ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ.ಡಿ ಕಸ್ಟಡಿ ಪೂರ್ತಿ ಆಸ್ಪತ್ರೆಯಲ್ಲೇ ಕಳೆದ ಡಿಕೆಶಿಯಿಂದ ಸಿಕ್ಕ ಉತ್ತರವೇನು?

|
Google Oneindia Kannada News

Recommended Video

DK Shivakumar : ಇ.ಡಿ ಕಸ್ಟಡಿ ಪೂರ್ತಿ ಆಸ್ಪತ್ರೆಯಲ್ಲೇ ಕಳೆದ ಡಿಕೆಶಿ | Oneindia Kannada

ನವದೆಹಲಿ, ಸೆಪ್ಟೆಂಬರ್ 17: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಬಂಧನದ ದಿನವನ್ನು ಆಸ್ಪತ್ರೆಯಲ್ಲೇ ಕಳೆದಿದ್ದಾರೆ.

ಜಾರಿ ನಿರ್ದೇಶನಾಲಯಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಉತ್ತರ ಏನು ಸಿಕ್ಕಿದೆ ಎಂಬುದೇ ಪ್ರಶ್ನೆಯಾಗಿದೆ.

ಸೆಪ್ಟೆಂಬರ್ 3ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿದ್ದರು. ಅಲ್ಲಿಂದಲೇ ಅವರನ್ನು ಅನಾರೋಗ್ಯ ಕಾಡಲು ಆರಂಭಿಸಿತ್ತು. ಮೊದಲೂ ಕೂಡ ರಕ್ತದೊತ್ತಡ, ಅತಿಸಾರ, ಶುಗರ್ ನಿಂದ ಬಳಳುತ್ತಿದ್ದ ಅವರು ಆಸ್ಪತ್ರೆ ಸೇರಿದ್ದರು.

ಇ.ಡಿ. ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ ಹೀಗಾಗಿ ಮತ್ತೆ ಸೆ.17ರವರೆಗೆ ಇಡಿ ಕಸ್ಟಡಿಗೆ ಕೊಡಿ ವಿಚಾರಣೆ ಇನ್ನೂ ಅಂತ್ಯವಾಗಿಲ್ಲ ಎಂದು ನ್ಯಾಯಾಲಯಕ್ಕೆ ಕೇಳಿದ್ದರು.

ನ್ಯಾಯಾಲಯವು ಮತ್ತೆ ಡಿಕೆ ಶಿವಕುಮಾರ್ ಅವರನ್ನು ಇಡಿ ವಶಕ್ಕೆ ನೀಡಿತ್ತು. ಆದರೆ ಅವರಿಗೆ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 14 ದಿನಗಳ ಕಾಲ ಇ.ಡಿ. ವಶದಲ್ಲಿದ್ದರೂ ಕೂಡ ಯಾವ ಪ್ರಶ್ನೆಯನ್ನೂ ಅವರಿಗೆ ಕೇಳಲಾಗಲಿಲ್ಲ.

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಳೇ ಕಾರಣ?ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಳೇ ಕಾರಣ?

ಎರಡನೇ ಬಾರಿಗೆ ಅವರನ್ನು ಇ.ಡಿ. ಕಸ್ಟಡಿಗೆ ನೀಡಿದ ಸಂದರ್ಭದಲ್ಲಿಅವರಿಗೆ ಇದ್ದಕ್ಕಿದ್ದಂತೆ ಇಂದು ಸಂಜೆ ವೇಳೆಗೆ ರಕ್ತದೊತ್ತಡದಲ್ಲಿ ಏರುಪೇರಾಗಿದೆ ಹಾಗಾಗಿ ಅವರನ್ನು ಕೂಡಲೇ ಆರ್‌ಎಂವಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿ.ಕೆ.ಶಿವಕುಮಾರ್ ಅವರಿಗೆ ಅತಿಸಾರ ಪ್ರಾರಂಭವಾಗಿದೆ ಎಂದೂ ಹೇಳಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ಅವರನ್ನು ಇಡಿ ಅಧಿಕಾರಿಗಳು ಪೊಲೀಸರ ಬಂದೋಬಸ್ತ್‌ನಲ್ಲಿ ದೆಹಲಿಯ ಆರ್‌ಎಂವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

 ಡಿಕೆ ಶಿವಕುಮಾರ್ ಜಾಮೀನಿಗೆ ಇ.ಡಿ. ಆಕ್ಷೇಪಣೆ

ಡಿಕೆ ಶಿವಕುಮಾರ್ ಜಾಮೀನಿಗೆ ಇ.ಡಿ. ಆಕ್ಷೇಪಣೆ

ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯ ಆಕ್ಷೇಪಣೆಯನ್ನು ಸಲ್ಲಿಸಿದೆ. ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದೆ. ಸೋಮವಾರ ದೆಹಲಿಯಲ್ಲಿರುವ ಇಡಿ ವಿಶೇಷ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ ಆಕ್ಷೇಪಣೆ ಸಲ್ಲಿಸಿದೆ. ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಸೆ. 17ರ ಮಂಗಳವಾರ ಅಂತ್ಯವಾಗಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?

