ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮುಂದಿನ ರಾಷ್ಟ್ರಪತಿ ಲಾಲ್ ಕೃಷ್ಣ ಅಡ್ವಾಣಿ?

|
Google Oneindia Kannada News

ನವದೆಹಲಿ, ಮಾರ್ಚ್ 16: ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಅಭೂತಪೂರ್ವ ಗೆಲುವಿನಿಂದಾಗಿ ಬೀಗುತ್ತಿರುವ ಬಿಜೆಪಿಗೆ ತನ್ನದೇ ಪಕ್ಷದ ಅಭ್ಯರ್ಥಿಯನ್ನು ರಾಷ್ಟ್ರಪತಿಯನ್ನಾಗಿ ಆರಿಸುವ ಅವಕಾಶ ಸಿಕ್ಕಿದೆ. ಜುಲೈ ತಿಂಗಳಿನಲ್ಲಿ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅಧಿಕಾರಾವಧಿ ಮುಗಿಯಲಿದ್ದು, ಪಕ್ಷದ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಬಿಜೆಪಿ ರಾಷ್ಟ್ರಪತಿಯನ್ನಾಗಿ ಮಾಡುವ ಎಲ್ಲಾ ಸಾಧ್ಯತೆಗಳೂ ನಿಚ್ಛಳವಾಗಿದೆ.

ಭಾರತದ ಮೊದಲ ಪ್ರಜೆಯ ಹುದ್ದೆಗೆ ನಡೆಯುವ ಚುನಾವಣೆ ಎಲ್ಲ ಚುನಾವಣೆಯಂತಲ್ಲದೆ ಸ್ವಲ್ಪ ಭಿನ್ನವಾಗಿರುತ್ತದೆ. ಹೊಸ ರಾಷ್ಟ್ರಪತಿಯ ನೇಮಕವಾಗುವುದು ಜುಲೈನಲ್ಲೇ ಅದರೂ ಬಿಜೆಪಿಯಂತೂ ಈಗಾಗಲೇ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದೆ. ರಾಷ್ಟ್ರಪತಿ ರೇಸಿನಲ್ಲಿ ಹಲವರ ಹೆಸರು ಕೇಳಿಬರುತ್ತಿದ್ದರೂ ಪ್ರಧಾನಿ ಮೋದಿ ಸಹ ಅಡ್ವಾಣಿ ಅವರನ್ನು ರಾಷ್ಟ್ರಪತಿಯನ್ನಾಗಿ ನೇಮಿಸುವುದಕ್ಕೆ ಉತ್ಸುಕತೆ ತೋರುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ಹೊತ್ತಿನಲ್ಲಿ ರಾಷ್ಟ್ರಪತಿ ಚುನಾವಣೆಯ ಕುರಿತ ಕೆಲವು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ

ಎಲೆಕ್ಟ್ರೋಲ್ ಕಾಲೇಜ್ ಮೂಲಕ ಆಯ್ಕೆ

ಎಲೆಕ್ಟ್ರೋಲ್ ಕಾಲೇಜ್ ಮೂಲಕ ಆಯ್ಕೆ

ಎಲೆಕ್ಟ್ರೋಲ್ ಕಾಲೇಜ್ ಮೂಲಕ ರಾಷ್ಟ್ರಪತಿ ಆಯ್ಕೆ ನಡೆಯುತ್ತದೆ. ಈ ಎಲೆಕ್ಟ್ರೋಲ್ ಕಾಲೇಜ್ ಲೋಕಸಭಾ, ರಾಜ್ಯಸಭಾ, ವಿಧಾನಸಭಾ ಸದಸ್ಯರನ್ನು ಒಳಗೊಂಡಿರುತ್ತದೆ.

ಎರಡು ಕೇಂದ್ರಾಡಳಿತ ಪ್ರದೇಶಗಳೂ ಭಾಗಿ

ಎರಡು ಕೇಂದ್ರಾಡಳಿತ ಪ್ರದೇಶಗಳೂ ಭಾಗಿ

ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಪಾಂಡಿಚೇರಿಯ ಶಾಸಕರೂ ಈ ಚುನಾವಣೆಯಲ್ಲಿ ಭಾಗವಹಿಸುತ್ತಾರೆ.

