ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನರ್ಹರ ತೀರ್ಪಿನಲ್ಲಿ ಸುಪ್ರೀಂ ನೆನೆದ ಪದ್ಮಭೂಷಣ ಆಂಡ್ರೆ ಬೆಟೈಲೆ ಯಾರು?

|
Google Oneindia Kannada News

ನವದೆಹಲಿ, ನವೆಂಬರ್ 13: ಸುಪ್ರೀಂ ಕೋರ್ಟಿನಲ್ಲಿ ಬುಧವಾರ ಅನರ್ಹ ಶಾಸಕರ ತೀರ್ಪನ್ನು ಓದಲು ಆರಂಭಿಸುತ್ತಿದ್ದಂತೆಯೇ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಉಲ್ಲೇಖಿಸಿದ ಹೆಸರೊಂದು ಕುತೂಹಲ ಕೆರಳಿಸಿತ್ತು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ನೈತಿಕತೆಯ ಅಗತ್ಯ ಎಷ್ಟು ಎಂಬ ಕುರಿತ ಆಂಡ್ರೆ ಬೆಟೈಲೆ ಎಂಬುವವರು ಬರೆದ ಸಾಲುಗಳನ್ನು ಅವರು ಉಚ್ಚರಿಸಿದರು.

ಅದುವರೆಗೆ ಆ ಹೆಸರನ್ನೇ ಕೇಳಿರದ ಎಷ್ಟೋ ಜನರಿಗೆ ಎದ್ದ ಪ್ರಶ್ನೆ, ಯಾರೀತ ಆಂಡ್ರೆ ಬೆಟೈಲೆ ಎಂಬುದು. ಜೊತೆಗೆ ನ್ಯಾಯಮೂರ್ತಿಗಳು ಅನರ್ಹರ ತೀರ್ಪನ್ನು ಓದುವ ಮುನ್ನ ಅವರನ್ನು ಸ್ಮರಿಸಿದ್ದು ಯಾಕೆ?

ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ತೀರ್ಪು: ಮುಖ್ಯಾಂಶಗಳುಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ತೀರ್ಪು: ಮುಖ್ಯಾಂಶಗಳು

ಈ ಪ್ರಶ್ನೆಯೊಂದಿಗೆ ಗೂಗಲ್ ನಲ್ಲಿ ತಡಕಾಡಿದಾಗ ಸಿಕ್ಕಿದ್ದು, ಆಂಡ್ರೆ ಬೆಟೈಲೆ ಎಂಬ ಭಾರತದ ಪ್ರಮುಖ ಸಮಾಜ ಶಾಸ್ತ್ರಜ್ಞರೊಬ್ಬರ ಕುರಿತ ಮಾಹಿತಿ. ದಕ್ಷಿಣ ಭಾರತದ ಜಾತಿಪದ್ಧತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದ ಅವರು ಸಮಾಜಶಾಸ್ತ್ರದಲ್ಲಿ ಮಾಡಿದ ಅಧ್ಯಯನ ಲೆಕ್ಕಕ್ಕೆ ಸಿಗದಷ್ಟು!

Who Is Andre Beteille? Why his name mentioned in Disqualified MLAs Verdict?

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರೂ ಆಗಿರುವ 85 ವರ್ಷ ವಯಸ್ಸಿನ ಆಂಡ್ರೆ ಬೆಟೈಲೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ನೈತಿಕತೆಯ ಮಹತ್ವವೇನು ಎಂಬುದನ್ನು ಹಲವು ಬಾರಿ ವಿವರಿಸಿದ್ದರು. ಅವರ ಸಾಲುಗಳನ್ನೇ ಅನರ್ಹರ ತೀರ್ಪಿನ ಸಮಯದಲ್ಲೂ ನ್ಯಾಯಾಧೀಶರು ಉಲ್ಲೇಖಿಸಿದರು.

"ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕ ನೈತಿಕತೆಗೆ ಬದ್ಧರಾಗಿರುವುದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎರಡಕ್ಕೂ ಅತೀ ಮುಖ್ಯ. ಆದರೆ ಭಾರತದಲ್ಲಿ ಒಂದೇ ರಾಜಕೀಯ ಪಕ್ಷ ತಾನು ಅಧಿಕಾರದಲ್ಲಿದ್ದಾಗ ಮತ್ತು ಇಲ್ಲದಿದ್ದಾಗ ಈ ಬದ್ಧತೆಯನ್ನು ಬೇರೆ ಬೇರೆ ರೀತಿಯಲ್ಲೇ ವ್ಯಾಖ್ಯಾನಿಸುತ್ತದೆ. ನಮ್ಮ ರಾಜಕೀಯ ವ್ಯವಸ್ಥೆ ಅನೈತಿಕವಾಗುತ್ತಿದೆ ಎಂಬ ಮಾತಿಗೆ ಇದು ಪುಷ್ಠಿ ನೀಡಿದೆ" ಎಂಬ ಸಾಲಿನ ಮೂಲಕವೇ ನ್ಯಾಯಾಧೀಶರು ತಮ್ಮ ತೀರ್ಪನ್ನು ಓದಲು ಆರಂಭಿಸಿದರು.

ಅನರ್ಹ ಶಾಸಕರ ತೀರ್ಪು: ಸ್ಪೀಕರ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ಅನರ್ಹ ಶಾಸಕರ ತೀರ್ಪು: ಸ್ಪೀಕರ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಈ ಸಾಲುಗಳನ್ನು ಬರೆದ ಆಂಡ್ರೆ ಬೆಟೈಲೆ ದೆಹಲಿ ವಿಶ್ವವಿದ್ಯಾಲಯದ ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್ ನಲ್ಲಿ ಸಮಾಜಶಾಸ್ತ್ರದ ಪ್ರೊಫೆಸರ್ ಆಗಿದ್ದವರು. ಅವರನ್ನು 2007 ರಲ್ಲಿ ಅಂದಿನ ಭಾರತ ಸರ್ಕಾರ ನ್ಯಾಶ್ನಲ್ ರೀಸರ್ಚ್ ಪ್ರೊಫೆಸರ್ ಆಗಿ ನೇಮಿಸಿತ್ತು. ಮಾಜಿ ಪ್ರಧಾನಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ಪದ್ಮ ಭೂಷಣ ಪ್ರಶಸ್ತಿಯನ್ನೂ ಸ್ವೀಕರಿಸಿದ ಕೀರ್ತಿ ಅವರದು.

ಪ್ರಸ್ತುತ ಮೇಘಾಲಯದ ಶಿಲ್ಲಾಂಗ್ ನಲ್ಲಿರುವ ನಾರ್ತ್ ಈಸ್ಟರ್ನ್ ಹಿಲ್ ವಿಶ್ವವಿದ್ಯಾಲಯದಲ್ಲಿ ಚಾನ್ಸೆಲರ್ ಆಗಿರುವ ಅವರು ಅಶೋಕಾ ವಿಶ್ವವಿದ್ಯಾಲಯದ ಚಾನ್ಸೆಲರ್ ಸಹ ಆಗಿದ್ದರು.

Live Updates : ಅನರ್ಹತೆ ಎತ್ತಿಹಿಡಿದ ಸುಪ್ರೀಂಕೋರ್ಟ್Live Updates : ಅನರ್ಹತೆ ಎತ್ತಿಹಿಡಿದ ಸುಪ್ರೀಂಕೋರ್ಟ್

ಸಮಾಜಶಾಸ್ತ್ರದಲ್ಲಿ ಆಳವಾದ ಅಧ್ಯಯನ ನಡೆಸಿರುವ ಆಂಡ್ರೆ ಬೆಟೈಲೆ ಅವರು ಸಂಸದೀಯ ಪ್ರಜಾಪ್ರಭುತ್ವದಲ್ಲಿ ನೈತಿಕತೆಯ ಅಗತ್ಯದ ಬಗ್ಗೆ ಬರೆದ ಸಾಲುಗಳನ್ನು ಈ ಸಂದರ್ಭದಲ್ಲಿ ನ್ಯಾ.ರಮಣ ಅವರು ಸಂದರ್ಭೋಚಿತ ಎಂಬ ಕಾರಣಕ್ಕೆ ಉಲ್ಲೇಖಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿ ಹಿಡಿದಿದೆ. ಈ ಮೂಲಕ 15 ಶಾಸಕರ ಅನರ್ಹತೆ ಸರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಅನರ್ಹರು ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಅದು ಹೇಳಿದೆ.

English summary
Disqualified MLAs case Verdict in Supreme Court: Justice NV Ramana metions Andre Beteille Name in Judgement copy. Who is He?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X