ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ನುಗ್ಗಿದಾಗ ಚಿದಂಬರಂ ಮನೆಯ ಒಳಗೆ ನಡೆದ ಘಟನೆಗಳು

|
Google Oneindia Kannada News

Recommended Video

ನಿನ್ನೆ ರಾತ್ರಿ ಚಿದಂಬರಂ ಮನೆಯಲ್ಲಿ ಏನೆಲ್ಲಾ ನಡೀತು ಗೊತ್ತಾ..? | P Chidambaram | Oneindia Kannada

ನವದೆಹಲಿ, ಆಗಸ್ಟ್ 21: ಪಿ ಚಿದಂಬರಂ ಅವರು ಕಾಂಗ್ರೆಸ್ ಮುಖ್ಯಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಪ್ರಾರಂಭಿಸುತ್ತಿದ್ದಂತೆ ಅವರನ್ನು ಬಂಧಿಸಲು ಸಿಬಿಐ ತಂಡವೊಂದು ಕಾಂಗ್ರೆಸ್ ಕಚೇರಿ ಕಡೆಗೆ ಬಂದಿತು. ಆದರೆ ಅವರು ಬರುವ ಒಳಗೆ ಚಿದಂಬರಂ ಸುದ್ದಿಗೋಷ್ಠಿ ಮುಗಿಸಿ ತಮ್ಮ ನಿವಾಸಕ್ಕೆ ತೆರಳಿದರು.

ಚಿ.ಚಿದಂಬರಂ ಅವರು ಕಾಂಗ್ರೆಸ್ ಮುಖಂಡರಾದ ಕಪಿಲ್ ಸಿಬಲ್, ವಕೀಲ ಅಭಿಶೇಕ್ ಸಿಂಘ್ವಿ, ಗುಲಾಂ ನಬಿ ಆಜಾದ್ ಇನ್ನೂ ಕೆಲವರೊಂದಿಗೆ ಜೋರ್ ಭಾಗ್‌ನ ತಮ್ಮ ನಿವಾಸಕ್ಕೆ ತೆರಳಿ, ಸಿಬಿಐ ತಂಡದ ಬರುವಿಕೆಗೆ ಕಾದರು. ಆದರೆ ಅದಕ್ಕೂ ಮುನ್ನಾ ಹಲವು ಮಾಧ್ಯಮ ಪ್ರತಿನಿಧಿಗಳು ಚಿದಂಬರಂ ನಿವಾಸದ ಮುಂದೆ ಜಮೆ ಆಗಿದ್ದರು.

ಪಿ. ಚಿದಂಬರಂ ಬಂಧನ: ಬುಧವಾರ ಇಡೀ ದಿನ ನಡೆದ ಹೈಡ್ರಾಮಪಿ. ಚಿದಂಬರಂ ಬಂಧನ: ಬುಧವಾರ ಇಡೀ ದಿನ ನಡೆದ ಹೈಡ್ರಾಮ

ನಿವಾಸದ ಬಳಿ ಬಂದ ಸಿಬಿಐ ತಂಡಕ್ಕೆ ಗೇಟ್‌ನಿಂದ ಒಳಗೆ ಹೋಗಲು ಆಗಲಿಲ್ಲ, ಆಗ ಗೇಟ್ ಹಾರಿ ನಿವಾಸದ ಒಳಕ್ಕೆ ಅವರು ಪ್ರವೇಶಿಸಿದರು. ನಂತರ ಇನ್ನೂ ಎರಡು ಸಿಬಿಐ ತಂಡಗಳು ಅಲ್ಲಿಗೆ ಬಂದು, ಹಿಂದಿನ ಗೇಟ್ ಮೂಲಕ ಒಳಕ್ಕೆ ಹೋದರು. ಇಡಿ ತಂಡ ಸಹ ಚಿದಂಬರಂ ಅವರ ಮನೆಗೆ ಹಿಂದಿನ ಗೇಟ್‌ನಿಂದ ಒಳಕ್ಕೆ ಹೋದರು.

What Happens When CBI Enters Chidambarams House

ಸಿಬಿಐ ಮತ್ತು ಇಡಿ ತಂಡ ಚಿದಂಬರಂ ಅವರ ನಿವಾಸಕ್ಕೆ ಬಂದಾಗ ಅವರ ವಕೀಲ ಅಭಿಶೇಕ್ ಸಿಂಘ್ವಿ ಸಹ ಒಳಗೆ ಇದ್ದರು. ಒಳಗೆ ನಡೆದ ಘಟನೆಗಳ ಬಗ್ಗೆ ಮಾತನಾಡಿರುವ ಸಿಂಘ್ವಿ, ಒಳಕ್ಕೆ ಬರಲು ಬಹಳ ಅಡ್ಡಿಗಳಿದ್ದವು. ಟಿವಿ ಮಾಧ್ಯಮದವರು ಮೊದಲ ಅಡ್ಡಿ ಹಾಗಾಗಿ ಅವರು ಗೋಡೆ ಹಾರಿ ಬಂದರು. ಅವರು ಬಂದಿರುವ ವಿಷಯ ಸಹ ನಮಗೆ ತಿಳಿದಿರಲಿಲ್ಲ ಎಂದರು.

