ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣ್ ಜೇಟ್ಲಿ ಶೀಘ್ರ ಗುಣಮುಖರಾಗಲೆಂದು ವಿಪಕ್ಷ ನಾಯಕರ ಹಾರೈಕೆ

|
Google Oneindia Kannada News

ನವದೆಹಲಿ, ಜನವರಿ 16 : ಇನ್ನೇನು ಕೇಂದ್ರ ಬಜೆಟ್ ಗೆ ಕೆಲವೇ ದಿನಗಳು ಬಾಕಿ ಇರುವಾಗ ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುವ ಸಲುವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಜೇಟ್ಲಿ ಅವರು ಶೀಘ್ರ ಗುಣಮುಖರಾಗಲಿ ಎಂದು ‌ವಿವಿಧ ಪಕ್ಷಗಳ ನಾಯಕರು ಬುಧವಾರದಂದು ಹಾರೈಸಿದ್ದಾರೆ.

ಕಳೆದ ವರ್ಷ ಅರುಣ್ ಜೇಟ್ಲಿ ಅವರು ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಅರವತ್ತಾರು ವರ್ಷದ ಜೇಟ್ಲಿ ಮಾಮೂಲಿ ವೈದ್ಯಕೀಯ ತಪಾಸಣೆಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಅರುಣ್ ಜೇಟ್ಲಿಜೀ ಅವರಿಗೆ ಅನಾರೋಗ್ಯ ಎಂದು ತಿಳಿದು ಬೇಸರವಾಯಿತು. ಅವರ ಆಲೋಚನೆಯ ಆಧಾರದಲ್ಲಿ ನಿತ್ಯವೂ ಅವರ ಜತೆಗೆ ಕಾದಾಡುತ್ತೇವೆ. ಆದರೆ ‌ಕಾಂಗ್ರೆಸ್ ಪಕ್ಷ ಹಾಗೂ ನಾನು ಶೀಘ್ರವಾಗಿ ಅವರು ಗುಣಮುಖರಾಗಲಿ ಎಂದು ಹಾರೈಸುತ್ತೇವೆ.

ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಸಾಧ್ಯತೆಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಸಾಧ್ಯತೆ

ನಾವು ನಿಮ್ಮೊಂದಿಗೆ ಹಾಗೂ ನಿಮ್ಮ ಕುಟುಂಬದ ಜತೆ ಇಂತಹ ಕಷ್ಟದ ಸಮಯದಲ್ಲಿ ಶೇಕಡಾ ನೂರರಷ್ಟು ಇದ್ದೇವೆ ಎಂದಿದ್ದಾರೆ.

ಇನ್ನು ಆರ್ಥಿಕ ಸಚಿವಾಲಯದ ಮೂಲಗಳ ಪ್ರಕಾರ ಈ ವಾರಾಂತ್ಯಕ್ಕೆ ಅವರು ಹಿಂತಿರುಗುವ ನಿರೀಕ್ಷೆ ಇದೆ. ಈ ವರೆಗೆ ವಿತ್ತ ಸಚಿವಾಲಯದ ಹೊಣೆಯನ್ನು ಯಾರಿಗೂ ವಹಿಸಿಲ್ಲ. ಲೋಕಸಭೆ ಚುನಾವಣೆ ನಡೆಯುವ ವರ್ಷ ಇದಾಗಿದ್ದು, ಫೆಬ್ರವರಿ ಒಂದನೇ ತಾರೀಕು ಮಧ್ಯಂತರ ಬಜೆಟ್ ಅನ್ನು ಜೇಟ್ಲಿ ಮಂಡಿಸಬೇಕಿದೆ.

Wishes pour in for speedy recovery of Arun Jaitley as he flies to US

ಇನ್ನು ಬಿಜೆಪಿ ನಾಯಕರ ಪೈಕಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾತ್ರ ಅರುಣ್ ಜೇಟ್ಲಿ ಶೀಘ್ರ ಗುಣಮುಖರಾಗಲಿ ಎಂದು ಟ್ವಿಟ್ಟರ್ ಮೂಲಕ ಹಾರೈಸಿದ್ದಾರೆ. ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕಾಂಗ್ರೆಸ್ ನ ಸಲ್ಮಾನ್ ಖುರ್ಷಿದ್ ಹಾಗೂ ರಾಷ್ಟ್ರೀಯ ಜನತಾ ದಳದ ಲಾಲೂ ಪ್ರಸಾದ್ ಯಾದವ್ ಕೂಡ ಜೇಟ್ಲಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

English summary
Reports that Finance Minister Arun Jaitley is unwell and is abroad for treatment - just days before he is to present the Budget -- had leaders across the political spectrum rooting for his quick recovery on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X