ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಪರ ಮತ ಚಲಾಯಿಸಿದ ದೇಶಗಳು ಇವು; ಭಾರತ ತಟಸ್ಥವಾಗಿದ್ದು ಈ ಕಾರಣಕ್ಕೆ

|
Google Oneindia Kannada News

ನವದೆಹಲಿ, ಏ. 8: ಉಕ್ರೇನ್ ಯುದ್ಧದ ವೇಳೆ ಬಹಳಷ್ಟು ನಾಗರಿಕರನ್ನು ಹತ್ಯೆಗೈದ ಆರೋಪ ಹೊತ್ತಿರುವ ರಷ್ಯಾ ದೇಶವನ್ನು ನಿನ್ನೆ ವಿಶ್ವಸಂಸ್ಥೆ ಮಾನವಹಕ್ಕುಗಳ ಮಂಡಳಿ (UN Human Rights Council) ಯಿಂದ ಅಮಾನತು ಮಾಡಲಾಗಿದೆ. ವಿಶ್ವಸಂಸ್ಥೆ ಮಹಾಸಭೆಯಲ್ಲಿ ನಿನ್ನೆ ರಷ್ಯಾವನ್ನು ಮಂಡಳಿಯಿಂದ ಅಮಾನತುಗೊಳಿಸುವ ನಿರ್ಣಯ ಹೊರಡಿಸಿ ಮತ ಹಾಕಲಾಗಿತ್ತು 197 ಸದಸ್ಯ ದೇಶಗಳ ಪೈಕಿ ರಷ್ಯಾವನ್ನು ಅಮಾನತುಗೊಳಿಸುವ ನಿರ್ಣಯದ ಪರವಾಗಿ 93 ದೇಶಗಳು ಮತ ಚಲಾಯಿಸಿದವು. ಚೀನಾ ಸೇರಿದಂತೆ 24 ದೇಶಗಳು ನಿರ್ಣಯಕ್ಕೆ ವಿರುದ್ಧವಾಗಿ ಮತ ಚಲಾಯಿಸಿವೆ. ಭಾರತ, ಪಾಕಿಸ್ತಾನ ಸೇರಿದಂತೆ 58 ದೇಶಗಳು ತಟಸ್ತ ನಿಲುವು ತೋರಿ ಮತದಾನದಿಂದ ದೂರ ಉಳಿದವು.

ಕುತೂಹಲ ಎಂದರೆ, ಮತದಾನಕ್ಕೆ ಮೊದಲು ರಷ್ಯಾ ದೇಶ ಒಂದು ಎಚ್ಚರಿಕೆ ಸಂದೇಶ ಹೊರಡಿಸಿತ್ತು. ಮತದಾನದಲ್ಲಿ ಪಾಲ್ಗೊಳ್ಳದೇ ತಟಸ್ಥವಾಗಿ ಉಳಿದರೆ ಅದು ನಿರ್ಣಯಕ್ಕೆ ಪರವಾದ ಮತ, ಅಂದರೆ ತಮಗೆ ವಿರುದ್ಧವಾಗಿ ತಳೆದ ನಿಲುವು ಎಂದು ಪರಿಗಣಿಸಬೇಕಾಗುತ್ತದೆ. ಹಾಗೆ ತಟಸ್ಥವಾಗಿ ಉಳಿದ ದೇಶಗಳ ವಿರುದ್ಧದ ದ್ವಿಪಕ್ಷೀಯ ಸಂಬಂಧವನ್ನು ಮರುಪರಿಶೀಲಿಸಬೇಕಾಗುತ್ತದೆ ಎಂದು ರಷ್ಯಾ ದೇಶ ಎಚ್ಚರಿಕೆ ನೀಡಿತ್ತು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು! ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು!

ನಿರ್ಣಯಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ ದೇಶಗಳು:
ಚೀನಾ, ಇರಾನ್, ಕಜಕಸ್ತಾನ್, ಕಿರ್ಗಿಸ್ತಾನ್, ಕಾಂಗೋ, ಕ್ಯೂಬಾ, ಕೊರಿಯಾ, ಆಲ್ಜೀರಿಯಾ, ಬೆಲಾರೂಸ್, ರಷ್ಯಾ, ಸಿರಿಯಾ, ತಜಿಕಿಸ್ತಾನ್, ಉಜ್ಬೆಕಿಸ್ತಾನ್, ವಿಯೆಟ್ನಾಮ್, ಜಿಂಬಾಬ್ವೆ, ಬೊಲಿವಿಯ, ಬುರುಂಡಿ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಎರಿಟ್ರಿಯ, ಇಥಿಯೋಪಿಯಾ, ಗ್ಯಾಬೊನ್, ಲಾವೊ, ಮಾಲಿ, ನಿಕಾರಾಗುವಾ.

