ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಹಾನ್ ವಿಜ್ಞಾನಿ' ಮನೀಷ್ ಸಿಸೋಡಿಯಾ ಫುಲ್ ಟ್ರೆಂಡಿಂಗ್

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಜನವರಿ 28: ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಟ್ರಾಲ್ ಆಗುತ್ತಿದ್ದಾರೆ. #ScientistSisodia ಬಳಸಿ ಟ್ವಿಟ್ಟರ್ ನಲ್ಲಿ ಗೇಲಿ ಮಾಡಲಾಗುತ್ತಿದೆ. ಇಷ್ಟಕ್ಕೂ ಸಿಸೋಡಿಯಾಗೆ ಸೈಂಟಿಸ್ಟ್ ಪಟ್ಟ ಕಟ್ಟಿದ್ದೇಕೆ? ಯಾಕೆ ವೈರಲ್ ಆಗುತ್ತಿದೆ ಅವರ ಟ್ರಾಲ್ಸ್ ಇಲ್ಲಿದೆ ಉತ್ತರ...

ದೆಹಲಿಯ ಕುಡಿಯುವ ನೀರಿನ ಪೂರೈಕೆ ಅಸಮರ್ಪಕವಾಗಿರುವ ಬಗ್ಗೆ ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ಸಿಸೋಡಿಯಾ ನೀಡಿದ್ದ ಸಮರ್ಥನೆ ಈಗ ಟ್ರೆಂಡ್ ಆಗಿದೆ.

ಮೇ 4, 2019ರಂದು ಪತ್ರಕರ್ತನೊಬ್ಬ, ದೆಹಲಿಯಲ್ಲಿ ಕಲುಷಿತಗೊಳ್ಳುತ್ತಿರುವ ಕುಡಿಯುವ ನೀರಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಸಿಸೋಡಿಯಾ, "ಸೂಕ್ತವಾದ ಸಮಯದಲ್ಲಿ ನೀರು ಹಿಡಿಯದಿರುವ ಕಾರಣ ದೆಹಲಿ ಜನತೆ ಅಶುದ್ಧ ನೀರನ್ನು ಪಡೆಯುತ್ತಿದ್ದಾರೆ" ಎಂದಿದ್ದರು.

"ನೀರಿನ ಪೂರೈಕೆ ಇಲ್ಲದ ವೇಳೆಯಲ್ಲಿ ಮೋಟರ್‌ ಚಾಲನೆ ಮಾಡಿದಲ್ಲಿ, ಪೈಪ್‌ಲೈನ್‌ ಗಳಲ್ಲಿರುವ ಕಸವನ್ನು ಮೋಟರ್‌ ಪಂಪ್ ಮಾಡುತ್ತದೆ. ನೀರಿನ ಪೂರೈಕೆ ಇಲ್ಲದ ವೇಳೆಯಲ್ಲಿ ಮೋಟರ್‌ ಚಾಲೂ ಮಾಡಿದರೆ ಕಸವನ್ನು ಮೇಲೆತ್ತುತ್ತದೆ ಎಂದು ವೈಜ್ಞಾನಿಕವಾಗಿ ವಿವರಣೆ ನೀಡಿದ್ದರು. ಇದನ್ನು ಕಂಡ ಟ್ವೀಟ್ ಲೋಕ ಈಗ ಟ್ರೆಂಡ್ ಶುರು ಮಾಡಿಕೊಂಡು ಐನ್ ಸ್ಟೀನ್, ಟೆಸ್ಲಾ ಜೊತೆ ಹೋಲಿಸಿ, ನೊಬೆಲ್ ಪಾರಿತೋಷಕವನ್ನು ಸಿಸೋಡಿಯಾಗೆ ನೀಡಿದ್ದಾರೆ.

ನೊಬೆಲ್ ಪ್ರಶಸ್ತಿ ಗೆದ್ದ ಸಿಸೋಡಿಯಾ

ಮೋಟರ್ ಹಾಗೂ ಪೈಪ್ ಲೈನ್ ಜಲ ಪೂರೈಕೆ ತಜ್ಞ ಮನೀಷ್ ಸಿಸೋಡಿಯಾ ಅವರಿಗೆ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೈನ್ ನೊಬೆಲ್ ಪ್ರಶಸ್ತಿ ನೀಡುತ್ತಿರುವ ಹಾಗೆ ಚಿತ್ರ ಹಾಕಿ, ಟ್ರಾಲ್ ಮಾಡಲಾಗಿದೆ.

ಜಲಪೂರೈಕೆ ತಂತ್ರಜ್ಞಾನದ ಕಲಿತಿರುವ ಮನೀಷ್

ವಿಜ್ಞಾನಿ ಸಿಸೋಡಿಯಾ ಅವರನ್ನು ಸಾರ್ವಕಾಲಿಕ ಶ್ರೇಷ್ಠ ವಿಜ್ಞಾನಿಗಳಾದ ಅಲ್ಬರ್ಟ್ ಐನ್ ಸ್ಟೈನ್, ನಿಕೋಲಾ ಟೆಸ್ಲಾ ಸಾಲಿಗೆ ಸೇರಿಸಲಾಗಿದೆ.

ದೇಶ ಒಡೆಯುವ ಎಎಪಿ

ಭಾರತದಿಂದ ಅಸ್ಸಾಂ ಪ್ರತ್ಯೇಕವಾಗಬೇಕೆಂದು ಕೆಲವರು ಕೂಗೆತ್ತಿದ್ದರೆ, ಎಎಪಿಯವರು ದೆಹಲಿಯನ್ನು ಭಾರತದಿಂದ ಪ್ರತ್ಯೇಕಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ಬೆಂಬಲಿಗರೊಬ್ಬರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಆಧುನಿಕ ಭೌತವಿಜ್ಞಾನ

ದೆಹಲಿಯಲ್ಲಿ ಆಧುನಿಕ ಭೌತವಿಜ್ಞಾನ ಕಲಿಯುವುದು ಹೇಗೆ ಎಂದರೆ ಇಲ್ಲಿ ನೋಡಿ ಫ್ಲ್ಯೂಯಿಡ್ ಮೆಕಾನಿಕ್ಸ್ ಆದ ಮೇಲೆ ಕಿರ್ಚೋಫ್ ನಿಯಮ ಕಲಿಯುವುದು ಹೀಗೆ ನೋಡಿ ಎಂದು ಚಿತ್ರ ಹಾಕಲಾಗಿದೆ.

ಸಿಸೋಡಿಯಾಗೆ ಮತ ಹಾಕಬೇಡಿ

ವಿಜ್ಞಾನಿ ಸಿಸೋಡಿಯಾಗೆ ಮತ ಹಾಕಬೇಡಿ, ಗಣಿತಜ್ಞ ಅರವಿಂದ್ ಕೇಜ್ರಿವಾಲ್ ಗೂ ಮತ ಹಾಕಬೇಡಿ. pi-ta-go, ಐನ್ ಸ್ಟೈನ್, ನ್ಯೂಟನ್ ಹಾಗೂ ಕ್ಲೀನ್ ವಾಟರ್ ಥಿಯರಿ ಪ್ರತಿಪಾದಿಸಿರುವ ಸಿಸೋಡಿಯಾ ಎಂದು ಚಿತ್ರ ಮಾಡಿ ಹಾಕಲಾಗಿದೆ.

English summary
Delhi Deputy Chief Minister Manish Sisodia is being trolled on Twitter after a video of him went viral on social media, where he can be seen defending the poor quality of Delhi's water supply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X