ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Yellow Fungus : ಬ್ಲ್ಯಾಕ್‌, ವೈಟ್‌ ಬಳಿಕ ಕಾಣಿಸಿಕೊಂಡಿದೆ ಎಲ್ಲೋ ಫಂಗಸ್‌- ಇಲ್ಲಿದೆ ಬಹುಮುಖ್ಯ ಮಾಹಿತಿ

|
Google Oneindia Kannada News

ನವದೆಹಲಿ, ಮೇ 24: ಕೊರೊನಾ ಸೋಂಕಿನ ನಡುವೆ ಬ್ಲ್ಯಾಕ್‌, ವೈಟ್‌ ಫಂಗಸ್‌ ಸೋಂಕು ಕಾಣಿಸಿಕೊಂಡು ಜನರು ಆತಂಕಕ್ಕೆ ಒಳಗಾಗಿರುವ ನಡುವೆ ಈಗ ದೆಹಲಿ ಎನ್‌ಸಿಆರ್‌ನಲ್ಲಿ ಎಲ್ಲೋ ಫಂಗಸ್‌ ಸೋಂಕಿನ ಪ್ರಕರಣ ವರದಿಯಾಗಿದೆ. ಆಂತರಿಕವಾಗಿ ಬೆಳೆಯುವ ಈ ಹಳದಿ ಶಿಲೀಂಧ್ರವು ಇತರ ಎರಡು ಫಂಗಸ್‌ಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತದೆ.

ದೇಶದಲ್ಲಿ ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಅಧಿಕವಾಗುತ್ತಿದೆ. ಈ ನಡುವೆ ವೈಟ್‌ ಫಂಗಸ್‌ ಕೂಡಾ ಪತ್ತೆಯಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ವೈದ್ಯರುಗಳು ಈ ವೈಟ್‌ ಫಂಗಸ್‌, ಬ್ಲ್ಯಾಕ್‌ ಫಂಗಸ್‌ನಷ್ಟು ಅಪಾಯಕಾರಿಯಲ್ಲ, ಭಯಬೇಡ ಎಂದು ಹೇಳಿದ್ದಾರೆ.

ಬ್ಲ್ಯಾಕ್‌ ಫಂಗಸ್ ನಂತರ ಇದೀಗ ಅಪಾಯಕಾರಿ ವೈಟ್ ಫಂಗಸ್ ಪತ್ತೆ; ಯಾರು ಎಚ್ಚರದಿಂದಿರಬೇಕು?ಬ್ಲ್ಯಾಕ್‌ ಫಂಗಸ್ ನಂತರ ಇದೀಗ ಅಪಾಯಕಾರಿ ವೈಟ್ ಫಂಗಸ್ ಪತ್ತೆ; ಯಾರು ಎಚ್ಚರದಿಂದಿರಬೇಕು?

ಆದರೀಗ ಪತ್ತೆಯಾಗಿರುವ ಹಳದಿ ಶಿಲೀಂಧ್ರವು ಬ್ಲ್ಯಾಕ್‌, ವೈಟ್‌ ಶಿಲೀಂಧ್ರಗಳಿಗಿಂತ ಅಪಾಯಕಾರಿ ಎಂದು ಹೇಳಲಾಗಿದೆ. ಈ ಎಲ್ಲೋ ಫಂಗಸ್‌ ರೋಗಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದ ಕೂಡಲೇ ಆರಂಭಿಕ ಚಿಕಿತ್ಸೆಯನ್ನು ಪಡೆಯಲು ವೈದ್ಯರುಗಳು ಹೇಳಿದ್ದಾರೆ. ಹಾಗಾದರೆ ಈ ಸೋಂಕಿನ ಲಕ್ಷಣಗಳೇನು, ಈ ಸೋಂಕಿಗೆ ಕಾರಣವೇನು, ಹಳದಿ ಶಿಲೀಂಧ್ರ ಸೋಂಕಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಬಹುಮುಖ್ಯ ಮಾಹಿತಿ ಇಲ್ಲಿದೆ.

