ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಬ್ಲಿಘಿ ಜಮಾತ್ ಅಂದರೆ ಏನು? ಅದರ ಸುತ್ತ ಮುತ್ತ

|
Google Oneindia Kannada News

ನವ ದೆಹಲಿ, ಏಪ್ರಿಲ್ 01: ತಬ್ಲಿಫಿ ಜಮಾತ್ ಈಗ ಭಾರತದಲ್ಲಿ ದೊಡ್ಡ ಸುದ್ದಿಗೆ ಕಾರಣವಾಗಿದೆ. ಇಲ್ಲಿಯೇ 441 ಜನರಿಗೆ ಕೊರೊನಾ ಸೋಂಕು ಲಕ್ಷಣ ಕಾಣಿಸಿಕೊಂಡಿದೆ. 1107ಕ್ಕೂ ಅಧಿಕ ಜನರು ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ.

ತಬ್ಲಿಘಿ ಜಮಾತ್ ನಂಬಿಕೆಯನ್ನು ಹರಡುವ ಸಮಾಜ. ಇದು ಸುನ್ನಿ ಇಸ್ಲಾಮಿಕ್ ಮಿಷನರಿ ಚಳವಳಿಯಾಗಿದ್ದು, ಧಾರ್ಮಿಕ, ಉಡುಗೆ ಮತ್ತು ವೈಯಕ್ತಿಕ ನಡವಳಿಕೆಯ ವಿಷಯಗಳಲ್ಲಿ ಮುಸ್ಲಿಮರನ್ನು ತಲುಪುವ ಗುರಿ ಹೊಂದಿದೆ.

ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಮೌಲಾನಾ ವಿರುದ್ಧ ಎಫ್ಐಆರ್ ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಮೌಲಾನಾ ವಿರುದ್ಧ ಎಫ್ಐಆರ್

ತಬ್ಲೀಘಿ ಆರು ತತ್ವಗಳನ್ನು ಆಧರಿಸಿದೆ. ಅವುಗಳು ಕಾಲಿಮಾ, ಸಲಾತ್, ಇಲ್ಮ್ ಮತ್ತು ಧಿಕ್ರ್, ಇಕ್ರಮ್-ಇ-ಮುಸ್ಲಿಂ, ಇಖ್ಲಾಸ್-ಇ-ನಿಯಾ ಮತ್ತು ದಾವತ್-ಒ-ತಬ್ಲೀಗ್ ಆಗಿವೆ.

What is Tablighi Jamaat, How it works?

ಇದನ್ನು 1927ರಲ್ಲಿ ಮೌಲಾನಾ ಮುಹಮ್ಮದ್ ಇಲ್ಯಾಸ್ ಖಂಡಲಾವ್ ಮೇವಾಟ್ ನಲ್ಲಿ ಪ್ರಾರಂಭಿಸಿದರು. ಇಲ್ಯಾಸ್ ಮುಸ್ಲಿಮರನ್ನು ಸಾಂಪ್ರದಾಯಿಕ ಇಸ್ಲಾಂ ಧರ್ಮಕ್ಕೆ ಮರಳಿಸುವ ಗುರಿಯನ್ನು ಹೊಂದಿದ್ದರು ಮತ್ತು ಅವರು ದಿಯೋಬಂದ್ ಮತ್ತು ಸಹರನ್ ಪುರದ ಹಲವಾರು ಯುವಕರಿಗೆ ತರಬೇತಿ ನೀಡಿ ಅವರನ್ನು ಮೇವಾತ್‌ಗೆ ಕಳುಹಿಸಿದರು. ಇಲ್ಲಿಯೇ ತಬ್ಲಿಘಿ ಮಸೀದಿಗಳು ಮತ್ತು ಮದರಸಾಗಳ ಜಾಲವನ್ನು ಸ್ಥಾಪಿಸಿದರು.

ತಬ್ಲಿಫಿ ಜಮಾತ್ ಪ್ರಾರಂಭವಾದ ಎರಡು ದಶಕಗಳಲ್ಲಿ ಇದರ ವ್ಯಾಪ್ತಿಯು ದೂರದವರೆಗೆ ಹರಡಿತು. 1941 ರ ಸಮ್ಮೇಳನದಲ್ಲಿ, ಉತ್ತರ ಭಾರತದಿಂದ ಸುಮಾರು 25,000 ಮಂದಿ ಭಾಗಿಯಾಗಿದ್ದರು.

1947ರ ಭಾರತದ ವಿಭಜನೆಯ ನಂತರ, ಲಾಹೋರ್‌ನ ರೈವಿಂಡ್‌ನಲ್ಲಿ ಪಾಕಿಸ್ತಾನದ ಘಟಕ/ಕೇಂದ್ರವನ್ನು ರಚಿಸಲಾಯಿತು. ಸದ್ಯ ಅತಿದೊಡ್ಡ ಕೇಂದ್ರವು ಬಾಂಗ್ಲಾದೇಶದಲ್ಲಿದೆ. ಇದು ಮಲೇಷ್ಯಾ, ಸಿಂಗಾಪುರ್ ಮತ್ತು ಇಂಡೋನೇಷ್ಯಾವನ್ನು ಹೊರತುಪಡಿಸಿ ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್‌ನಲ್ಲಿ ಕೇಂದ್ರಗಳನ್ನು ಸಹ ಹೊಂದಿದೆ.

ಬೆಳಿಗ್ಗೆ 8 ರಿಂದ 11 ರವರೆಗಿನ ಅದರ ಚರ್ಚೆಗಳು ನಡೆಯುತ್ತದೆ. ಅಲ್ಲಿ ಜನರನ್ನು ಸುಮಾರು 10 ಜನರ ಗುಂಪುಗಳಾಗಿ ವಿಂಗಡಿಸಲಾಗಿದೆ. ನಂತರ ಪ್ರತಿ ಗುಂಪು ಒಬ್ಬ ನಾಯಕನನ್ನು ಆಯ್ಕೆ ಮಾಡುತ್ತದೆ. ವ್ಯಕ್ತಿಗಳು ಎಷ್ಟು ಹಣವನ್ನು ತಂದಿದ್ದಾರೆ ಎಂಬುದರ ಆಧಾರದ ಮೇಲೆ ಗುಂಪಿಗೆ ಗುರಿ ನೀಡಲಾಗುತ್ತದೆ. ಮಧ್ಯಾಹ್ನ 3 ರಿಂದ 5 ರ ನಡುವೆ ಹೊಸಬರಿಗೆ ಇಸ್ಲಾಂ ಧರ್ಮದ ಕುರಿತು ಮಾತುಕತೆ ನಡೆಯುತ್ತಿದೆ. ಸೂರ್ಯಾಸ್ತದ ನಂತರ, ಕುರಾನ್‌ ಪಠಣ ಮಾಡಲಾಗುತ್ತದೆ.

English summary
What is the Tablighi Jamaat?. The Tablighi Jamaat is in the news after over 2,000 tested positive for coronavirus from among the 4,000 who had gathered at the Markaz Nizamuddin in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X