ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡು ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ವೈದ್ಯೆ

|
Google Oneindia Kannada News

ನವದೆಹಲಿ, ಏಪ್ರಿಲ್ 4: ಕೊರೊನಾ ಸೋಂಕಿತ ವೈದ್ಯೆಯೊಬ್ಬರು ಕೊರೊನಾ ದೃಢಪಟ್ಟು ಒಂದು ದಿನದೊಳಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯು ಏಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರೊಬ್ಬರ ಪತ್ನಿ ಆಗಿದ್ದಾರೆ.ಈ ಘಟನೆ ಕುರಿತು ವಿವರಿಸಿರುವ ವೈದ್ಯರು' ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗದ್ದಾರೆ. ಸಿ ಸೆಕ್ಷನ್ ಮೂಲಕ ಒಂದು ವಾರದ ಮುಂಚೆಯೇ ಹೆರಿಗೆ ಮಾಡಲಾಗಿದೆ.

ದೆಹಲಿಯಲ್ಲಿ ವೈದ್ಯ ದಂಪತಿಗೆ ಕೊರೊನಾ: ವೈದ್ಯೆ 9 ತಿಂಗಳ ಗರ್ಭಿಣಿ ದೆಹಲಿಯಲ್ಲಿ ವೈದ್ಯ ದಂಪತಿಗೆ ಕೊರೊನಾ: ವೈದ್ಯೆ 9 ತಿಂಗಳ ಗರ್ಭಿಣಿ

ಮಗುವನ್ನು ತಾಯಿಯೊಂದಿಗಿರಲು ಬಿಡಲಾಗಿದೆ. ಶಿಶುವಿಗೆ ಹಾಲುಣಿಸುವ ಅಗತ್ಯವಿದೆ. ಸ್ತನ್ಯಪಾನದ ಮೂಲಕ ಕೊರೊನಾ ಹರಡಿರುವ ಯಾವುದೇ ಪ್ರಕರಣಗಳಿಲ್ಲ ಎಂದು ತಿಳಿಸಿದ್ದಾರೆ.

Wife Of AIIMS Doctor Gives Birth To A Boy

ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದ ಪ್ರತ್ಯೇಕ ವಾರ್ಡ್‌ನ್ನು ಆಪರೇಷನ್ ಥಿಯೇಟರ್ ಆಗಿ ಪರಿವರ್ತಿಸಲಾಗಿದೆ. ಈ ಬಗ್ಗೆ ನಿಗಾ ಇಡಲು ವೈದ್ಯರ ವಿಶೇಷ ತಂಡವನ್ನು ನಿಯೋಜಿಸಲಾಗಿದೆ.

ಕೊರೊನಾ ಸೋಂಕಿತ ಮಹಿಳೆ ತೀರಾ ಅವಶ್ಯವಿದ್ದಲ್ಲಿ ಮಗುವಿಗೆ ಹಾಲುಣಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ವೈದ್ಯನಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತ್ನಿಯನ್ನು ತಪಾಸಣೆ ಒಳಪಡಿಸಲಾಗಿತ್ತು. ತಪಾಸಣೆ ವೇಳೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದೀಗ ಗರ್ಭಿಣಿಯನ್ನು ಎಮರ್ಜೆನ್ಸಿ ವಾರ್ಡಿನಲ್ಲಿ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಗರ್ಭಿಣಿಗೆ ಚಿಕಿತ್ಸೆ ನೀಡಲಾಗುತ್ತಿದೆ.

English summary
Amid the coronavirus pandemic, doctors at AIIMS ended their day on an upbeat note as a nine-month pregnant COVID-19 patient gave birth to a healthy baby boy Friday evening at the institute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X