ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂಪುಟದಲ್ಲಿ ಅಮಿತ್ ಶಾ ಗೆ ಹಣಕಾಸು ಸಚಿವ ಸ್ಥಾನ?

|
Google Oneindia Kannada News

Recommended Video

ನರೇಂದ್ರ ಮೋದಿ ಸಂಪುಟದಲ್ಲಿ ಅಮಿತ್ ಶಾಗೆ ಯಾವ ಸ್ಥಾನ? | Oneindia Kannada

ನವದೆಹಲಿ, ಮೇ 29: ನರೇಂದ್ರ ಮೋದಿ ಅವರ ಸಂಪುಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರು ಹಣಕಾಸು ಸಚಿವ ಸ್ಥಾನದ ಜವಾಬ್ದಾರಿ ಹೊರಲಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿದ್ದಾಗಿ ಜೀ ನ್ಯೂಸ್ ವೆಬ್ ಸೈಟ್ ವರದಿ ಮಾಡಿದೆ.

ಆರ್ಥಿಕತಜ್ಞ ಸುಬ್ರಮಣಿಯನ್ ಸ್ವಾಮಿ ಹಾಗೆ ಟ್ವೀಟ್ ಮಾಡಿದ್ದೇಕೆ? ಆರ್ಥಿಕತಜ್ಞ ಸುಬ್ರಮಣಿಯನ್ ಸ್ವಾಮಿ ಹಾಗೆ ಟ್ವೀಟ್ ಮಾಡಿದ್ದೇಕೆ?

ಭಾರತದ ಹದಿನೈದನೇ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮೇ 30 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಸಂದರ್ಭದಲ್ಲಿ ಮಂತ್ರಿಯಾಗಿ ಅಮಿತ್ ಶಾ ಅವರೂ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ರಾಜ್ಯಸಭಾ ಸದಸ್ಯತ್ವಕ್ಕೆ ಅಮಿತ್ ಶಾ, ಸ್ಮೃತಿ ಇರಾನಿ ರಾಜೀನಾಮೆರಾಜ್ಯಸಭಾ ಸದಸ್ಯತ್ವಕ್ಕೆ ಅಮಿತ್ ಶಾ, ಸ್ಮೃತಿ ಇರಾನಿ ರಾಜೀನಾಮೆ

ಹಣಕಾಸು ಸಚಿವ ಸ್ಥಾನವನ್ನು ಹಿಂದಿನ ಎನ್ ಡಿಎ ಸರ್ಕಾರದಲ್ಲಿ ಅರುಣ್ ಜೇಟ್ಲಿ ಅವರು ನಿರ್ವಹಿಸಿದ್ದರು. ಆದರೆ ಅನಾರೋಗ್ಯದಿಂದ ಬಳಲುತ್ತಿರುವ ಅವರು ತಮಗೆ ಈ ಬಾರಿ ಯಾವುದೇ ಜವಾಬ್ದಾರಿಯನ್ನು ನೀಡಬಾರದೆಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಆದ್ದರಿಂದ ಈ ಸ್ಥಾನವನ್ನು ಅಮಿತ್ ಶಾ ಅವರಿಗೆ ನೀಡಬಹುದು ಎಂದು ಜೀ ನ್ಯೂಸ್ ಹೇಳಿದೆ. ಇದಕ್ಕೂ ಮುನ್ನ ಗೃಹ ಸಚಿವ ಸ್ಥಾನವನ್ನು ಅಮಿತ್ ಶಾ ನಿರ್ವಹಿಸಬಹುದು ಎಂಬ ವದಂತಿಯೂ ಇತ್ತು.

Will Amit Shah be finance minister: says report

ಲೋಕಸಭೆ ಚುನಾವಣೆಯಲ್ಲಿ ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಮಿತ್ ಶಾ ಕಾಂಗ್ರೆಸ್ ನ ಸಿಜೆ ಚಾವ್ಡಾ ಅವರನ್ನು 5.57 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಅಮಿತ್ ಶಾ ಅವರು 8.74 ಲಕ್ಷ ಮತಗಳನ್ನು ಪಡೆದಿದ್ದರೆ ಚಾವ್ಡಾ ಕೇವಲ 3.27 ಲಕ್ಷ ಮತಗಳನ್ನು ಪಡೆದಿದ್ದರು.

ಮೋದಿ ಸಂಪುಟಕ್ಕೆ ಅಮಿತ್, ಅಧ್ಯಕ್ಷ ಸ್ಥಾನಕ್ಕೆ ಯಾರು ಸೂಕ್ತ?ಮೋದಿ ಸಂಪುಟಕ್ಕೆ ಅಮಿತ್, ಅಧ್ಯಕ್ಷ ಸ್ಥಾನಕ್ಕೆ ಯಾರು ಸೂಕ್ತ?

ಗುಜರಾತಿನಿಂದ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಅಮಿತ್ ಶಾ ಅವರು ಈಗಾಗಲೇ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಲೋಕಸಭಾ ಸದಸ್ಯರಾಗಿ ಕೇಂದ್ರ ಸಚಿವ ಸಂಪುಟ ಸೇರಲಿದ್ದಾರೆ.

English summary
BJP president Amit Shah will take responsibility of Finance ministry in PM Narendra Modi's New NDA government, Zee news report quoted
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X