ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ, ತಮಿಳುನಾಡು, ದೆಹಲಿಯಲ್ಲಿ ಇಂದು ಎಷ್ಟು ಕೇಸ್?

|
Google Oneindia Kannada News

ದೆಹಲಿ, ಜೂನ್ 30: ಭಾರತದ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯ ಮಹಾರಾಷ್ಟ್ರದಲ್ಲಿ ಇಂದು 4878 ಜನರಿಗೆ ಕೊವಿಡ್ ಮಹಾಮಾರಿ ವಕ್ಕರಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,74,761ಕ್ಕೆ ಏರಿದೆ.

ಇಂದು ಒಂದೇ ದಿನ 245 ಮಂದಿ ಕೊರೊನಾ ವೈರಸ್‌ನಿಂದ ಮಹಾರಾಷ್ಟ್ರದಲ್ಲಿ ಮೃತಪಟ್ಟಿದ್ದಾರೆ. ಈವರೆಗೂ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 7,855.

Breaking: ರಾಜ್ಯದಲ್ಲಿಂದು 947 ಕೇಸ್, ಬೆಂಗಳೂರಿನಲ್ಲಿ ಎಷ್ಟು?Breaking: ರಾಜ್ಯದಲ್ಲಿಂದು 947 ಕೇಸ್, ಬೆಂಗಳೂರಿನಲ್ಲಿ ಎಷ್ಟು?

ತಮಿಳುನಾಡಿನಲ್ಲಿಂದು 3943 ಕೊರೊನಾ ಕೇಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90,167ಕ್ಕೆ ಜಿಗಿದಿದೆ. ಇಂದು 60 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 1,201ಕ್ಕೆ ಏರಿದೆ.

Which State Reported Highest Number Of Coronavirus Today

ರಾಷ್ಟ್ರರಾಜಧಾನಿ ದೆಹಲಿಯಲ್ಲಿಂದು 2199 ಜನರಿಗೆ ಕೊರೊನಾ ವೈರಸ್ ವಕ್ಕರಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 87,360ಕ್ಕೆ ಏರಿಕೆ.

ಕರ್ನಾಟಕದಲ್ಲಿ ಇಂದು 947 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15242ಕ್ಕೆ ಏರಿಕೆಯಾಗಿದೆ. ಇಂದು ವರದಿಯಾದ ಪಟ್ಟು ಸೋಂಕಿನ ಪೈಕಿ ಬೆಂಗಳೂರಿನಲ್ಲಿ 503 ಪ್ರಕರಣಗಳು ಪತ್ತೆಯಾಗಿದೆ.

ಬಾಯಿ ಬಿಟ್ಟರೆ ಬಣ್ಣಗೇಡು: ಮೋದಿ ಭಾಷಣದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯಬಾಯಿ ಬಿಟ್ಟರೆ ಬಣ್ಣಗೇಡು: ಮೋದಿ ಭಾಷಣದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

ಆಂಧ್ರ ಪ್ರದೇಶದಲ್ಲಿ ಇಂದು 704 ಕೊರೊನಾ ಕೇಸ್ ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,595ಕ್ಕೆ ಏರಿದೆ.

Which State Reported Highest Number Of Coronavirus Today

ಪಶ್ಚಿಮ ಬಂಗಾಳದಲ್ಲಿ ಇಂದು 652 ಮಂದಿಗೆ ಕೊವಿಡ್ ಸೋಂಕು ವರದಿಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,559 ಜಿಗಿದಿದೆ.

ಗುಜರಾತ್‌ನಲ್ಲಿ ಇಂದು 620 ಜನರಿಗೆ ಕೊರೊನಾ ಮಹಾಮಾರಿ ವಕ್ಕರಿಸಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 32,446ಕ್ಕೆ ಏರಿದೆ. ಈವರೆಗೂ 1,848 ಮಂದಿ ಸಾವನ್ನಪ್ಪಿದ್ದಾರೆ.

ರಾಜಸ್ಥಾನದಲ್ಲಿ 354 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈವರೆಗೂ ರಾಜ್ಯದಲ್ಲಿ ಒಟ್ಟು ಸೋಂಕಿನ ಸಂಖ್ಯೆ 18,014ಕ್ಕೆ ಏರಿದೆ. ಈವರೆಗೂ ರಾಜ್ಯದಲ್ಲಿ 413 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

English summary
A total of 3,943 fresh COVID-19 cases found in tamilnadu, Delhi records 2,199 fresh COVID-19 cases and maharashtra reported 4,878 new COVID19 case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X