ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ವಿಚಾರವೇ ಆಗಲಿ, ಭದ್ರತೆ ವಿಚಾರದಲ್ಲಿ ನಾವು ಭಾರತವನ್ನು ಬೆಂಬಲಿಸುತ್ತೇವೆ: ಚೀನಾದ ಆಟ ನಡೆಯಲು ಬಿಡಲ್ಲ ಎಂದ ಫ್ರಾನ್ಸ್‌

|
Google Oneindia Kannada News

ನವದೆಹಲಿ, ಜನವರಿ 07: ಇಂದು ದೆಹಲಿಯಲ್ಲಿ ನಡೆದ ಭಾರತ ಮತ್ತು ಫ್ರಾನ್ಸ್‌ ನಡುವಿನ ವಾರ್ಷಿಕ ಕಾರ್ಯತಂತ್ರದ ಮಾತುಕತೆಯಲ್ಲಿ ಭದ್ರತೆಯ ವಿಚಾರದಲ್ಲಿ ಫ್ರಾನ್ಸ್‌ ಭಾರತಕ್ಕೆ ತನ್ನ ಬೆಂಬಲ ಸೂಚಿಸಿದೆ.

ಅದು ಕಾಶ್ಮೀರದ ವಿಚಾರವೇ ಆಗಿರಲಿ, ಭಾರತಕ್ಕೆ ಭದ್ರತಾ ವಿಷಯದಲ್ಲಿ ನಾವು ಬೆಂಬಲಿಸುತ್ತೇವೆ. ಚೀನಿಯರ ಯಾವುದೇ ರೀತಿಯ ಕಾರ್ಯವಿಧಾನಗಳ ಆಟ ನಡೆಯಲು ಬಿಡುವುದಿಲ್ಲ. ಹಿಮಾಲಯದ ವಿಷಯಕ್ಕೆ ಬಂದಾಗ, ನಮ್ಮ ಹೇಳಿಕೆಗಳನ್ನು ಪರಿಶೀಲಿಸಿ, ಅವು ಸಂಪೂರ್ಣವಾಗಿ ಸ್ಪಷ್ಟವಾಗಿವೆ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ರಾಜತಾಂತ್ರಿಕ ಸಲಹೆಗಾರ ಎಮ್ಯಾನುಯೆಲ್ ಬೊನ್ನೆ ತಿಳಿಸಿದ್ದಾರೆ.

ಇದರ ಜೊತೆಗೆ ನಾವು ಸಾರ್ವಜನಿಕವಾಗಿ ಏನು ಹೇಳುತ್ತೇವೆ, ಅದನ್ನು ನಾವು ಚೀನಿಯರಿಗೆ ಖಾಸಗಿಯಾಗಿ ಹೇಳುತ್ತೇವೆ. ಯಾವುದೇ ಅಸ್ಪಷ್ಟತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Whether it be on Kashmir, weve been supportive of India in the security concern :France

ಈ ಸಭೆಯಲ್ಲಿ ಭಾರತೀಯ ನಿಯೋಗವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವ ವಹಿಸಿದ್ದರು. ರಾಷ್ಟ್ರೀಯ ಭದ್ರತೆ ವಿಚಾರದ ಜೊತೆಗೆ ಈ ಅವಧಿಯಲ್ಲಿ ಉಭಯ ಕಡೆಯವರು ವಿವರವಾದ ದ್ವಿಪಕ್ಷೀಯ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

English summary
Whether it be on Kashmir, we've been supportive of India in the security concern. We haven't let the Chinese play any kind of procedural games says china
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X