ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಧಾರಣೆ ಕಾಣದ ದೆಹಲಿ ವಾಯುಮಾಲಿನ್ಯ: ಮಳೆ ಸಾಧ್ಯತೆ

|
Google Oneindia Kannada News

ನವದೆಹಲಿ, ಡಿಸೆಂಬರ್ 03: ಸದ್ಯ ಇಡೀ ಉತ್ತರ ಭಾರತವೇ ಚಳಿಯಿಂದ ಕಂಗೆಟ್ಟಿದ್ದು, ರಾಷ್ಟ್ರ ರಾಜಧಾನಿಯ ವಾತಾವರಣ ತೀರಾ ಹದಗೆಟ್ಟಿದೆ. ಇಂದಿಗೂ ದೆಹಲಿಯ ಏರ್ ಕ್ವಾಲಿಟಿ ಇಂಡೆಕ್ಸ್ (AQI) 381 ಆಗಿದ್ದು ಸುಧಾರಣೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದು ಅತ್ಯಂತ ಕಳಪೆ ವಿಭಾಗದಲ್ಲಿ ಬರುತ್ತದೆ. ದಿಲ್ಲಿಯಲ್ಲಿ ಮಂಗಳವಾರ ಲಘು ಮಳೆಯಾಗುವ ಸಾಧ್ಯತೆ ಇದ್ದು, ಮಳೆಯಾದರೆ ಮಾಲಿನ್ಯ ಕಡಿಮೆಯಾದರೂ ಅದರಲ್ಲಿ ಚಳಿಯ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (SAFAR) ಹೇಳಿದೆ. ದೆಹಲಿ ಕೇವಲ ಮಾಲಿನ್ಯದ ಪರಿಣಾಮಗಳನ್ನು ಅನುಭವಿಸುತ್ತಿದೆ. ಆದರೆ ರಾಜಧಾನಿ ಇಂದು ದಟ್ಟವಾದ ಮಂಜಿನಿಂದ ಕೂಡಿದೆ.

ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

ಕಳಪೆಯಾದ ದೆಹಲಿ ವಾಯುಮಾಲಿನ್ಯ

ಕಳಪೆಯಾದ ದೆಹಲಿ ವಾಯುಮಾಲಿನ್ಯ

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ವಿಭಾಗದಲ್ಲಿದ್ದು ಕಡಿಮೆಯಾಗುವ ಲಕ್ಷಣಗಳೇ ಕಾಣಸಿಗುತ್ತಿಲ್ಲ. ಇದರಿಂದ ದಿನ ಕಳೆದಂತೆ ವಾಯುಮಾಲಿನ್ಯದ ಬಗ್ಗೆ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ದೆಹಲಿಯಲ್ಲಿ ದಟ್ಟವಾದ ಮಂಜಿನಿಂದಾಗಿ ಜನರು ಪ್ರಯಾಣಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದರೂ ವಿಮಾನಯಾನ ಸಂಸ್ಥೆಗಳು ತಮ್ಮ ನಿಗದಿತ ಸಮಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ. ಇಂದು ದೆಹಲಿಯ ಕನಿಷ್ಠ ತಾಪಮಾನವು 4 ಅಥವಾ 5 ಡಿಗ್ರಿಗಳಷ್ಟಿರಬಹುದು. ಒಂದೆಡೆ ಮಾಲಿನ್ಯ ಒಂದೆಡೆ ಚಳಿಯಿಂದಿಗೆ ಮಳೆಯಾಗುವ ಸೂಚನೆ ಕೂಡ ಹವಾಮಾನ ಇಲಾಖೆ ನೀಡಿದೆ.

ವಾಹನ ಸವಾರರ ಪರದಾಟ

ವಾಹನ ಸವಾರರ ಪರದಾಟ

ಈ ಸಮಯದಲ್ಲಿ ಪರ್ವತಗಳ ಮೇಲೆ ಹಿಮಪಾತದ ಪರಿಣಾಮ ಬಯಲು ಸೀಮೆಯಲ್ಲೂ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಬಯಲು ಪ್ರದೇಶದಲ್ಲಿ ಚಳಿ ಹೆಚ್ಚಾಗಿರುತ್ತದೆ ಮತ್ತು ಈ ಚಳಿಗಾಲದ ಅವಧಿಯು ಈ ವಾರ ಪೂರ್ತಿ ಮುಂದುವರಿಯಲಿದೆ. ಬೆಳ್ಳಂಬೆಳಗ್ಗೆ ಅಧಿಕ ಮಂಜು ಆವರಿಸುವ ಕಾರಣ ವಾಹನ ಸವಾರರು ಪರದಾಡುತ್ತಿದ್ದಾರೆ. ಒಂದೆಡೆ ಮಾಲಿನ್ಯ ಒಂದೆಡೆ ಚಳಿಯೊಂದಿಗೆ ಮಳೆಯಾಗುವ ಸೂಚನೆ ಕೂಡ ಹವಾಮಾನ ಇಲಾಖೆ ನೀಡಿದೆ.

