ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕ್ರಿಪ್ಟೋಕರೆನ್ಸಿ ನಿಷೇಧ?, ನಿರ್ಮಲಾ ಸೀತಾರಾಮನ್ ಹೇಳುವುದು ಹೀಗೆ

|
Google Oneindia Kannada News

ನವದೆಹಲಿ, ಫೆಬ್ರವರಿ 11: ಪ್ರಸ್ತುತ ದೇಶದಲ್ಲಿ ಪ್ಟೋಕರೆನ್ಸಿಗಳನ್ನು ನಿಷೇಧಿಸಲಾಗುತ್ತದೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಅಥವಾ ನಿಷೇಧಿಸದಿರುವ ಕುರಿತು ಸೂಕ್ತ ಸಮಾಲೋಚನೆಯ ನಂತರ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು," ಎಂದು ಹೇಳಿದ್ದಾರೆ.

"ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವುದು ಅಥವಾ ನಿಷೇಧಿಸದಿರುವುದನ್ನು ಸಮಾಲೋಚನೆಯ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಕ್ರಿಪ್ಟೋಕರೆನ್ಸಿಗಳನ್ನು (ಅದು) ಕಾನೂನುಬದ್ಧವಾಗಿರಲಿ ಅಥವಾ ಕಾನೂನುಬಾಹಿರವಾಗಿರಲಿ, ಕಾನೂನುಬದ್ಧಗೊಳಿಸಲು ಅಥವಾ ನಿಷೇಧಿಸುವ ಯಾವುದೇ ಕ್ರಮವನ್ನು ಸರ್ಕಾರವು ಕೈಗೊಂಡಿಲ್ಲ. ಇದು ಬೇರೆಯೇ ವಿಚಾರ," ಎಂದು ರಾಜ್ಯಸಭೆಯಲ್ಲಿ ಬಜೆಟ್ ಚರ್ಚೆಗೆ ಪ್ರತಿಕ್ರಿಯಿಸುವಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಣೆ ನೀಡಿದ್ದಾರೆ.

 Digital rupee ಚಲಾವಣೆ ಹೇಗಿರಲಿದೆ?, ಆರ್‌ಬಿಐನಿಂದ ಸುಳಿವು Digital rupee ಚಲಾವಣೆ ಹೇಗಿರಲಿದೆ?, ಆರ್‌ಬಿಐನಿಂದ ಸುಳಿವು

ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳ ಕಾನೂನುಬದ್ಧತೆಗಳ ಬಗ್ಗೆ ಸ್ಪಷ್ಟಪಡಿಸಿದ ಸೀತಾರಾಮನ್, "ನಾವು ಕ್ರಿಪ್ಟೋಕರೆನ್ಸಿಗಳ ಮೇಲೆ ತೆರಿಗೆ ವಿಧಿಸುತ್ತೇವೆ. ಏಕೆಂದರೆ ಅದು ತೆರಿಗೆಯನ್ನು ವಿಧಿಸಲೇ ಬೇಕಾದದ್ದು," ಎಂದಿದ್ದಾರೆ. ಕ್ರಿಪ್ಟೋಕರೆನ್ಸಿ ಕುರಿತು ಕಾಂಗ್ರೆಸ್ ಸದಸ್ಯೆ ಛಾಯಾ ವರ್ಮಾ ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದಾರೆ. ಕ್ರಿಪ್ಟೋಕರೆನ್ಸಿಗೆ ತೆರಿಗೆ ವಿಧಿಸುವ ಕಾನೂನುಬದ್ಧತೆಯ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

"ಬಿಟ್‌ಕಾಯಿನ್, ಎಥೆರಿಯಮ್ ಕಾನೂನುಬದ್ಧವಲ್ಲ": ಹಣಕಾಸು ಕಾರ್ಯದರ್ಶಿ ಮಹತ್ವದ ಹೇಳಿಕೆ

 ಹಣಕಾಸು ಕಾರ್ಯದರ್ಶಿ ಈ ಹಿಂದೆ ಹೇಳಿದ್ದೇನು?

ಹಣಕಾಸು ಕಾರ್ಯದರ್ಶಿ ಈ ಹಿಂದೆ ಹೇಳಿದ್ದೇನು?

ಬಿಟ್‌ಕಾಯಿನ್ ಅಥವಾ ಎಥೆರಿಯಮ್‌ನಂತಹ ಕ್ರಿಪ್ಟೋಕರೆನ್ಸಿಗಳು ಎಂದಿಗೂ ಕಾನೂನುಬದ್ಧ ಆಗುವುದಿಲ್ಲ ಎಂದು ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡಿದ ಡಿಜಿಟಲ್ ರೂಪಾಯಿ ಮಾತ್ರ ಕಾನೂನುಬದ್ಧ ಆಗಿರುತ್ತದೆ ಎಂದು ಈ ಸಂದರ್ಭದಲ್ಲೇ ಸ್ಪಷ್ಟಪಡಿಸಿದ್ದಾರೆ.ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್, "ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ ಬೆಂಬಲಿಸುತ್ತದೆ, ಅದು ಎಂದಿಗೂ ತಪ್ಪು ಅಲ್ಲ. ಹಣ ಆರ್‌ಬಿಐದ್ದು ಆಗಿರುತ್ತದೆ ಆದರೆ ಸ್ವರೂಪ ಡಿಜಿಟಲ್ ಆಗಿರುತ್ತದೆ. ಆರ್‌ಬಿಐ ನೀಡುವ ಡಿಜಿಟಲ್ ರೂಪಾಯಿ ಕಾನೂನುಬದ್ಧ ಆಗಿರುತ್ತದೆ," ಎಂದು ತಿಳಿಸಿದ್ದಾರೆ.

