ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಾರು? ಶುಕ್ರವಾರ ತೀರ್ಮಾನ

ವಿಪಕ್ಷಗಳು ರಾಷ್ಟ್ರಪ್ರತಿ ಅಭ್ಯರ್ಥಿಯ ಹೆಸರನ್ನು ಶುಕ್ರವಾರ ನಿರ್ಧರಿಸಿದ್ದು ಮಾಜಿ ಸ್ಪೀಕರ್ ಮೀರಾ ಕುಮಾರ್, ಗೋಪಾಲಕೃಷ್ಣ ಗಾಂಧಿ, ಶರದ್ ಯಾದವ್ ಹೆಸರು ದಟ್ಟವಾಗಿ ಕೇಳಿಬರುತ್ತಿದೆ. ಈ ಮೊದಲು ಶರದ್ ಪವಾರ್ ಹೆಸರೂ ಕೇಳಿಬಂದಿತ್ತಾದರೂ ಅವರೇ ಸ್ವತ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ 24: ಭಾರತದ ಮುಂದಿನ ರಾಷ್ಟ್ರಪತಿ ಯಾರು ಎಂಬ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದ್ದು ಆಡಳಿತ ಪಕ್ಷ ಬಿಜೆಪಿಯಿಂದ ದ್ರೌಪದಿ ಮುರ್ಮು ಹೆಸರು ಕೇಳಿಬರುತ್ತಿದೆ. ಇದೇ ಹೊತ್ತಲ್ಲಿ ವಿಪಕ್ಷಗಳು ಪ್ರಬಲ ಪ್ರತಿಸ್ಪರ್ಧಿಯ ಹುಡುಕಾಟದಲ್ಲಿವೆ.

ವಿಪಕ್ಷಗಳು ರಾಷ್ಟ್ರಪ್ರತಿ ಅಭ್ಯರ್ಥಿಯ ಹೆಸರನ್ನು ಶುಕ್ರವಾರ ನಿರ್ಧರಿಸಿದ್ದು ಮಾಜಿ ಸ್ಪೀಕರ್ ಮೀರಾ ಕುಮಾರ್, ಗೋಪಾಲಕೃಷ್ಣ ಗಾಂಧಿ, ಶರದ್ ಯಾದವ್ ಹೆಸರು ದಟ್ಟವಾಗಿ ಕೇಳಿಬರುತ್ತಿದೆ. ಈ ಮೊದಲು ಶರದ್ ಪವಾರ್ ಹೆಸರೂ ಕೇಳಿಬಂದಿತ್ತಾದರೂ ಅವರೇ ಸ್ವತಃ ಅದನ್ನು ತಳ್ಳಿಹಾಕಿದ್ದರು.[ರಾಷ್ಟ್ರಪತಿ ಚುನಾವಣೆ: ಗೋಪಾಲ ಗಾಂಧಿ ವಿಪಕ್ಷಗಳ ಅಂತಿಮ ಆಯ್ಕೆ?]

Who will be the Next President of India?

ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಬಿಜೆಪಿಗೆ ಮುಖಭಂಗವನ್ನುಂಟು ಮಾಡುವುದಕ್ಕಾಗಿಯೇ ವಿಪಕ್ಷಗಳೆಲ್ಲ ಒಟ್ಟಾಗಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿವೆ.[ಇವರನ್ನು ರಾಷ್ಟ್ರಪತಿ ಹುದ್ದೆಗೆ ಮೋದಿ ಏಕೆ ಆರಿಸಲಿಕ್ಕಿಲ್ಲ?]

ಈಗಾಗಲೇ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಬೆಂಬಲವನ್ನೂ ವಿಪಕ್ಷಗಳು ಬೇಡಿದ್ದು, ಇದು ಆಡಳಿತ ಪಕ್ಷದ ಒತ್ತಡವನ್ನು ಹೆಚ್ಚಿಸಲಿದೆ. .

ಇದೇ ಜುಲೈ 14 ರಂದು ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಮುಗಿಯಲಿದ್ದು, ಅದಕ್ಕೂ ಮೊದಲೇ ಚುನಾವಣೆ ನಡೆಯಬೇಕಿದೆ.

English summary
The opposition's candidate for the next President of India will be decided on Friday. Leaders of the opposition will meet on Friday to decide on a joint candidate to fight the presidential polls in July. The talk of a consensus candidate gained momentum after Bihar Chief Minister Nitish Kumar backed a second term for incumbent Pranab Mukherjee, though the Congress so far has been non-committal on a second term for him. His term comes to an end on July 14 and the polls need to be held before that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X