ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಲಸಿಕೆ ಯಾವಾಗ ಲಭ್ಯ: ಅದಾರ್ ಪೂನಾವಾಲಾ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಅಕ್ಟೋಬರ್ 28: ಕೊವಿಡ್ 19 ಲಸಿಕೆಯು 2021ರ ಮಧ್ಯ ಅಥವಾ ಅಂತ್ಯದಲ್ಲಿ ಉಪಲಬ್ಧವಾಗಲಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ತಿಳಿಸಿದ್ದಾರೆ.

ಮುಂದಿನ ವರ್ಷ ಮಧ್ಯಂತರದಲ್ಲಿ 100 ಮಿಲಿಯನ್ ಕೊವಿಡ್ ಲಸಿಕೆ ಲಭ್ಯವಿರಲಿದೆ.ನಾವು ಮೊದಲ ಬಾರಿಗೆ 100 ಮಿಲಿಯನ್ ಕೊರೊನಾ ಲಸಿಕೆ ಉತ್ಪಾದನೆಯ ಕುರಿತು ಗಮನಹರಸಿದ್ದೇವೆ 2021ರ ಮಧ್ಯ ಅಥವಾ ಅಂತ್ಯದಲ್ಲಿ ಲಸಿಕೆ ದೊರೆಯಲಿದೆ.

2020 ಅಂತ್ಯದೊಳಗೆ ಪಿಫೈಜರ್‌ನಿಂದ 4 ಕೋಟಿ ಕೊರೊನಾ ಲಸಿಕೆ2020 ಅಂತ್ಯದೊಳಗೆ ಪಿಫೈಜರ್‌ನಿಂದ 4 ಕೋಟಿ ಕೊರೊನಾ ಲಸಿಕೆ

ಲಸಿಕೆಯ ಪ್ರಯೋಗ ಡಿಸೆಂಬರ್‌ ತಿಂಗಳಲ್ಲಿ ಅಂತ್ಯಗೊಳ್ಳಬಹುದು, ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿಯಿಂದಲೇ ಲಸಿಕೆ ಉತ್ಪಾದನೆ ಆರಂಭಿಸುತ್ತೇವೆ.

When Will Covid Vaccine Be Available? What Adar Poonawalla

ಬ್ರಿಟನ್‌ನಲ್ಲಿ ಅಡ್ವಾನ್ಸ್ ಟ್ರಯಲ್ ನಡೆಯುತ್ತಿದೆ. ಒಂದೊಮ್ಮೆ ತುರ್ತು ಸಂದರ್ಭದಲ್ಲಿ ಬಳಕೆಗೆ ಸರ್ಕಾರ ಅವಕಾಶ ನೀಡಿದರೆ ಉತ್ಪಾದನೆ ಶುರುವಾಗಲಿದೆ. ಬ್ರಿಟನ್‌ನಲ್ಲಿ ನಡೆಸುತ್ತಿರುವ ಪ್ರಯೋಗವನ್ನು ಭಾರತದಲ್ಲಿ ಕೂಡ ನಡೆಸಲು ನಾವು ಸಿದ್ಧರಿದ್ದೇವೆ. ಹಾಗೆಯೇ ಆದರೆ ಮುಂದಿನ ವರ್ಷ ಮಧ್ಯದಲ್ಲಿಯೇ ಲಸಿಕೆ ಸಿಗಲಿದೆ.

ವಿಶ್ವದಾದ್ಯಂತ 150ಕ್ಕೂ ಹೆಚ್ಚು ಲಸಿಕೆಗಳನ್ನು ಉತ್ಪಾದಿಸಲಾಗುತ್ತಿದೆ. 38 ಲಸಿಕೆಗಳು ಮಾನವ ಪ್ರಯೋಗವನ್ನು ನಡೆಸುತ್ತಿದೆ ಲಸಿಕೆಯ ಪರಿಣಾಮವನ್ನು ಅರಿಯಲು 1-2ವರ್ಷಗಳ ಕಾಲಾವಧಿ ಬೇಕಾಗುತ್ತದೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳ ಸಂಖ್ಯೆಯಲ್ಲೇ ಏರಿಕೆ ಕಂಡು ಬಂದಿದೆ. ದೇಶದಲ್ಲಿ ಒಂದೇ ದಿನ 43893 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ 58,439 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 508 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

Recommended Video

Munirathna : ನಮ್ ಅಮ್ಮ ಸತ್ತು 25 ವರುಷ ಆಗಿದೆ | Oneindia Kannada

English summary
The Oxford coronavirus vaccine produced by India's Serum Institute could be ready as early as December and the first batch of 100 million doses should be available by the second or third quarter of 2021, Adar Poonawalla, chief of the Pune-based company told NDTV on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X