 ಕ್ರಿಪ್ಟೊದಿಂದಾದ ನಷ್ಟಕ್ಕೆ ಸರ್ಕಾರ ಜವಾಬ್ದಾರಿಯಲ್ಲ

ಕ್ರಿಪ್ಟೊದಿಂದಾದ ನಷ್ಟಕ್ಕೆ ಸರ್ಕಾರ ಜವಾಬ್ದಾರಿಯಲ್ಲ

"ಕ್ರಿಪ್ಟೋ ಸ್ವತ್ತುಗಳು ಆಸ್ತಿಗಳಾಗಿದ್ದು, ಅದರ ಮೌಲ್ಯವನ್ನು ಎರಡು ಜನರ ನಡುವೆ ನಿರ್ಧರಿಸಲಾಗುತ್ತದೆ. ನೀವು ಚಿನ್ನ, ವಜ್ರ ಮತ್ತು ಕ್ರಿಪ್ಟೋ ಆಸ್ತಿಗಳನ್ನು ಖರೀದಿಸಬಹುದು. ಆದರೆ ಆ ಮೌಲ್ಯಕ್ಕೆ ಸರ್ಕಾರದಿಂದ ಅಧಿಕೃತತೆ ಇರುವುದಿಲ್ಲ. ಖಾಸಗಿ ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವ ಜನರು ಅದು ಸರ್ಕಾರದ ಅಧಿಕಾರವನ್ನು ಹೊಂದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ನಿಮ್ಮ ಹೂಡಿಕೆಗಳು ಯಶಸ್ವಿಯಾಗುತ್ತವೆಯೋ ಇಲ್ಲವೋ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಹಣವನ್ನು ಕಳೆದುಕೊಳ್ಳಬಹುದು ಮತ್ತು ಇದಕ್ಕೆ ಸರ್ಕಾರವು ಜವಾಬ್ದಾರರಾಗಿರುವುದಿಲ್ಲ," ಎಂದು ಈ ಸಂದರ್ಭದಲ್ಲೇ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಎಚ್ಚರಿಕೆ ನೀಡಿದ್ದಾರೆ.

 ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರಷ್ಟು ತೆರಿಗೆ

ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರಷ್ಟು ತೆರಿಗೆ

ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ತೆರಿಗೆ ವಿಧಿಸಲಾಗುತ್ತದೆ. ಯಾವುದೇ ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರ ತೆರಿಗೆ ಕಡಿತಗೊಳ್ಳಲಿದೆ. ಇದರಲ್ಲಿ ಯಾವುದೇ ಡಿಡಕ್ಷನ್ ಇಲ್ಲ. ಆದಾಯ ಯಾವುದೇ ಹೊಂದಾಣಿಕೆಗೆ ಅವಕಾಶ ಇಲ್ಲ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಕೊಡುಗೆ(ಗಿಫ್ಟ್ ಮಾಡಿದರೂ) ಪಡೆಯುವವರಿಗೆ ಕೂಡ ತೆರಿಗೆ ಆಗುತ್ತದೆ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಶೇ.1ರಷ್ಟು ಟಿಡಿಎಸ್​ ಪ್ರಸ್ತಾವಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆಯ ಸಂದರ್ಭದಲ್ಲಿ ಹೇಳಿದ್ದಾರೆ.

 ಕ್ರಿಪ್ಟೋ ಬಗ್ಗೆ ಆರ್‌ಬಿಐ ಗವರ್ನರ್‌ ಎಚ್ಚರಿಕೆ

ಕ್ರಿಪ್ಟೋ ಬಗ್ಗೆ ಆರ್‌ಬಿಐ ಗವರ್ನರ್‌ ಎಚ್ಚರಿಕೆ

"ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವವರಿಗೆ ಈ ಬಗ್ಗೆ ಎಚ್ಚರಿಕೆ ನೀಡುವುದು ನನ್ನ ಕರ್ತವ್ಯ. ಯಾರು ಹೂಡಿಕೆದಾರರು ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ ಅವರು ತಮ್ಮ ಸ್ವಂತ ಅಪಾಯದಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ಆಧಾರವಾಗಿರುವ ಇಲ್ಲ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು," ಎಂದು ನಿನ್ನೆಯಷ್ಟೇ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಎಚ್ಚರಿಕೆ ನೀಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Will Cryptocurrencies Be Banned In India, What Nirmala Sitharaman Says In Rajya Sabha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X