ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯಾದೊಡನೆ ಪತಿಯ ಧರ್ಮಕ್ಕೆ ಸೇರಲೇಬೇಕೆಂದಿಲ್ಲ: ಸುಪ್ರೀಂ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಡಿಸೆಂಬರ್ 8: ಮದುವೆಯ ನಂತರ ಪತ್ನಿಯು ತನ್ನ ಪತಿಯ ಮತಕ್ಕೆ ಮತಾಂತರವಾಗಬೇಕಿಲ್ಲ, ಅಥವಾ ಮದುವೆಯಾಗುತ್ತಿದ್ದಂತೆಯೇ ಸಹಜವಾಗಿಯೇ ಪತ್ನಿಯ ಮತವೂ ಪತಿಯ ಮತವಾಗಿ ಬದಲಾಗಬೇಕಿಲ್ಲ ಎಂಬ ಮಹತ್ವದ ಹೇಳಿಕೆಯೊಂದನ್ನು ಸುಪ್ರೀಂ ಕೋರ್ಟ್ ನೀಡಿದೆ.

ಕಾಲೇಜಿನ ವಿರುದ್ಧ ಕೋರ್ಟ್ ಮೊರೆ ಹೋಗಲಿದ್ದಾರೆ ಹಾದಿಯಾ ತಂದೆಕಾಲೇಜಿನ ವಿರುದ್ಧ ಕೋರ್ಟ್ ಮೊರೆ ಹೋಗಲಿದ್ದಾರೆ ಹಾದಿಯಾ ತಂದೆ

"ಬೇರೆ ಸಮುದಾಯದ ಪುರುಷನನ್ನು ಮದುವೆಯಾಗಿದ್ದ ಪಾರ್ಸಿ ಮಹಿಳೆಯೊಬ್ಬರು ತಮ್ಮ ತಂದೆ-ತಾಯಿಗಳ ಅಂತ್ಯ ಸಂಸ್ಕಾರ ಮಾಡುವಂತಿಲ್ಲ, ಏಕೆಂದರೆ ಆಕೆ ಪಾರ್ಸಿ ಸಮುದಾಯಕ್ಕೆ ಸೇರಿದವಳಲ್ಲ" ಎಂಬ ವಿವಾದಾತ್ಮಕ ಪ್ರಕರಣವೊಂದನ್ನು ಕೈಗೆತ್ತಿಕೊಂಡಿದ್ದ ನ್ಯಾ.ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠ, 'ಆಕೆ ಮದುವೆಯಾದ ಮಾತ್ರಕ್ಕೆ ಪತಿಯ ಮತಕ್ಕೆ ಮತಾಂತರವಾಗುವ ಅಗತ್ಯವಿಲ್ಲ. ಅಥವಾ ಮದುವೆಯಾಗುತ್ತಿದ್ದಂತೆ ಸಹಜವಾಗಿಯೇ ಆಕೆಯ ಮತ ಬದಲಾವಣೆಯಾಗಬೇಕು ಎಂಬ ನಿಯಮವೂ ಇಲ್ಲ. ಆಕೆ ತನ್ನ ಪಾರ್ಸಿ ನಂಬಿಕೆಯಂತೇ ತನ್ನ ತಂದೆ-ತಾಯಿಗಳ ಅಂತ್ಯಕ್ರಿಯೆ ಮಾಡಬಹುದು' ಎಂದು ಹೇಳಿದೆ.

Wife’s religion does not merge with husband’s after marriage: Supreme Court

ಪ್ರತಿಯೊಬ್ಬರೂ ಅವರವರ ನಂಬಿಕೆಗೆ, ಪರಂಪರೆಗೆ ಗೌರವ ನೀಡಬೇಕು ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಈ ಮೂಲಕ ತಿಳಿಸಿದೆ.

English summary
The Supreme Court has held that a woman's religion does not merge with that of her husbands after marriage. The Bench headed by Chief Justice of India, Dipak Misra observed that it was arbitrary that a Parsi man marrying outside the community was not barred from entering the Tower of Silence, but a woman was.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X