Who Voted for Russia at UNGA and Know Why India Abstained Vote

ಮತದಾನದಲ್ಲಿ ಪಾಲ್ಗೊಳ್ಳದ ಕೆಲ ದೇಶಗಳು:
ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ, ಬ್ರಜಿಲ್, ಈಜಿಪ್ಟ್, ಇಂಡೋನೇಷ್ಯಾ, ಸೌತ್ ಆಫ್ರಿಕಾ, ಭೂತಾನ್, ಸಿಂಗಾಪುರ, ಶ್ರೀಲಂಕಾ, ಯುಎಇ, ಸೌದಿ ಅರೇಬಿಯಾ, ಕತಾರ್, ನೇಪಾಳ, ಮಾಲ್ಡೀವ್ಸ್, ಮಲೇಷ್ಯಾ, ಇರಾಕ್.

ಅಕ್ಷರಶಃ ತಟಸ್ಥವಾಗಿರುವ ಭಾರತ:
ವಿಶ್ವಸಂಸ್ಥೆಯಲ್ಲಿ ವಿವಿಧ ವಿಚಾರಗಳಿಗೆ ನಡೆಸಲಾದ ಕಳೆದ 11 ಮತದಾನಗಳಲ್ಲಿ ಭಾರತ ಪಾಲ್ಗೊಳ್ಳದೇ ದೂರ ಉಳಿದಿತ್ತು. ಉಕ್ರೇನ್ ಮೇಲೆ ರಷ್ಯಾ ಆಕ್ರಮಣವನ್ನು ಖಂಡಿಸುವ ನಿರ್ಣಯ, ಉಕ್ರೇನ್‌ನಲ್ಲಿ ನಾಗರಿಕ ಹಕ್ಕು ಉಲ್ಲಂಘನೆ ಆಗುತ್ತಿದೆ ಎಂದು ರಷ್ಯಾ ಹೊರಡಿಸಿದ ನಿರ್ಣಯದ ಮೇಲಿನ ಮತದಾನ ಇದರಲ್ಲಿ ಸೇರಿವೆ.

ನಿರ್ಬಂಧದ ನಡುವೆ,ಕ್ಷಿಪ್ರವಾಗಿ ರೂಬಲ್ ಚೇತರಿಕೆ, ಪುಟಿನ್‌ಗೆ ಜಯ ನಿರ್ಬಂಧದ ನಡುವೆ,ಕ್ಷಿಪ್ರವಾಗಿ ರೂಬಲ್ ಚೇತರಿಕೆ, ಪುಟಿನ್‌ಗೆ ಜಯ

