ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯಾ ತೀರ್ಪಿನ ವೇಳೆ ಸಿಜೆಐ ಉಲ್ಲೇಖಿಸಿದ ಅಂಶಗಳೇನು?

|
Google Oneindia Kannada News

ನವದೆಹಲಿ, ನವೆಂಬರ್ 9: ಸುದೀರ್ಘ ಕಾಲದ ಅಯೋಧ್ಯಾ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶನಿವಾರ ತನ್ನ ಅಂತಿಮ ತೀರ್ಪು ಪ್ರಕಟಿಸಿದೆ. ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠ, ಅವಿರೋಧವಾಗಿ ಒಮ್ಮತದ ತೀರ್ಪು ಪ್ರಕಟಿಸಿತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ 30 ನಿಮಿಷಕ್ಕೂ ಅಧಿಕ ಸಮಯ ಸುದೀರ್ಘವಾದ ತೀರ್ಪಿನ ಅಂಶಗಳನ್ನು ಓದಿದರು.

ಪ್ರತಿ ಅರ್ಜಿದಾರರ ವಾದವನ್ನು ಉಲ್ಲೇಖಿಸಿದ ರಂಜನ್ ಗೊಗೊಯ್, ಅಯೋಧ್ಯಾದಲ್ಲಿನ ಬಾಬ್ರಿ ಮಸೀದಿ ಮತ್ತು ರಾಮಮಂದಿರಕ್ಕೆ ಕುರಿತಾದ ಪುರಾವೆಗಳಿಂದ ದೊರೆತ ಮಾಹಿತಿಗಳ ಹಾಗೂ ಪುರಾಣಗಳಲ್ಲಿ ನಮೂದಿಸಲಾಗಿದ್ದ ಮಾಹಿತಿಗಳನ್ನು ಆಧರಿಸಿ ತೀರ್ಪು ಪ್ರಕಟಿಸಿದರು.

ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ

ಬಾಬರ್‌ನ ಆದೇಶದಂತೆ ಈ ಜಾಗದಲ್ಲಿ ಮಿರ್ ಬಾಕಿ ಮಸೀದಿ ನಿರ್ಮಿಸಿದ್ದ. 1949ರಲ್ಲಿ ಮಸೀದಿಯೊಳಗೆ ವಿಗ್ರಹಗಳನ್ನು ಇರಿಸಲಾಯಿತು. ಇದು ಅಪವಿತ್ರ ಕೆಲಸ ಎಂದ ಸಿಜೆಐ, ಅರ್ಜಿದಾರರಲ್ಲಿ ಒಬ್ಬರಾದ ನಿರ್ಮೋಹಿ ಅಖಾರ ಸಲ್ಲಿಸಿದ್ದ ಅರ್ಜಿ ನಿರ್ವಹಣೆಗೆ ಮಾತ್ರ ಸಂಬಂಧಿಸಿದ್ದು ಎಂದು ಪೂಜೆ ಸಲ್ಲಿಸುವ ಹಕ್ಕಿನ ಪ್ರತಿಪಾದನೆಯನ್ನು ತಳ್ಳಿಹಾಕಿದರು. ಜತೆಗೆ ಶಿಯಾ ವಕ್ಫ್ ಬೋರ್ಡ್ ಅರ್ಜಿಯನ್ನು ಸಹ ತಿರಸ್ಕರಿಸಿದ್ದರು. ಈ ಸಂದರ್ಭದಲ್ಲಿ ಅವರು ಉಲ್ಲೇಖಿಸಿದ ಪ್ರಮುಖ ಅಂಶಗಳು ಇಲ್ಲಿವೆ.

