ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಡ್ ಆಫ್ ದಿ ನೇಶನ್: ಕಾಂಗ್ರೆಸ್‌ ಪುನಶ್ಚೇತನಗೊಳಿಸಲು ಇವರೇ ಸೂಕ್ತ!

|
Google Oneindia Kannada News

ದೆಹಲಿ, ಆಗಸ್ಟ್ 8: ಇಂಡಿಯಾ ಟುಡೆ ಮತ್ತು ಕಾರ್ವಿ ಇನ್ಸೈಟ್ಸ್ ಲಿಮಿಟೆಡ್ 'ಮೂಡ್ ಆಫ್ ದಿ ನೇಷನ್' (MOTN) ಹೆಸರಿನಲ್ಲಿ ಸಮೀಕ್ಷೆಯೊಂದನ್ನು ನಡೆಸಿದ್ದು, 'ದೇಶದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸಲು ಸೂಕ್ತ ವ್ಯಕ್ತಿ ಯಾರು? ಎಂದು ಪ್ರಶ್ನೆಯೊಂದು ಕೇಳಲಾಗಿದೆ.

ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಮನಮೋಹನ್ ಸಿಂಗ್, ಕಮಲ್ ನಾಥ್, ಪಿ ಚಿದಂಬರಂ, ಸಚಿನ್ ಪೈಲೆಟ್, ಅಶೋಕ್ ಗೆಹ್ಲೋಟ್ ಹೆಸರುಗಳು ಪ್ರಮುಖವಾಗಿ ಚಾಲ್ತಿಯಲ್ಲಿತ್ತು.

2020ರ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯಲ್ಲಿ ಕೇಳಲಾದ ಈ ಪ್ರಶ್ನೆಗೆ ಮಾಜಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ಸೂಕ್ತ ಆಯ್ಕೆ ಎಂಬ ಅಭಿಪ್ರಾಯ ಬಂದಿದೆ. ಹಾಗಿದ್ರೆ, ಶೇಕಡಾ ಎಷ್ಟರಷ್ಟು ಮತ ರಾಹುಲ್‌ಗೆ ಸಿಕ್ಕಿದೆ ಎಂಬ ವಿವರ.? ಮುಂದೆ ಓದಿ....

ಮೂಡ್ ಆಫ್ ದಿ ನೇಶನ್ ಸಮೀಕ್ಷೆ: ಮೋದಿ ಕ್ಯಾಬಿನೆಟಿನ ಜನಪ್ರಿಯ ಸಚಿವರು ಇವರೇಮೂಡ್ ಆಫ್ ದಿ ನೇಶನ್ ಸಮೀಕ್ಷೆ: ಮೋದಿ ಕ್ಯಾಬಿನೆಟಿನ ಜನಪ್ರಿಯ ಸಚಿವರು ಇವರೇ

ರಾಹುಲ್‌ ಗಾಂಧಿಗೆ ಅತಿ ಹೆಚ್ಚು ಮತ

ರಾಹುಲ್‌ ಗಾಂಧಿಗೆ ಅತಿ ಹೆಚ್ಚು ಮತ

ಕಾಂಗ್ರೆಸ್ ಪಕ್ಷವನ್ನು ಮತ್ತೆ ಪುನರುಜ್ಜೀವನಗೊಳಿಸಲು ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ ಎಂಬ ಫಲಿತಾಂಶ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯಲ್ಲಿ ಬಂದಿದೆ. ರಾಹುಲ್ ಗಾಂಧಿಗೆ ಶೇಕಡಾ 24 ರಷ್ಟು ಮತ ಬಂದಿದೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಳೆದ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಎದುರಿಸಿತ್ತು. ಆದರೆ, 52 ಸೀಟ್‌ಗಳನ್ನು ಗೆಲ್ಲುವಲ್ಲಿ ಮಾತ್ರ ಕಾಂಗ್ರೆಸ್ ಶಕ್ತವಾಗಿತ್ತು. ಬಳಿಕ, ನಡೆದ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದರು.

ಮನ್ ಮೋಹನ್ ಸಿಂಗ್ ಎರಡನೇ ಸ್ಥಾನ!

