ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಮಸೂದೆ ಬಗ್ಗೆ ರಾಹುಲ್ ಹಳೆಯ ಭಾಷಣ ಅಪ್‌ಲೋಡ್ ಮಾಡಿದ ಜೆಪಿ ನಡ್ಡಾ

|
Google Oneindia Kannada News

ನವದೆಹಲಿ, ಡಿಸೆಂಬರ್ 27:ಕೃಷಿ ಮಸೂದೆ ಕುರಿತು ರಾಹುಲ್ ಗಾಂಧಿ ಮಾಡಿದ್ದ ಭಾಷಣದ ತುಣಕನ್ನು ಕೇಂದ್ರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಪ್ರಕಟಿಸಿದ್ದಾರೆ.

ಲೋಕಸಭೆಯಲ್ಲಿ ಕೃಷಿ ಮಸೂದೆ ಬಗ್ಗೆ ಮಾತನಾಡಿದ್ದ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಈ ಕೃಷಿ ಕಾಯ್ದೆಗಳಿಂದಾಗಿ ರೈತರಿಗೆ ಮಧ್ಯವರ್ತಿಗಳಿಂದ ಮುಕ್ತಿ ದೊರೆಯಲಿದ್ದು, ತಮ್ಮ ಉತ್ಪನ್ನಗಳನ್ನು ಉದ್ಯಮಿಗಳಿಗೆ ನೇರವಾಗಿ ಮಾರಾಟ ಮಾಡಬಹುದು ಎಂದು ಹೇಳಿರುವುದು ಕಂಡುಬಂದಿದೆ.

ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ: ರೈತರ ಜಮೀನನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ: ರೈತರ ಜಮೀನನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್

ಕೃಷಿ ಕಾಯ್ದೆ ಬಗ್ಗೆ ಬಿಜೆಪಿ-ಕಾಂಗ್ರೆಸ್ ನಡುವಿನ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿದ್ದು, ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದ ರಾಹುಲ್ ಗಾಂಧಿ ಅವರ ಹಳೆಯ ಭಾಷಣಗಳನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಪ್ರಕಟಿಸಿದ್ದಾರೆ.

ರಾಹುಲ್ ಅವರೇ ಇದೇನು ಮ್ಯಾಜಿಕ್ ನಡೆಯುತ್ತಿದೆ, ಈ ಹಿಂದೆ ನೀವೇ ಒಪ್ಪಿದ್ದನ್ನು ಈಗ ನೀವೇ ವಿರೋಧಿಸುತ್ತಿದ್ದೀರಿ, ನಿಮಗೆ ದೇಶದ, ರೈತರ ಹಿತಾಸಕ್ತಿಗೆ ಸಂಬಂಧಿಸಿದಂತೆ ಏನೂ ಆಗಬೇಕಿಲ್ಲ, ನಿಮಗೆ ಕೇವಲ ರಾಜಕಾರಣವಷ್ಟೇ ಮಾಡಬೇಕಿದೆ. ದೇಶದ ಜನತೆಗೆ, ರೈತರಿಗೆ ನಿಮ್ಮ ದ್ವಿಮುಖ ನೀತಿ ಅರ್ಥವಾಗಿದೆ ಎಂದು ನಡ್ಡಾ ವಾಗ್ದಾಳಿ ನಡೆಸಿದ್ದಾರೆ.

What Magic Is This, Rahulji JP Naddas Swipe Over Farm Laws Protest

ಈಗ ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿರುವ ರೈತರನ್ನು ಬೆಂಬಲಿಸುತ್ತಿರುವ ರಾಹುಲ್ ಗಾಂಧಿ ವಿರುದ್ಧ ಇದೇ ವಿಷಯವನ್ನಿಟ್ಟುಕೊಂಡು ಆರೋಪ ಮಾಡಿರುವ ಜೆಪಿ ನಡ್ಡಾ, ಈ ಹಿಂದೆ ನೀವೇ ಬೆಂಬಲಿಸಿದ್ದನ್ನು ಈಗ ವಿರೋಧಿಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.

ರೈತರ ಪ್ರತಿಭಟನೆಯ ವಿಷಯದಲ್ಲಿ ಕಾಂಗ್ರೆಸ್ ನಾಯಕರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

English summary
The BJP and the Congress sparred on Sunday over excerpts from Rahul Gandhi's May 2015 Lok Sabha speech - in which the Kerala MP referred to a conversation with a potato farmer from Uttar Pradesh and seemed to support removing middlemen and allowing farmers to sell directly to buyers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X