ಭಾರತ ತಟಸ್ಥವಾಗಿರಲು ಇದು ಕಾರಣ:
ಉಕ್ರೇನ್ ಸಂಘರ್ಷ ಉದ್ಭವಿಸಿದಾಗಿನಿಂದಲೂ ಭಾರತ ಶಾಂತಿ, ಸಂವಾದ ಮತ್ತು ರಾಜತಾಂತ್ರಿಕತೆ ಪರವಾಗಿ ನಿಲುವು ತಳೆದಿದೆ. ಅಮಾಯಕರ ನೆತ್ತರು ಹರಿಸಿ ಯಾವುದೇ ಪರಿಹಾರ ಸಾಧ್ಯ ಇಲ್ಲ ಎಂಬುದು ನಮ್ಮ ನಂಬಿಕೆ. ನಾವು ಯಾರ ಪರವಾಗಿ ಇದ್ದೇವೆಂದರೆ ಅದು ಶಾಂತಿಯ ಪರವಾಗಿ ಮಾತ್ರ. ಹಿಂಸಾಚಾರ ಕೂಡಲೇ ಶಮನಗೊಳ್ಳುವುದು ಮುಖ್ಯ ಎಂದು ಭಾರತದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
"ಪರಿಸ್ಥಿತಿ ಬಿಗಡಾಯಿಸುತ್ತಿರುವುದು ನಮಗೆ ಆತಂಕ ತಂದಿದೆ... ಅಮಾಯಕ ಜೀವಗಳು ಅಪಾಯದಲ್ಲಿದ್ದಾಗ ರಾಜತಾಂತ್ರಿಕತೆಯೊಂದೇ ಪರಿಹಾರ ಎನಿಸುತ್ತದೆ" ಎಂದು ವಿಶ್ವಸಂಸ್ಥೆ ಭಾರತದ ರಾಯಭಾರಿ ಟಿಎಸ್ ತಿರುಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಕುತೂಹಲವೆಂದರೆ ಇತ್ತೀಚೆಗೆ ಉಕ್ರೇನ್‌ನ ಬುಕಾ ನಗರದಲ್ಲಿ ರಷ್ಯನ್ ಸೈನಿಕರು ಅಲ್ಲಿನ ಜನರ ಮಾರಣಹೋಮ ಮಾಡಿದ ಘಟನೆಯನ್ನು ಭಾರತ ಬಲವಾಗಿ ಖಂಡಿಸಿ ಆಕ್ಷೇಪ ವ್ಯಕ್ತಪಡಿಸಿತು. ಈ ಘಟನೆಯನ್ನ ಸ್ವತಂತ್ರ ತನಿಖೆಗೆ ಒಳಪಡಿಸಬೇಕು ಎಂಬ ಅಭಿಪ್ರಾಯವನ್ನು ಭಾರತ ಬೆಂಬಲಿಸಿತು. ಉಕ್ರೇನ್ ವಿಚಾರದಲ್ಲಿ ರಷ್ಯಾದ ನಡೆಯನ್ನು ಭಾರತ ಇದಕ್ಕೆ ಮುನ್ನ ಒಮ್ಮೆಯೂ ಖಂಡಿಸಿರಲಿಲ್ಲ.

Recommended Video

RCBಯ ಹೊಸ ಹಾಡು ಬರೆದದ್ದು ಯಾರು ಗೊತ್ತಾ | Oneindia Kannada

ರಷ್ಯಾ ಎಚ್ಚರಿಕೆ ನಡುವೆಯೂ ಭಾರತ ತಟಸ್ಥ:
ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ಅಮಾನತುಗೊಳಿಸುವ ನಿರ್ಣಯದ ಮತದಾನದಲ್ಲಿ ಪಾಲ್ಗೊಳ್ಳದೇ ಇದ್ದರೆ ಅದು ರಷ್ಯಾ ವಿರುದ್ಧ ತಳೆದ ನಿಲುವು ಎಂದು ಪರಿಗಣಿಸಬೇಕಾಗುತ್ತದೆ ಎಂದು ರಷ್ಯಾ ಎಚ್ಚರಿಕೆ ನೀಡಿತ್ತು. ಆದರೂ ಭಾರತ ಮತ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಆದರೆ, ಒಂದು ಗಮನಾರ್ಹ ನಿಲುವು ತಳೆಯಿತು. ಅದೆಂದರೆ, ಬುಕಾ ನಗರದಲ್ಲಿ ನಡೆದ ನಾಗರಿಕರ ಹತ್ಯೆ ಘಟನೆಯನ್ನು ಸ್ವತಂತ್ರ ತನಿಖೆಗೆ ಒಳಪಡಿಸದೆಯೇ ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ನಿರ್ಣಯ ಮಂಡಿಸಿದ್ದು ಸರಿ ಅಲ್ಲ ಎಂಬ ಆಕ್ಷೇಪವನ್ನ ಭಾರತ ಎತ್ತಿತು. ಇದರಿಂದ ರಷ್ಯಾಗೆ ಭಾರತದ ಮೇಲಿರುವ ಆಪ್ತ ಸಂಬಂಧ ಧಕ್ಕೆ ಆಗದಂತೆ ನೋಡಿಕೊಳ್ಳಲು ನೆರವಾಗಬಹುದು.

(ಒನ್ಇಂಡಿಯಾ ಸುದ್ದಿ)

English summary
Which nations Voted for Russia at UNGA and Know Why India Abstained Vote To Remove Russia From Human Rights Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X