ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆ ನೋಟು ಜಮೆಗೆ ಕಾಲಾವಕಾಶ ನೀಡಲು ಸರಕಾರಕ್ಕೆ ಏಕೆ ಸಾಧ್ಯವಿಲ್ಲ?

ಹಳೆ 500, 1000 ರುಪಾಯಿ ನೋಟುಗಳನ್ನು ಮಾರ್ಚ್ 31ರವರೆಗೆ ಜಮೆ ಮಾಡಿಸಿಕೊಳ್ತೀರಾ? ಈ ಬಗ್ಗೆ ಅಫಿಡವಿಟ್ ಸಲ್ಲಿಸಿ ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ. ಇದಕ್ಕೆ ಎಜಿ, ಹಳೆ ನೋಟನ್ನು ಜಮೆ ಸಾಧ್ಯವಿಲ್ಲ ಎಂದುತ್ತರಿಸಿದ್ದಾರೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮಾರ್ಚ್ 22: ನಿಷೇಧವಾದ 500, 1000 ರುಪಾಯಿ ನೋಟುಗಳನ್ನು ಮಾರ್ಚ್ 31ರವರೆಗೆ ಜಮೆ ಮಾಡಿಸಿಕೊಳ್ತೀರಾ ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸಿ ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ವಿಚಾರದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ತೀವಿ ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಅಟಾರ್ನಿ ಜನರಲ್ ಈ ಬಗ್ಗೆ ಕೋರ್ಟ್ ಗೆ ಮಾಹಿತಿ ನೀಡಿದ್ದು, ಡಿಸೆಂಬರ್ 30, 2016ರ ನಂತರ ಅಮಾನ್ಯವಾದ ನೋಟುಗಳ ಜಮೆ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಮಾರ್ಚ್ 31ರವರೆಗೆ ಇದ್ದ ಅಮಾನ್ಯ ನೋಟುಗಳ ಜಮೆ ಕಾಲಾವಕಾಶವನ್ನು ಸರಕಾರ ಏಕೆ ಕೊನೆಗೊಳಿಸಿತು ಎಂದು ಪ್ರಶ್ನಿಸಿ, ಸುಪ್ರೀಂಗೆ ಅರ್ಜಿ ಸಲ್ಲಿಸಲಾಗಿತ್ತು.[ಹಳೆ ನೋಟುಗಳನ್ನು ಇಟ್ಟುಕೊಂಡವರಿಗೆ ಕಾದಿದೆ ಗಂಡಾಂತರ]

Why government will not extend deadline to deposit old currency notes

ಕಾನೂನಿನ ಪ್ರಕಾರ ಡಿಸೆಂಬರ್ 20, 2016 ಕೊನೆ ದಿನ ಎಂದು ತಿಳಿಸಲಾಗಿತ್ತು. ಅದರೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮಾರ್ಚ್ 31, 2017ರವರೆಗೆ ಜಮೆ ಮಾಡಬಹುದು ಎಂದಿದ್ದರು. ಕೊನೆಗೆ ಕಾನೂನಿನ ಪ್ರಕಾರ ಏನು ಹೇಳುತ್ತದೋ ಅದರಂತೆ ನಡೆಯಲು ತೀರ್ಮಾನಿಸಲಾಗಿದೆ.

ನಾವೀಗ ಪ್ರಧಾನಿ ಭಾಷಣದಲ್ಲಿ ಹೇಳಿದ್ದಕ್ಕಿಂತ, ಕಾನೂನಿನ ಹಾಗೆ ನಡೆಯಲು ನಿರ್ಧರಿಸಿದ್ದೇವೆ. ಸ್ಪೆಸಿಫೈಡ್ ಬ್ಯಾಂಕ್ ನೋಟ್ಸ್ ಸುಗ್ರೀವಾಜ್ಞೆ 2016 ಅನ್ನು ಉಲ್ಲೇಖಿಸಿ, ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದರು. ಪ್ರಧಾನಿಯಾಗಲೀ ರಿಸರ್ವ್ ಬ್ಯಾಂಕ್ ಆಗಲಿ ಕಾಲಾವಕಾಶ ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಇದು ಕಾನೂನಿನ ಪ್ರಕ್ರಿಯೆ ಎಂದು ಎಜಿ ಹೇಳಿದರು.[ಹಳೆ ನೋಟು ಇಸಿದುಕೊಳ್ಳದ ಆರ್ಬಿಐ, ರೊಚ್ಚಿಗೆದ್ದ ಜನರು]

ನೋಟು ಅಮಾನ್ಯದ ನಿರ್ಧಾರದಿಂದ ಜನ ತತ್ತರಿಸಿದ್ದಾರೆ. ಇಂಥದ್ದೊಂದು ನಿಯಮ ಏಕೆ ಮಾಡಿಕೊಂಡಿದ್ದೀರಿ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಎಜಿ, ಸರಕರ ತನ್ನ ವಿವೇಚನೆಗೆ ತಕ್ಕಂತೆ ಅಧಿಕಾರ ಬಳಸಲು ಸಂಸತ್ತೇ ಅವಕಾಶ ನೀಡಿದೆ ಎಂದರು. ಹೊಸ ಕಾನೂನಿನ ಬಗ್ಗೆ ನೋಟಿಸ್ ಹೊರಡಿಸುವ ಅಗತ್ಯವಿಲ್ಲ. ಹಳೆ 500, 1000 ರುಪಾಯಿ ನೋಟು ತುಂಡು ಕಾಗದದ ಸಮಾನ ಎಂದು ಈಗಾಗಲೇ ತಿಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಹೇಳಲಾಗಿದೆ.

English summary
The Supreme Court had on Tuesday directed the centre to file an affidavit asking if it would allow deposit of old currency notes till March 31. The centre however made it clear to the SC that the law will prevail over this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X