ಮನ್ ಮೋಹನ್ ಸಿಂಗ್ ಎರಡನೇ ಸ್ಥಾನ!

ರಾಹುಲ್ ಗಾಂಧಿ ಬಿಟ್ಟರೆ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರ ಮೇಲೆ ಹೆಚ್ಚು ನಂಬಿಕೆ ವ್ಯಕ್ತಪಡಿಸಿದ್ದಾರೆ. ಯುಪಿಎ ಅವಧಿಯಲ್ಲಿ ಎರಡು ಬಾರಿ ಪ್ರಧಾನಿ ಆಗಿದ್ದ ಸಿಂಗ್ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಮರುಶಕ್ತಿ ನೀಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಸಿಂಗ್ ಅವರಿಗೆ ಶೇಕಡಾ 18 ರಷ್ಟು ವೋಟ್ ಸಿಕ್ಕಿದೆ.

ಅಮ್ಮ-ಮಗಳಿಗೆ 14 ರಷ್ಟು ಮತ

ಅಮ್ಮ-ಮಗಳಿಗೆ 14 ರಷ್ಟು ಮತ

ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ಸ್ವ-ಪಕ್ಷದಲ್ಲೇ ಅನೇಕರಿಗೆ ವಿರೋಧ ಇದೆ. ಆದರೂ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯಲ್ಲಿ ಗಾಂಧಿ ಕುಟುಂಬದವರ ನಾಯಕತ್ವದಲ್ಲೇ ಹೆಚ್ಚು ನಂಬಿಕೆ ಹೊಂದಿದ್ದಾರೆ. ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೇಲೆ ಹೆಚ್ಚು ನಂಬಿಕೆ ಹೊಂದಿದ್ದಾರೆ. ಸಮೀಕ್ಷೆಯಲ್ಲಿ ಸೋನಿಯಾ-ಪ್ರಿಯಾಂಕಾ ಇಬ್ಬರಿಗೂ ತಲಾ 14 ರಷ್ಟು ಮತ ಸಿಕ್ಕಿದೆ.

ಗಾಂಧಿ ಕುಟುಂಬ ಬಿಟ್ಟರೆ?

ಗಾಂಧಿ ಕುಟುಂಬ ಬಿಟ್ಟರೆ?

ಗಾಂಧಿ ಕುಟುಂಬ ಬಿಟ್ಟರೆ ಉಳಿದ ನಾಯಕರ ಬಗ್ಗೆ ಅಷ್ಟೇನೂ ಒಲವು ಇಲ್ಲ ಎನ್ನುವುದು ಈ ಸಮೀಕ್ಷೆಯಲ್ಲಿ ತಿಳಿಯುತ್ತಿದೆ. ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಗೆ 3 ರಷ್ಟು ಮತ, ಮಾಜಿ ಸಚಿವ-ತಮಿಳುನಾಡು ಸಂಸದ ಪಿ ಚಿದಂಬರಂಗೆ 3 ರಷ್ಟು ಮತ ಹಾಗೂ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ 2 ರಷ್ಟು ಮತ ಸಿಕ್ಕಿದೆ.

ಸಚಿನ್ ಪೈಲೆಟ್ ಸಹ ಪಟ್ಟಿಯಲ್ಲಿದ್ದಾರೆ

ಸಚಿನ್ ಪೈಲೆಟ್ ಸಹ ಪಟ್ಟಿಯಲ್ಲಿದ್ದಾರೆ

ರಾಜಸ್ಥಾನದ ಯುವ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಅವರ ಹೆಸರು ಸಹ ಮುಂಚೂಣಿಯಲ್ಲಿದ್ದು, ಅವರಿಗೆ 3 ರಷ್ಟು ಮತ ಸಿಕ್ಕಿದೆ. ಈ ನಾಯಕರನ್ನು ಬಿಟ್ಟರೆ ಇತರರಿಗೆ 6 ರಷ್ಟು ಮತ ಬಂದಿದೆ.

English summary
Mood of the Nation: Who is the best person to revive Congress party in nation?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X