ಹಳದಿ ಶಿಲೀಂಧ್ರ ಲಕ್ಷಣಗಳು

ಹಳದಿ ಶಿಲೀಂಧ್ರ ಲಕ್ಷಣಗಳು

ಆಲಸ್ಯ, ತೂಕ ನಷ್ಟ, ಹಸಿವು ಕಡಿಮೆಯಾಗುವುದು ಅಥವಾ ಹಸಿವೇ ಆಗದಿರುವುದು ಸಾಮಾನ್ಯವಾಗಿ ಹಳದಿ ಶಿಲೀಂಧ್ರ ರೋಗದ ಲಕ್ಷಣಗಳು ಎಂದು ಹೇಳಲಾಗುತ್ತದೆ. ಇನ್ನು ಕಣ್ಣುಗಳು ಸುಸ್ತಾದಂತೆ ಕಾಣುವುದು, ಕಣ್ಣಿನಲ್ಲಿ ಹಳದಿ, ಬಿಳಿ ಬಣ್ಣದ ಸ್ರಾವವಾಗುವುದು ಈ ರೋಗದ ತೀವ್ರವಾದ ಲಕ್ಷಣಗಳಾಗಿವೆ. ಇನ್ನು ಈ ಶಿಲೀಂಧ್ರ ರೋಗ ಬಂದಿರುವವರಿಗೆ ಗಾಯಗಳಾಗಿದ್ದಲ್ಲಿ ಅದನ್ನು ಗುಣಪಡಿಸಲು ತೊಂದರೆ ಉಂಟಾಗುತ್ತದೆ. ಹಾಗೆಯೇ ಈ ರೋಗ ತೀವ್ರವಾದರೆ ಅಂಗಾಂಗ ವೈಫಲ್ಯ, ಅಪೌಷ್ಟಿಕತೆಗೆ ಕಾರಣವಾಗಬಹುದು. ಅಂತಿಮವಾಗಿ ವಿಪರೀತ ಸಂದರ್ಭಗಳಲ್ಲಿ ಈ ರೋಗವು ಜೀವಕೋಶಗಳ ನಷ್ಟಕ್ಕೆ ಕಾರಣವಾಗಬಹುದು.

ಗಾಳಿ ಮೂಲಕವೂ ಬ್ಲ್ಯಾಕ್ ಫಂಗಸ್ ಹರಡುತ್ತದೆ: ಏಮ್ಸ್ ವೈದ್ಯರುಗಾಳಿ ಮೂಲಕವೂ ಬ್ಲ್ಯಾಕ್ ಫಂಗಸ್ ಹರಡುತ್ತದೆ: ಏಮ್ಸ್ ವೈದ್ಯರು

ಹಳದಿ ಶಿಲೀಂಧ್ರ ರೋಗಕ್ಕೆ ಕಾರಣ

ಹಳದಿ ಶಿಲೀಂಧ್ರ ರೋಗಕ್ಕೆ ಕಾರಣ

ಹೆಚ್ಚಿನ ತೇವತೆಯಿರುವ ಹಳೆಯ ಆಹಾರ ಸೇವನೆ, ನೈರ್ಮಲ್ಯ ಕೊರತೆಯು ಈ ಹಳದಿ ಹಳದಿ ಶಿಲೀಂಧ್ರ ರೋಗ ಬರುವ ಪ್ರಾಥಮಿಕ ಕಾರಣವಾಗಿದೆ. ಹಳೆಯ ಆಹಾರವನ್ನು ಎಸೆದು ಸ್ಥಳ ಸ್ವಚ್ಛಗೊಳಿಸುವುದು, ಮಲವನ್ನು ಸರಿಯಾಗಿ ವಿಲೇವಾರಿ ಮಾಡುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹರಡುವುದನ್ನು ತಡೆಯಬಹುದಾಗಿದೆ. ಇನ್ನು ಮನೆ ಅಥವಾ ಕಚೇರಿಯಂತಹ ಒಳ ಪ್ರದೇಶದಲ್ಲಿ ತೇವಾಂಶವು ಶೇ.30-40 ರಷ್ಟು ಇರಬಾರದು. ಹೆಚ್ಚಿನ ತೇವಾಂಶವು ವಾತಾವರಣದಲ್ಲಿ ಶಿಲೀಂಧ್ರದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಆತಂಕ ಬೇಡ: ವೈಟ್ ಫಂಗಸ್ ಬ್ಲ್ಯಾಕ್ ಫಂಗಸ್ ಅಷ್ಟು ಅಪಾಯಕಾರಿಯಲ್ಲಆತಂಕ ಬೇಡ: ವೈಟ್ ಫಂಗಸ್ ಬ್ಲ್ಯಾಕ್ ಫಂಗಸ್ ಅಷ್ಟು ಅಪಾಯಕಾರಿಯಲ್ಲ

ಹಳದಿ ಶಿಲೀಂಧ್ರಕ್ಕೆ ಚಿಕಿತ್ಸೆ ಏನು?

