ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂಪುಟಕ್ಕೆ ಯಾರು ಇನ್ ಯಾರು ಔಟ್?

|
Google Oneindia Kannada News

Recommended Video

ಇಂದು ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ | Oneindia kannada

ನವದೆಹಲಿ, ಮೇ 30:ಪ್ರಧಾನಿ ನರೇಂದ್ರ ಮೋದಿ ಜೊತೆಗಿಂದು ಸಂಜೆ 60ಕ್ಕೂ ಅಧಿಕ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಆದರೆ ಮೋದಿ ಜೊತೆಗೆ ಯಾರೆಲ್ಲಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನುವುದು ಈವರೆಗೂ ಗೌಪ್ಯವಾಗಿಡಲಾಗಿದೆ.

2019ರ ಮೋದಿ ಸರ್ಕಾರದ ಕೇಂದ್ರ ಸಚಿವ ಸಂಪುಟ ಸದಸ್ಯರು 2019ರ ಮೋದಿ ಸರ್ಕಾರದ ಕೇಂದ್ರ ಸಚಿವ ಸಂಪುಟ ಸದಸ್ಯರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿ ಯಾರೊಬ್ಬರ ಹೆಸರನ್ನೂ ಕೂಡ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ. ಇಂದು ಮಧ್ಯಾಹ್ನದ ವೇಳೆಗೆ ಈ ಬಗ್ಗೆ ಖಾತ್ರಿ ಸಿಗುವ ಸಾಧ್ಯತೆ ಇದೆ. ಆದಾಗ್ಯೂ ಕೆಲ ಹೆಸರುಗಳ ಬಗ್ಗೆ ಸುದ್ದಿ ಹರಡುತ್ತಿದೆ.

ಮೋದಿ 2.0 ಸಂಪುಟದಲ್ಲಿ ಕರ್ನಾಟಕದಿಂದ ಯಾರಿಗೆ ಅದೃಷ್ಟ? ಮೋದಿ 2.0 ಸಂಪುಟದಲ್ಲಿ ಕರ್ನಾಟಕದಿಂದ ಯಾರಿಗೆ ಅದೃಷ್ಟ?

ಹಾಗೆಯೇ ಅಮಿತ್ ಶಾ ಸರ್ಕಾರ ಸೇರ್ಪಡೆ ಬದಲು ಪಕ್ಷದ ಅಧ್ಯಕ್ಷರಾಗಿಯೇ ಮುಂದುವರೆಯಲಿದ್ದಾರೆ ಎಂದು ತಿಳಿದುಬಂದಿದೆ.

who will be IN and Out for Modi Cabinet

ಮೂಲಗಳ ಪ್ರಕಾರ ಹಿಂದಿನ ಮೋದಿ ಸರ್ಕಾರದಲ್ಲಿ ಹಿರಿಯ ಸಚಿವರಾಗಿದ್ದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಉಮಾ ಭಾರತಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ನೀಡುತ್ತಿಲ್ಲ, ಇವರೆಲ್ಲರೂ ಅನಾರೋಗ್ಯ ಕಾರಣದಿಂದ ಸಂಪುಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಈ ಬಾರಿ ಸಂಪುಟ ರಚನೆ ಮಾಡುವಾಗ ಜಾತಿ ಪ್ರಾಧಾನ್ಯಕ್ಕಿಂತ ರಾಜ್ಯವಾರು ಹಾಗೂ ಮುಂದೆ ಚುನಾವಣೆ ಎದುರಿಸುತ್ತಿರುವ ಕಡೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಲು ಮೋದಿ, ಶಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಅರುಣ್ ಜೇಟ್ಲಿ ನಿವಾಸಕ್ಕೆ ನರೇಂದ್ರ ಮೋದಿ ಭೇಟಿ; ಸಂಪುಟ ಸೇರಲು ಮನವೊಲಿಕೆ ಯತ್ನಅರುಣ್ ಜೇಟ್ಲಿ ನಿವಾಸಕ್ಕೆ ನರೇಂದ್ರ ಮೋದಿ ಭೇಟಿ; ಸಂಪುಟ ಸೇರಲು ಮನವೊಲಿಕೆ ಯತ್ನ

ಹೀಗಾಗಿ ಮಹಾರಾಷ್ಟ್ರ, ಪಶ್ಚಮ ಬಂಗಾಳ, ದೆಹಲಿ, ಹರಿಯಾಣಕ್ಕೆ ಆಧ್ಯತೆ ದೊರೆಯಲಿದೆ. ಇನ್ನು ಬಿಜೆಪಿಗೆ ಉತ್ತಮ ಸ್ಥಾನಗಳನ್ನು ನೀಡಿರುವ ಕರ್ನಾಟಕ , ಒಡಿಶಾ, ತೆಲಂಗಾಣಕ್ಕೆ ಹೆಚ್ಚುವರಿ ಸೀಟುಗಳು ದೊರೆತರೂ ಆಶ್ಚರ್ಯವಿಲ್ಲ.

ಸಂಭಾವ್ಯ ಸಚಿವರು: ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪಿಯುಷ್ ಗೋಯೆಲ್, ಪ್ರಕಾಶ್ ಜಾವ್ಡೇಕರ್, ರವಿಶಂಕರ್ ಪ್ರಸಾದ್, ಧರ್ಮೇಂದ್ರ ಪ್ರಧಾನ್, ಜೆಪಿ ನಡ್ಡ, ಮುಕ್ತಾರ್ ಅಬ್ಬಾಸ್ ನಖ್ವಿ, ಬಾಬುಲ್ ಸುಪ್ರಿಯೋ, ಕಿರಣ್ ರಿಜಿಜು, ಸ್ಮೃತಿ ಇರಾನಿ, ನರೇಂದ್ರ ಸಿಂಗ್ ತೋಮರ್, ನಿರ್ಮಲಾ ಸೀತಾರಾಮನ್, ರಾಜ್ಯವರ್ದನ್ ಸಿಂಗ್ ರಾಥೋಡ್, ಗೌತಮ್ ಗಂಭೀರ್, ಮೀನಾಕ್ಷಿ ಲೇಖಿ, ವರುಣ್ ಗಾಂಧಿ.

English summary
There is a lot of speculation for Modi cabinet , suspences are still going in and around Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X