 ಡಿಕೆಶಿ ಮಗಳು ಐಶ್ವರ್ಯಾ ವಿಚಾರಣೆ ನಡೆಸಲಾಗಿತ್ತು

ಡಿಕೆಶಿ ಮಗಳು ಐಶ್ವರ್ಯಾ ವಿಚಾರಣೆ ನಡೆಸಲಾಗಿತ್ತು

23 ವರ್ಷದ ಐಶ್ವರ್ಯ ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದು ಹಾಗೂ ಅವರು ಕೋಟ್ಯಾಂತರ ರೂ. ವಹಿವಾಟು ನಡೆಸಿರುವ ಬಗ್ಗೆ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ಅವರಿಗೆ ಮೂರು ದಿನಗಳ ಹಿಂದೆ ಸಮನ್ಸ್​ ಜಾರಿ ಮಾಡಿತ್ತು.

ನಿರಂತರ 7 ಗಂಟೆಗಳ ಕಾಲ ವಿಚಾರಣೆ ಒಳಪಡಿಸಿದ್ದು ಡಿಕೆ ಶಿವಕುಮಾರ್ ಹಾಗೂ ಸಹೋದರ ಡಿಕೆ ಸುರೇಶ್ ಅವರನ್ನು ಆತಂಕಗೊಳ್ಳುವಂತೆ ಮಾಡಿತ್ತು.

ಇಡಿ ವಶಕ್ಕೆ ಪಡೆದಾಗಿನಿಂದಲೂ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಡಿಕೆ ಶಿವಕುಮಾರ್ ಅವರು, ಬಂಧನಕ್ಕೂ ಮುನ್ನ ಆರ್​ಎಂಎಲ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಿಪಿ ಹಾಗೂ ಹೈ ಶುಗರ್​ನಿಂದ ಬಳಲುತ್ತಿರುವ ಅವರಿಗೆ ಪ್ರತಿನಿತ್ಯ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ವಿಶೇಷ ನ್ಯಾಯಾಲಯ ಕೂಡ ಸೂಚನೆ ನೀಡಿತ್ತು.

ಡಿಕೆಶಿಗೆ ಜಾಮೀನು ಸಿಕ್ಕರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ

ಡಿಕೆಶಿಗೆ ಜಾಮೀನು ಸಿಕ್ಕರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ

ಒಂದೊಮ್ಮೆ ಡಿ.ಕೆ. ಶಿವಕುಮಾರ್‌ಗೆ ಜಾಮೀನು ಸಿಕ್ಕರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಕೂಡದು ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯವನ್ನು ಕೇಳಿಕೊಂಡಿದೆ.

ಡಿ. ಕೆ. ಶಿವಕುಮಾರ್ ಜಾಮೀನಿಗೆ ಇಡಿ ಅಕ್ಷೇಪಣೆ; ಕೋರ್ಟ್‌ಗೆ ಹೇಳಿದ್ದೇನು?ಡಿ. ಕೆ. ಶಿವಕುಮಾರ್ ಜಾಮೀನಿಗೆ ಇಡಿ ಅಕ್ಷೇಪಣೆ; ಕೋರ್ಟ್‌ಗೆ ಹೇಳಿದ್ದೇನು?

 ಸೆ.17ಕ್ಕೆ ಇ.ಡಿ. ಕಸ್ಟಡಿ ಅಂತ್ಯ, ಇನ್ನೂ ಹೊರಬಿದ್ದಿಲ್ಲ ಹಲವು ಸತ್ಯ

ಸೆ.17ಕ್ಕೆ ಇ.ಡಿ. ಕಸ್ಟಡಿ ಅಂತ್ಯ, ಇನ್ನೂ ಹೊರಬಿದ್ದಿಲ್ಲ ಹಲವು ಸತ್ಯ

ಸೆ.17ಕ್ಕೆ ಡಿಕೆ ಶಿವಕುಮಾರ್ ಇ.ಡಿ. ಕಸ್ಟಡಿ ಅಂತ್ಯವಾಗಲಿದೆ. ಆದರೆ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ, ಆರ್‌ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನೇರವಾಗಿ ಇಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

14 ದಿನಗಳ ಕಾಲ ಇ.ಡಿ. ವಶದಲ್ಲಿದ್ದರೂ ಕೂಡ ಅವರ ವಿಚಾರಣೆ ಸಾಧ್ಯವಾಗಿಲ್ಲ. ಡಿಕೆ ಶಿವಕುಮಾರ್ ಅವರಿಂದ ಯಾವುದೇ ಮಾಹಿತಿ ಲಭ್ಯವಾಗಿರದ ಕಾರಣ ಜಾರಿ ನಿರ್ದೇಶನಾಲಯವು ಇನ್ನಷ್ಟು ದಿನ ಕಸ್ಟಡಿ ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
Former minister DK Shivakumar detained for alleged money laundering Case, spent the Whole day of custody in the hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X