ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಡೀಲ್ ಬಗ್ಗೆ ಐಎಎಫ್ ಗೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ

|
Google Oneindia Kannada News

ನವೆದಹಲಿ, ನವೆಂಬರ್ 14 : ಕ್ಲಿಷ್ಟಕರವಾದ ರಫೇಲ್ ಫೈಟರ್ ಜೆಟ್ ಡೀಲ್ ಬಗ್ಗೆ ಇನ್ನಷ್ಟು ವಿವರಗಳನ್ನು ಪಡೆಯುವ ಉದ್ದೇಶದಿಂದ ಏರ್ ವೈಸ್ ಮಾರ್ಷಲ್ ಛಲಪತಿ ಅವರನ್ನು ಸರ್ವೋಚ್ಚ ನ್ಯಾಯಾಲಯ ಕರೆಯಿಸಿಕೊಂಡಿದ್ದು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕೇಳುತ್ತಿರುವ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದಾರೆ.

ರಫೇಲ್ ಡೀಲ್ ಬಗ್ಗೆ ಐಎಎಫ್ ವಿವರಣೆ ನೀಡಲಿ : ಸುಪ್ರೀಂ ಕೋರ್ಟ್ರಫೇಲ್ ಡೀಲ್ ಬಗ್ಗೆ ಐಎಎಫ್ ವಿವರಣೆ ನೀಡಲಿ : ಸುಪ್ರೀಂ ಕೋರ್ಟ್

ಯಾವ್ಯಾವ ಹೊಸ ಜೆಟ್ ವಿಮಾನಗಳು ಭಾರತೀಯ ವಾಯು ಸೇನೆಯನ್ನು ಸೇರಿಕೊಂಡಿವೆ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ, ಸುಖೋಯ್-30 ಜೆಟ್ ವಿಮಾನ ಇತ್ತೀಚೆಗೆ ಸೇರ್ಪಡೆಯಾಗಿದೆ. ಇದು 3.5 ಜನರೇಷನ್ ಜೆಟ್ ವಿಮಾನಗಳಾಗಿದ್ದು, ಭಾರತಕ್ಕೆ ಈಗ 5ನೇ ಜನರೇಷನ್ ಫೈಟರ್ ವಿಮಾನಗಳ ಅಗತ್ಯವಿರುವುದರಿಂದ ರಫೇಲ್ ಫೈಟರ್ ಜೆಟ್ ವಿಮಾನಗಳನ್ನು ಖರೀದಿಸಲಾಗುತ್ತಿದೆ ಎಂದು ಉತ್ತರಿಸಿದರು.

ರಫೇಲ್ ಒಪ್ಪಂದ: ಸುಪ್ರೀಂಕೋರ್ಟ್‌ನಲ್ಲಿ ಕಾವೇರಿದ ಚರ್ಚೆ ರಫೇಲ್ ಒಪ್ಪಂದ: ಸುಪ್ರೀಂಕೋರ್ಟ್‌ನಲ್ಲಿ ಕಾವೇರಿದ ಚರ್ಚೆ

2015ರಲ್ಲಿ ರೂಪಿಸಲಾಗಿದ್ದ ಆಫ್ಸೆಟ್ ಮಾರ್ಗದರ್ಶಿಯನ್ನು ಏಕೆ ಬದಲಾಯಿಸಲಾಯಿತು? ದೇಶದ ಹಿತಾಸಕ್ತಿಯ ಗತಿಯೇನು? ಆಫ್ಸೆಟ್ ಪಾರ್ಟನರ್ ಗಳು ಜೆಟ್ ನಿರ್ಮಾಣ ಮಾಡದಿದ್ದರೆ? ಎಂದು ಕೋರ್ಟ್ ಪ್ರಶ್ನೆಗಳನ್ನೆಸೆದಿದೆ. ಇದಕ್ಕೆ, ಡಿಫೆನ್ಸ್ ಆಫ್ಸೆಟ್ ಮಾರ್ಗದರ್ಶಿಗಳು ಯಾವುವು ಎಂದು ವಿವರಣೆ ನೀಡಿದ ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ಪ್ರಮುಖ ಒಪ್ಪಂದದ ಜೊತೆಗೇ ಆಫ್ಸೆಟ್ ಒಪ್ಪಂದ ಕೂಡ ಇರುತ್ತದೆ ಎಂದರು.

Why the offset guidelines were changed : SC asks IAF

ಆಫ್ಸೆಟ್ ಪಾರ್ಟನರ್ ಗಳನ್ನು ಮಾರಾಟಗಾರರೇ ಆಯ್ಕೆ ಮಾಡುತ್ತಾರೆ. ರಫೇಲ್ ಫೈಟರ್ ಜೆಟ್ ಗಳನ್ನು ನಿರ್ಮಾಣ ಮಾಡುತ್ತಿರುವ ಡಸಾಲ್ಟ್ ಕಂಪನಿ ಇನ್ನೂ ಸರಕಾರಕ್ಕೆ ಆಫ್ಸೆಟ್ ಪಾರ್ಟನರ್ ಗಳ ಮಾಹಿತಿಯನ್ನು ಅಧಿಕೃತವಾಗಿ ನೀಡಿಲ್ಲ ಎಂದು ಅಡ್ವೊಕೇಟ್ ಜನರಲ್ ಕೆಕೆ ವೇಣುಗೋಪಾಲ್ ಅವರು ವಿವರಣೆ ನೀಡಿದರು.

English summary
Rafale Jet Deal Case: Supreme Court asks Additional Secretary Defence as to why the offset guidelines were changed in 2015. What about country's interest? What if the offset partner doesn't do any production?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X