ಮಸೀದಿ ಅಡಿ ದೇವಸ್ಥಾನದ ಕಲಾಕೃತಿ

ಮಸೀದಿ ಅಡಿ ದೇವಸ್ಥಾನದ ಕಲಾಕೃತಿ

ಪುರತತ್ವ ಇಲಾಖೆಯ ವರದಿಯನ್ನು ಪರಿಗಣಿಸಲಾಗಿದೆ. ಇದರ ಪ್ರಕಾರ ಖಾಲಿ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲಾಗಿಲ್ಲ. ಈ ವಿವಾದಿತ ಕಟ್ಟಡ ಅಡಿ ಮತ್ತೊಂದು ರಚನೆಯಿತ್ತು. ಈ ಅಡಿ ಭಾಗದಲ್ಲಿದ್ದ ರಚನೆ ಇಸ್ಲಾಮಿಕ್ ರಚನೆಯಾಗಿರಲಿಲ್ಲ. ಪುರಾವೆಗಳ ಪ್ರಕಾರ ದೇವಸ್ಥಾನದ ಕಲಾಕೃತಿಯಿತ್ತು. ಆದರೆ ಅಲ್ಲಿ ದೇವಸ್ಥಾನವನ್ನು ಉರುಳಿಸಲಾಗಿತ್ತು ಎಂಬ ವಾದವನ್ನು ಎಎಸ್‌ಐ ವರದಿ ಬೆಂಬಲಿಸುವುದಿಲ್ಲ.

ಹಿಂದೂಗಳ ನಂಬಿಕೆ ವಿವಾದಾತೀತ

ಹಿಂದೂಗಳ ನಂಬಿಕೆ ವಿವಾದಾತೀತ

ರಾಮಜನ್ಮಭೂಮಿ ಕಾನೂನಾತ್ಮಕ ವ್ಯಕ್ತಿಯಲ್ಲ. ರಾಮಲಲ್ಲಾದ ಭಕ್ತ ಕಾನೂನಾತ್ಮಕ ವ್ಯಕ್ತಿ. ಅಯೋಧ್ಯಾದಲ್ಲಿ ರಾಮ ಜನಿಸಿದ್ದ ಎಂಬ ಹಿಂದೂಗಳ ನಂಬಿಕೆ ಹಾಗೂ ವಿಶ್ವಾಸ ವಿವಾದಾತೀತವಾದದ್ದು. ಮಸೀದಿಯ ಕೆಳಗೆ ಇದ್ದ ಕಲಾಕೃತಿ ಹಿಂದೂ ದೇವಸ್ಥಾನ ಎಂದು ಕಂಡುಬಂದರೂ ಅದೊಂದೇ ಕಾರಣಕ್ಕೆ ಜಾಗವನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲ ಎಂದು ರಾಮಲಲ್ಲಾ ವಿರಾಜಮಾನ್ ಅರ್ಜಿಗೆ ಸುಪ್ರೀಂಕೋರ್ಟ್ ಪ್ರತಿಕ್ರಿಯಿಸಿತು.

ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿ

ನಂಬಿಕೆ ಆಧಾರದಲ್ಲಿ ನಿರ್ಧರಿಸಲಾಗದು

ನಂಬಿಕೆ ಆಧಾರದಲ್ಲಿ ನಿರ್ಧರಿಸಲಾಗದು

ನಂಬಿಕೆ ಮತ್ತು ಧಾರ್ಮಿಕ ಪಾಲನೆಯ ಆಧಾರದಲ್ಲಿ ಭೂಮಿಯ ಮಾಲೀಕತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ. ನಂಬಿಕೆಯು ವ್ಯಕ್ತಿಗತ ವಿಶ್ವಾಸದ ವಿಚಾರವಾಗಿದೆ. ನಂಬಿಕೆಯು ನೈಜವಾಗಿದೆ ಎಂಬುದಕ್ಕೆ ನ್ಯಾಯಾಲಯದ ಬಳಿಕ ಸಾಕ್ಷಿಯಿದ್ದರೆ ಅದರಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು ಮತ್ತು ಗುರುತಿಸಬಾರದು. ಜಾತ್ಯತೀತ ಸಂವಿಧಾನದ ಮೌಲ್ಯವು ಪರಸ್ಪರ ಭಿನ್ನಾಭಿಪ್ರಾಯವನ್ನು ಹೊಂದಿರುತ್ತದೆ.

ನಮಾಜ್-ಪೂಜೆ ಸಲ್ಲಿಕೆ

ನಮಾಜ್-ಪೂಜೆ ಸಲ್ಲಿಕೆ

ಒಳಾಂಗಣದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಅದರ ಹೊರಾಂಗಣದಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂಬುದು ಸ್ಪಷ್ಟ. ಅಡೆತಡೆಗಳು ಇದ್ದರೂ ಮುಸ್ಲಿಮರು ಒಳಾಂಗಣದಲ್ಲಿ ನಮಾಜ್ ಸಲ್ಲಿಸುತ್ತಿದ್ದರು. ಹೀಗಾಗಿ ಮಸೀದಿ ಬಳಕೆಯನ್ನು ಮುಸ್ಲಿಮರು ನಿಲ್ಲಿಸಿರಲಿಲ್ಲ. ಆದರೆ ಹಿಂದೂಗಳ ನಂಬಿಕೆ ಪ್ರಕಾರ ರಾಮನ ಜನ್ಮಸ್ಥಳವು ಮಸೀದಿಯ ಒಳಭಾಗದಲ್ಲಿಯೇ ಇದೆ.

