ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಂಗ್ ಸೂಟ್‌ನಲ್ಲಿ 8,500 ಅಡಿ ಎತ್ತರದಿಂದ ಜಿಗಿದು ಐಎಎಫ್ ಪೈಲಟ್ ಸಾಧನೆ

|
Google Oneindia Kannada News

ನವದೆಹಲಿ, ಜುಲೈ 30: ವಿಂಗ್ ಸೂಟ್ ಧರಿಸಿ ಆಕಾಶದಿಂದ ಜಿಗಿಯುವ ಮೂಲಕ ಈ ಸಾಧನೆ ಮಾಡಿದ ಭಾರತೀಯ ವಾಯುಪಡೆಯ (ಐಎಎಫ್) ಮೊದಲ ಪೈಲಟ್ ಎಂಬ ಖ್ಯಾತಿಗೆ ವಿಂಗ್ ಕಮಾಂಡರ್ ತರುಣ್ ಚೌಧರಿ ಪಾತ್ರರಾಗಿದ್ದಾರೆ.

ಜುಲೈ 21ರಂದು ಅವರು ಕಾರ್ಗಿಲ್ ವಿಜಯ ದಿವಸ ಆಚರಣೆಯ ಅಂಗವಾಗಿ ಎಂಐ-17 ಹೆಲಿಕಾಪ್ಟರ್‌ನಿಂದ 8,500 ಅಡಿ ಎತ್ತರದಿಂದ ಜಿಗಿದು ಇತಿಹಾಸ ನಿರ್ಮಿಸಿದ್ದಾರೆ.

ವಾಯುಪಡೆ ಸೇರಿದ ಅರಿ ಭಯಂಕರ ಅಪಾಚೆ ಹೆಲಿಕಾಪ್ಟರ್‌ಗಳು ವಾಯುಪಡೆ ಸೇರಿದ ಅರಿ ಭಯಂಕರ ಅಪಾಚೆ ಹೆಲಿಕಾಪ್ಟರ್‌ಗಳು

'ವಿಂಗ್ ಕಮಾಂಡರ್ ತರುಣ್ ಚೌಧರಿ ಎಸ್‌ಸಿ ಅವರು ಜುಲೈ 21ರಂದು ವಿಂಗ್ ಸೂಟ್ ಸ್ಕೈಡೈವ್ ಜಿಗಿತವನ್ನು ಯಶಸ್ವಿಯಾಗಿ ಮಾಡುವ ಮೂಲಕ ಮೈಲುಗಲ್ಲು ಸ್ಥಾಪಿಸಿದ್ದಾರೆ. ಇದು ಪೈಲಟ್ ಒಬ್ಬರ ಮೊದಲ ಐಎಎಫ್ ವಿಂಗ್ ಸೂಟ್ ಸ್ಕೈಡೈವ್ ಜಿಗಿತವಾಗಿದೆ' ಎಂದು ಐಎಎಫ್ ಟ್ವೀಟ್ ಮಾಡಿದೆ.

'ಈ ಸಾಹಸ ಅಥವಾ ಕಾರ್ಯಾಚರಣೆಗಳಲ್ಲಿ ಐಎಎಫ್‌ನ ಉತ್ಸಾಹ ಮತ್ತು ವೃತ್ತಿಪರತೆಯು ಹೆಗ್ಗುರುತನ್ನು ಮೂಡಿಸಿದೆ. ಅಭಿನಂದನೆಗಳು ಮತ್ತು ವೈಭವೋಪೇತವಾಗಿ ಆಕಾಶವನ್ನು ಸ್ಪರ್ಶಿಸಿ' ಎಂದು ವಾಯುಪಡೆ ಹೇಳಿದೆ.

Wing Commander Tarun Chaudhri First IAF Pilot To Do Wingsuit Jump

ಜುಲೈ 21-22ರಂದು ಜೋಧಪುರದ ವಾಯುನೆಲೆಯಲ್ಲಿ ಕಾರ್ಗಿಲ್ ದಿವಸ್ ಆಚರಣೆಯ ವೇಳೆ ಈ ಜಿಗಿತ ಪ್ರದರ್ಶನ ನಡೆಸಲಾಗಿದೆ. ಇದು ಪ್ರೇಕ್ಷಕರು ನೆರೆದ ಸಂದರ್ಭದಲ್ಲಿ ಮೊದಲ ವಿಂಗ್ ಸೂಟ್ ಜಂಪ್ ಆಗಿದೆ ಎಂದು ತಿಳಿಸಿದೆ.

English summary
Wing Commander Tarun Chaudhri became the first IAF pilot to do a wingsuit jump on Jyly 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X