ಬಯಲು ಪ್ರದೇಶದಲ್ಲಿ ಚಳಿ

ಬಯಲು ಪ್ರದೇಶದಲ್ಲಿ ಚಳಿ

ಹಿಮಾಚಲ, ಉತ್ತರಾಖಂಡ ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದರೆ, ಈ ಸಮಯದಲ್ಲಿ ದಾಲ್ ಸರೋವರವು ಸಂಪೂರ್ಣವಾಗಿ ಹೆಪ್ಪುಗಟ್ಟಿದೆ. ದೆಹಲಿ ಮಾತ್ರವಲ್ಲದೆ ಪಂಜಾಬ್, ಹರಿಯಾಣ, ಬಿಹಾರ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲೂ ದಟ್ಟವಾದ ಮಂಜು ಕಾಣಿಸಿಕೊಳ್ಳುತ್ತಿದೆ. ಇದರಿಂದ ಜನ ತತ್ತರಿಸಿಹೋಗಿದ್ದಾರೆ. ಸಂಜೆಯಾದರೆ ಆವರಿಸುವ ಮೈಕೊರೆಯುವ ಚಳಿಗೆ ಜನ ಬೆಚ್ಚಗಿನ ಹೊದಿಕೆಗಳ ಮೊರೆ ಹೋಗುತ್ತಿದ್ದಾರೆ. ಬೆಚ್ಚಗಾಗಲು ಚಹಾ ಅಂಗಡಿಗಳ ಮುಂದೆ ಮತ್ತು ಬೆಂಕಿಯ ಸುತ್ತಲು ಕೂಡುವ ದೃಶ್ಯಗಳು ಅಲ್ಲಲ್ಲಿ ಸಾಮಾನ್ಯವಾಗಿವೆ.

ಲಘು ಮಳೆಯಾಗುವ ಸಾಧ್ಯತೆ

ಲಘು ಮಳೆಯಾಗುವ ಸಾಧ್ಯತೆ

ಆದ್ದರಿಂದ ಸ್ಕೈಮೆಟ್ ಪ್ರಕಾರ ಮುಂದಿನ 24 ಗಂಟೆಗಳಲ್ಲಿ ಪಂಜಾಬ್, ಹರಿಯಾಣ, ಉತ್ತರ ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ರಾಜಸ್ಥಾನ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಅಂದಹಾಗೆ ಈ ಎಲ್ಲಾ ರಾಜ್ಯಗಳು ಈ ವಾರ ಪೂರ್ತಿ ದಟ್ಟವಾದ ಮಂಜು ಮತ್ತು ಶೀತ ಗಾಳಿಯ ಹಿಡಿತದಲ್ಲಿರಲಿವೆ. ಹಾಗಾಗಿ ಎಲ್ಲರೂ ತುಂಬಾ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ಇಂದಿನ ದೆಹಲಿಯ ಗಾಳಿಯ ಗುಣಮಟ್ಟ

ಇಂದಿನ ದೆಹಲಿಯ ಗಾಳಿಯ ಗುಣಮಟ್ಟ

ಪುಸಾ, ದೆಹಲಿ - 302 AQI ತುಂಬಾ ಕೆಟ್ಟದು

ಪಂಜಾಬಿ ಬಾಗ್-256 AQI ತುಂಬಾ ಕೆಟ್ಟದು

ಶಾದಿಪುರ್, ದೆಹಲಿ - 298 AQI ತೀರಾ ಕೆಟ್ಟದ್ದು

ದೆಹಲಿ ಮಿಲ್ಕ್ ಸ್ಕೀಮ್ ಕಾಲೋನಿ 312 AQI⁠ ತುಂಬಾ ಕೆಟ್ಟದು

ಅಶೋಕ್ ವಿಹಾರ್ ದೆಹಲಿ 315 AQI ತುಂಬಾ ಕೆಟ್ಟದು

NSIT ದ್ವಾರಕಾ, 321 AQI ತುಂಬಾ ಕೆಟ್ಟದು

ಲೋಧಿ ರಸ್ತೆ, 289 AQI ತುಂಬಾ ಕೆಟ್ಟದು

Recommended Video

ಮಾತಾ ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತದಿಂದ 12 ಭಕ್ತರ ಸಾವು | Oneindia Kannada

English summary
At present, the whole of North India is freezing cold, while the climate of the capital is very bad. Even today the Air Quality Index (AQI) of Delhi is 381, which falls in the very poor category.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X