ಬಂಧನದ ಬಗ್ಗೆ ಪಿ.ಚಿದಂಬರಂ ವಕೀಲರು ಹೇಳಿದ್ದೇನು? ಬಂಧನದ ಬಗ್ಗೆ ಪಿ.ಚಿದಂಬರಂ ವಕೀಲರು ಹೇಳಿದ್ದೇನು?

ಒಳಗೆ ಬಂದ ಸಿಬಿಐ ಅಧಿಕಾರಿಗಳು ಯಾವುದೇ ವಿವರಣೆ ಕೊಡಲಿಲ್ಲ ಬದಲಿಗೆ ವಾರೆಂಟ್ ಅನ್ನು ನೀಡಿ ಬಂಧಿಸುತ್ತಿರುವುದಾಗಿ ಹೇಳಿದರು. ಸಿದಂಬರಂ ಅವರು ತಮ್ಮ ಬಟ್ಟೆ ಮತ್ತು ಮಾತ್ರೆಗಳನ್ನು ತೆಗೆದುಕೊಂಡು ತಯಾರಾದರು ಎಂದರು.

ಅಷ್ಟರಲ್ಲಾಗಲೆ ಚಿದಂಬರಂ ಅವರ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಪ್ರಾರಂಭ ಮಾಡಿದ್ದರು. ಅವರ ಜೊತೆಗೆ ಚಿದಂಬರಂ ವಿರುದ್ಧವಾಗಿಯೂ ಕೆಲವರು ಪ್ರತಿಭಟನೆ ಪ್ರಾರಂಭ ಮಾಡಿದ್ದರು.

ಚಿದಂಬರಂ ಅವರ ನಿವಾಸದ ಮುಂದೆ ಜನ ಹೆಚ್ಚಾದ ಕಾರಣ, ಸಿಬಿಐ ನವರು ಪೊಲೀಸರ ನೆರವು ಕೇಳಿದರು. ಅಂತೆಯೇ ಪೊಲೀಸರು ಬಂದು ಪ್ರತಿಭಟನಾಕಾರರನ್ನು ನಿಯಂತ್ರಿಸುವುದರಲ್ಲಿ ತೊಡಗಿದರು. ಜೊತೆಗೆ ಮಾಧ್ಯಮದವರನ್ನೂ ನಿಯಂತ್ರಿಸಲು ತೊಡಗಿದರು.

ಐಎನ್ಎಕ್ಸ್ ಮೀಡಿಯಾ ಕೇಸ್: ಪಿ ಚಿದಂಬರಂ ಭ್ರಷ್ಟಾಚಾರದ ಹೆಜ್ಜೆಗಳುಐಎನ್ಎಕ್ಸ್ ಮೀಡಿಯಾ ಕೇಸ್: ಪಿ ಚಿದಂಬರಂ ಭ್ರಷ್ಟಾಚಾರದ ಹೆಜ್ಜೆಗಳು

ಮೊದಲೇ ನಿವಾಸದ ಗೇಟ್‌ನ ಒಳಗೆ ತೆಗೆದುಕೊಂಡು ಹೋಗಿದ್ದ ಬಿಳಿಯ ಕಾರಿನಲ್ಲಿ ಚಿದಂಬರಂ ಅವರನ್ನು ಕರೆದುಕೊಂಡು ಹೊರಗೆ ಬರಲಾಯಿತು. ಕಾರಿಗೆ ಅಡ್ಡಲಾಗಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ನಿಂತು ಚಿದಂಬರಂ ಬಂಧನವನ್ನು ವಿರೋಧಿಸಿದರು. ಅವರನ್ನು ಪೊಲೀಸರು ಪಕ್ಕಕ್ಕೆ ಸರಿಸಿ ಕಾರಿಗೆ ಹಾದಿ ಮಾಡಿಕೊಟ್ಟರು.

ಚಿದಂಬರಂ ಅವರನ್ನು ಅಲ್ಲಿಂದ ನೇರವಾಗಿ ರಾಮ್‌ಮನೋಹರ ಲೋಹಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಯಿತು. ನಂತರ ಅಲ್ಲಿಂದ ಸಿಬಿಐ ಮುಖ್ಯ ಕಚೇರಿಗೆ ಕರೆದುಕೊಂಡು ಹೋಗಲಾಯಿತು.

English summary
When CBI enters what happens inside the P Chidambaram's house. Lawyer Abhishek Singhvi gives full detail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X