25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್

ಮಸೀದಿ ಧ್ವಂಸ ಕಾನೂನು ಉಲ್ಲಂಘನೆ

ಮಸೀದಿ ಧ್ವಂಸ ಕಾನೂನು ಉಲ್ಲಂಘನೆ

1992ರಲ್ಲಿ ಮಸೀದಿ ಧ್ವಂಸಗೊಳಿಸಿದ ಪ್ರಕರಣ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ. 1949ರಲ್ಲಿ ಮಸೀದಿಯೊಳಗೆ ವಿಗ್ರಹಗಳನ್ನು ಇರಿಸಿ ಅಪವಿತ್ರಗೊಳಿಸಿದ್ದು ಮತ್ತು ಧ್ವಂಸಗೊಳಿಸಿತ್ತು ಕಾನೂನಿಗೆ ವಿರುದ್ಧ. 1857ಕ್ಕೂ ಮೊದಲು ಇಡೀ ಮಸೀದಿಯ ಮಾಲೀಕತ್ವ ಪೂರ್ಣವಾಗಿ ಮುಸ್ಲಿಮರದ್ದೇ ಆಗಿತ್ತು ಎಂಬುದಕ್ಕೆ ಅವರು ಸಾಕ್ಷ್ಯ ಒದಗಿಸಿಲ್ಲ. ಆದರೆ ಅಲ್ಲಿಂದೀಚೆಗೆ ಅವರು ಅಲ್ಲಿ ನಮಾಜ್ ಮಾಡುತ್ತಿದ್ದರು.

ಅಲಹಾಬಾದ್ ಹೈಕೋರ್ಟ್ ತೀರ್ಪು ತಪ್ಪು

ಅಲಹಾಬಾದ್ ಹೈಕೋರ್ಟ್ ತೀರ್ಪು ತಪ್ಪು

ಮಸೀದಿಯ ಹೊರಾಂಗಣದ ಮಾಲೀಕತ್ವವನ್ನು ಹಿಂದೂಗಳು ಸಾಬೀತುಪಡಿಸಿದ್ದಾರೆ. ಒಳಾಂಗಣವು ವಿವಾದಾತ್ಮಕ ಸ್ಥಳವಾಗಿದೆ. ವಿವಾದಾತ್ಮಕ ಜಾಗವನ್ನು ಮೂರು ಭಾಗಗಳಾಗಿ ವಿಭಜಿಸಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪು ಸರಿಯಲ್ಲ.

ಸರ್ಕಾರದಿಂದ ಟ್ರಸ್ಟ್ ರಚನೆ

ಸರ್ಕಾರದಿಂದ ಟ್ರಸ್ಟ್ ರಚನೆ

ಸುನ್ನಿ ವಕ್ಫ್ ಮಂಡಳಿಗೆ ಅಯೋಧ್ಯಾದಲ್ಲಿ ಐದು ಎಕರೆ ಸೂಕ್ತ ಜಾಗವನ್ನು ನೀಡಬೇಕು. ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯೋಜನೆಯೊಂದನ್ನು ರೂಪಿಸಿ ಮೂರು ತಿಂಗಳ ಒಳಗೆ ಟ್ರಸ್ಟ್ ಒಂದನ್ನು ರಚಿಸಬೇಕು. ಮಸೀದಿಯ ಒಳಭಾಗವನ್ನು ಈ ಟ್ರಸ್ಟ್ ವಶಕ್ಕೆ ಒಪ್ಪಿಸಬೇಕು. ಟ್ರಸ್ಟಿಗಳ ಮಂಡಳಿಯಲ್ಲಿ ನಿರ್ಮೋಹಿ ಅಖಾರಾಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು.

English summary
Key things mentioned by CJI Ranjan Gogoi during the pronouncement Ayodhya verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X