ಡಿಕೆಶಿ ಧೈರ್ಯವಾಗಿದ್ದಾರೆ, ಗೆಲ್ಲುವ ವಿಶ್ವಾಸದಲ್ಲಿದ್ದಾರೆ: ಎಚ್ಡಿಕೆ
ಬೆಂಗಳೂರು, ಅಕ್ಟೋಬರ್ 21: ಡಿ.ಕೆ. ಶಿವಕುಮಾರ್ ಅವರು ಧೈರ್ಯದಿಂದ ಇದ್ದಾರೆ, ಕಾನೂನು ಹೋರಾಟ ಮುಂದುವರೆಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ತಿಹಾರ್ ಜೈಲಿನಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಬೇಕು ಎಂದು ಅವರ ಸೋದರ ಸುರೇಶ್ ಬಳಿ ಕೇಳಿದ್ದೆ, ಇಂದು ಆ ಅವಕಾಶ ದೊರೆತಿದೆ. ಶಿವಕುಮಾರ್ ಅವರು ಧೈರ್ಯದಿಂದ ಇದ್ದಾರೆ, ರಾಜಕೀಯವಾಗಿ, ಕಾನೂನಾತ್ಮಕವಾಗಿ ಹೋರಾಟವನ್ನು ಮಾಡಲು ಅವರು ಸಿದ್ಧರಿದ್ದಾರೆ ಎಂದರು.
ಡಿ.ಕೆ ಶಿವಕುಮಾರ್ ಭೇಟಿ ಮಾಡಲಿರುವ ಎಚ್ಡಿ ಕುಮಾರಸ್ವಾಮಿ
ಅವರ ಮುಖದಲ್ಲಿ ಗೆಲುವಿನ ವಿಶ್ವಾಸವನ್ನು ಕಂಡಿದ್ದೇನೆ, ಹೋರಾಟಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ, ಎಲ್ಲಾ ಹೋರಾಟವನ್ನು ಎದುರಿಸಿ ಹೊರಗೆ ಬರುತ್ತೇನೆ , ನ್ಯಾಯ ಸಿಗುವ ಎಲ್ಲಾ ಭರವಸೆ ಇದೆ ಎಂದು ಹೇಳಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಭೇಟಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಬರಬೇಕಿತ್ತು. ಆದರೆ ಸೋನಿಯಾ ಗಾಂಧಿಗೆ ಅನಾರೋಗ್ಯದ ಕಾರಣ ಶಿವಕುಮಾರ್ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.