ಎಲೆಕ್ಟ್ರೋಲ್ ಕಾಲೇಜಿನ ಒಟ್ಟು ಮತಗಳು

ಎಲೆಕ್ಟ್ರೋಲ್ ಕಾಲೇಜಿನ ಒಟ್ಟು ಮತಗಳು

ಎಲೆಕ್ಟ್ರೋಲ್ ಕಾಲೇಜಿನ ಒಟ್ಟು ಮತಗಳು 10.98 ಲಕ್ಷ. ರಾಷ್ಟ್ರಪತಿ ಆಯ್ಕೆಗೆ ಬೇಕಾಗಿರುವ ಸರಳ ಬಹುಮತ 5.49 ಲಕ್ಷ ಎಲೆಕ್ಟ್ರೋಲ್ ಮತಗಳು.

ಮತದ ಮೌಲ್ಯ

ಮತದ ಮೌಲ್ಯ

ಲೋಕಸಭೆ ಮತ್ತು ರಾಜ್ಯಸಭೆಯ ಒಬ್ಬ ಸದಸ್ಯರ ಮತದ ಮೌಲ್ಯ 708 ಎಲೆಕ್ಟ್ರೋಲ್ ಮತಗಳು.

ಶಾಸಕರ ಮತದ ಮೌಲ್ಯ ಭಿನ್ನ

ಶಾಸಕರ ಮತದ ಮೌಲ್ಯ ಭಿನ್ನ

ಆದರೆ ಶಾಸಕರ ಎಲೆಕ್ಟ್ರೋಲ್ ಮತಗಳ ಮೌಲ್ಯ ಆಯಾ ರಾಜ್ಯದ ಜನಸಂಖ್ಯೆಗೆ ಮತ್ತು ಶಾಸಕರ ಸಂಖ್ಯೆಗೆ ತಕ್ಕಂತೆ ಭಿನ್ನವಾಗಿರುತ್ತದೆ. ಆಯಾ ರಾಜ್ಯದ ಒಟ್ಟು ಜನಸಂಖ್ಯೆಯನ್ನು ರಾಜ್ಯದ ಒಟ್ಟು ಶಾಸಕರ ಸಂಖ್ಯೆಯಿಂದ ಭಾಗಿಸಿದಾಗ ಬರುವ ಶೇಷವನ್ನು ಪುನಃ 1000 ದಿಂದ ಭಾಗಿಸಿದಾಗ ಬರುವ ಉತ್ತರವೇ ಆ ರಾಜ್ಯದ ಒಬ್ಬ ಶಾಸಕನ ಎಲೆಕ್ಟ್ರೋಲ್ ವೋಟಿನ ಮೌಲ್ಯವಾಗಿರುತ್ತದೆ.

ಬಿಜೆಪಿಗೆ ಬಹುಮತದ ಕೊರತೆ?

ಬಿಜೆಪಿಗೆ ಬಹುಮತದ ಕೊರತೆ?

ಸದ್ಯಕ್ಕೆ ಬಿಜೆಪಿಗೆ ರಾಷ್ಟ್ರಪತಿ ಆಯ್ಕೆಗೆ ಅಗತ್ಯವಿರುವ 17,500 ಮತಗಳ ಕೊರತೆ ಉಂಟಾಗುತ್ತಿದೆ. ಎಐಎಡಿ ಎಂಕೆ ಮತ್ತು ಬಿಜೆಡಿ ಪಕ್ಷಗಳು ಬೆಂಬಲ ನೀಡಿದ್ದೇ ಆದಲ್ಲಿ ಬಿಜೆಪಿ ತನ್ನದೇ ಅಭ್ಯರ್ಥಿಯನ್ನು ರಾಷ್ಟ್ರಪತಿಯನ್ನಾಗಿ ಆರಿಸಬಹುದು.

ಅಗತ್ಯವಿರುವ ಮತಗಳು

ಅಗತ್ಯವಿರುವ ಮತಗಳು

ಈಗಾಗಲೇ ಬಿಜೆಪಿ ಬಳಿ ಇರುವ ಎಲೆಕ್ಟ್ರೋಲ್ ಮತಗಳು 5.32 ಲಕ್ಷ. ಎಐಎಡಿ ಎಂಕೆ ಮತ್ತು ಬಿಜೆಡಿ ಪಕ್ಷಗಳು ಬೆಂಬಲ ನೀಡಿದರೆ ಬಿಜೆಪಿ 6.28 ಎಲೆಕ್ಟ್ರೋಲ್ ವೋಟುಗಳನ್ನು ಪಡೆಯುತ್ತದೆ.

English summary
The BJP after its big win in Uttar Pradesh and Uttarakhand is in a position to appoint its own candidate as President of India. With support from the AIADMK and the BJD, the BJP can go about chosing its own candidate as it is close to the magic number in the electoral college. The new president will be elected after Pranab Mukherjee retires in July. The question is will the BJP appoint L K Advani as the President of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X