ಹಳದಿ ಶಿಲೀಂಧ್ರಕ್ಕೆ ಚಿಕಿತ್ಸೆ ಏನು?

ಈ ಹಳದಿ ಶಿಲೀಂಧ್ರ ರೋಗ ಆರಂಭವಾಗುತ್ತಿದ್ದಂತೆ ಪತ್ತೆಯಾದರೆ, ಗಾಜಿಯಾಬಾದ್‌ನಲ್ಲಿ ಹಳದಿ ಶಿಲೀಂಧ್ರ ಸೋಂಕು ದೃಢಪಟ್ಟ ವ್ಯಕ್ತಿಗೆ ನೀಡಲಾದ ಚಿಕಿತ್ಸೆಯಂತೆ ಇತರರಿಗೆ ನೀಡಿ ಗುಣಪಡಿಸಬಹುದು. ಆಂಟಿ ಫಂಗಸ್‌ ಔಷಧಿಯಾದ Amphotericin B ಇಂಜೆಕ್ಷನ್ ಬಳಸಿ ಹಳದಿ ಶಿಲೀಂಧ್ರ ರೋಗ ಬಂದಿರುವವರನ್ನು ಗುಣಪಡಿಸಬಹುದು.

ಬ್ಲ್ಯಾಕ್ ಫಂಗಸ್; ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್‌ಡಿಕೆಬ್ಲ್ಯಾಕ್ ಫಂಗಸ್; ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್‌ಡಿಕೆ

ಭಾರತದಲ್ಲಿ ಹಳದಿ ಶಿಲೀಂಧ್ರ ಸೋಂಕು

ಭಾರತದಲ್ಲಿ ಹಳದಿ ಶಿಲೀಂಧ್ರ ಸೋಂಕು

ಭಾರತದಲ್ಲಿ ಹಳದಿ ಶಿಲೀಂಧ್ರದ ಮೊದಲ ಪ್ರಕರಣವು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವರದಿಯಾಗಿದ್ದು, ಈವರೆಗೆ ಒಂದು ಪ್ರಕರಣ ಮಾತ್ರ ಬೆಳಕಿಗೆ ಬಂದಿದೆ. ಬೇರೆ ಯಾವುದೇ ರಾಜ್ಯಗಳಲ್ಲಿ ಈ ಸೋಂಕು ಈವರೆಗೆ ವರದಿಯಾಗಿಲ್ಲ. ಈ ನಡುವೆ, ಎರಡು ತಿಂಗಳ ಹಿಂದೆ ಮೊದಲು ವರದಿಯಾದ ಕಪ್ಪು ಮತ್ತು ಬಿಳಿ ಶಿಲೀಂಧ್ರಗಳ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿವೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಮ್ಯೂಕೋರ್ಮೈಕೋಸಿಸ್ ಅಥವಾ 'ಬ್ಲ್ಯಾಕ್ ಫಂಗಸ್' ಪ್ರಕರಣಗಳ ಹೆಚ್ಚಳವಾಗುತ್ತಿದೆ. ಹಲವಾರು ರಾಜ್ಯಗಳು ಈ ರೋಗವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಭಾರತದಾದ್ಯಂತ ಪ್ರಸ್ತುತ 8,848 ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿದ್ದು, ಮತ್ತೊಂದೆಡೆ ಬಿಳಿ ಶಿಲೀಂಧ್ರ ಪ್ರಕರಣ ಸಂಖ್ಯೆ ಕಡಿಮೆಯಾಗಿದೆ. ಬಿಳಿ ಶಿಲೀಂಧ್ರವು ಹೆಚ್ಚು ಅಪಾಯಕಾರಿ ಅಲ್ಲ ಎಂದು ಕೂಡಾ ಹೇಳಲಾಗುತ್ತಿದೆ. ಈ ಎರಡು ರೋಗಗಳು ಮಧುಮೇಹ ಇರುವವರಲ್ಲಿ ಅಥವಾ ಕೋವಿಡ್‌ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್‌ ಬಳಸಿದವರಲ್ಲಿ ಪತ್ತೆಯಾಗಿದೆ.

English summary
Here we talking about Yellow fungus infection causes, symptoms, treatment and all you need to know about disease in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X