ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವಿಟ್ಟರ್ ನಲ್ಲೇನಿದೆ?

|
Google Oneindia Kannada News

ನವದೆಹಲಿ, ಜುಲೈ 25: ಭಾರತದ 14 ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ರಾಮನಾಥ್ ಕೋವಿಂದ್ ಅವರಿಗೆ ದೇಶದಾದ್ಯಂತ ಶುಭಾಶಯಗಳು ಹರಿದುಬರುತ್ತಿವೆ.

'ವಸುಧೈವ ಕುಟುಂಬಕಂ' ತತ್ವದಡಿ ಮುನ್ನಡೆಯೋಣ: ಕೋವಿಂದ್'ವಸುಧೈವ ಕುಟುಂಬಕಂ' ತತ್ವದಡಿ ಮುನ್ನಡೆಯೋಣ: ಕೋವಿಂದ್

ಕೃಷಿಕ ಕುಟುಂಬದಿಂದ ಬಂದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿ, ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ಪಡೆದು, ಇದೀಗ ಭಾರತದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರುವ ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾಗುತ್ತಿದ್ದಂತೆಯೇ ಟ್ವಿಟ್ಟರ್ ನಲ್ಲಿ President of India ಹೆಸರಿನಲ್ಲಿ ಅವರದೇ ಅಧಿಕೃತ ಖಾತೆ ತೆರೆಯಲಾಗಿದೆ. ರಾಷ್ಟ್ರಪತಿಯಾಗಿ ತಮ್ಮ ಜವಾಬ್ದಾರಿಯೇನು, ಗುರಿ ಏನು ಎಂಬುದನ್ನು ರಾಮ ನಾಥ್ ಕೋವಿಂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

14 ನೇ ರಾಷ್ಟ್ರಪತಿಯಾಗಿ ನಾನಿಂದು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನಾನು ನನ್ನ ಜವಾಬ್ದಾರಿಗಳನ್ನು ವಿನಮ್ರತೆಯಿಂದ ನಿಭಾಯಿಸುತ್ತೇನೆ ಎಂಬುದು ರಾಷ್ಟ್ರಪತಿ ಕೋವಿಂದ್ ಅವರ ಮೊಟ್ಟ ಮೊದಲ ಟ್ವೀಟ್.

125 ಕೋಟಿ ಜನರ ನಂಬಿಕೆ ಉಳಿಸಿಕೊಳ್ಳುತ್ತೇನೆ

ಈ ದೇಶದ 125 ಕೋಟಿ ಜನರಿಗೂ ನಾನು ತಲೆಭಾಗುತ್ತೇನೆ ಮತ್ತು ನೀವೆಲ್ಲರೂ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ.

ನೈತಿಕವಾಗಿ ಮಾದರಿ ದೇಶದ ನಿರ್ಮಾಣ

ನಾವು ಭಾರತವನ್ನು ಆರ್ಥಿಕ ಕ್ಷೇತ್ರದ ಮುಂದಾಳುವಾಗುವಂತೆ ರೂಪಿಸಬೇಕಿದೆ, ಅದರೊಟ್ಟಿಗೇ ನಮ್ಮ ಭಾರತವನ್ನು ಅದು ನೈತಿಕವಾಗಿ ವಿಶ್ವಕ್ಕೆ ಮಾದರಿಯಾಗುವಂತೆಯೂ ಕಟ್ಟಬೇಕಿದೆ.

ಸಂಪ್ರದಾಯ ಮತ್ತು ತಂತ್ರಜ್ಞಾನವನ್ನು ಒಗ್ಗೂಡಿಸೋಣ

ನಾವು ಸಂಪ್ರದಾಯ ಮತ್ತು ತಂತ್ರಜ್ಞಾನವನ್ನು ಒಗ್ಗೂಡಿಸಬೇಕಿದೆ. ಪ್ರಾಚೀನ ಭಾರತದ ಪಾಂಡಿತ್ಯ ಮತ್ತು ಆಧುನಿಕ ಭಾರತದ ವಿಜ್ಞಾನ ಎರಡೂ ಬೆಸೆಯುವಂತೆ ಮಾಡಬೇಕಿದೆ.

ನಾವೆಲ್ಲರೂ ಭಾರತದ ರಕ್ಷಕರು

ನಾವು ಪ್ರತಿಯೊಬ್ಬರೂ ಭಾರತದ ಒಳಿತಿನ ರಕ್ಷಕರು. ಹಾಗೆಯೇ ಮುಂದಿನ ತಲೆಮಾರಿಗೆ ನಮ್ಮ ಪರಂಪರೆಯನ್ನು ವರ್ಗಾಯಿಸುವ ಹೊಣೆಯೂ ನಮ್ಮದು

ಶಾಂತಿಯ ಹುಡುಕಾಟಕ್ಕೆ ಭಾರತವೇ ಮಾರ್ಗದರ್ಶಿ

ಶಾಂತಿ ಹುಡುಕಾಟದಲ್ಲಿರುವ ವಿಶ್ವಕ್ಕೆ ಬುದ್ಧನ ನೆಲೆಯಾದ ಭಾರತವೇ ಮಾರ್ಗದರ್ಶಿಯಾಗಬೇಕು.

English summary
"Honoured to be sworn in as the 14th President of India; would be carrying out my responsibilities with all humility" This is the forst tweet of Newly appointed president of India, Ram Nath Kovind. Here are some of his tweets after becoming 14th president of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X