದ ಮೂಲಕ ಮಹಿಳೆಗೆ ಬಳಸಲು ಅವಕಾಶವಿದೆ. ಆದರೆ ಇದು ಪತಿ ಜೀವಂತವಿದ್ದಾಗ ಸಂಗ್ರಹಿಸಿದ ವೀರ್ಯವಾಗಿರಬೇಕು.

English summary
One may not believe this, but it is true. Doctors of All India Institute Of Medical Science(AIIMS), Delhi have received an usual request from a woman. Reportedly a widow of a young man has asked for her dead husband's sperms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X