• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಬಾಮಾ ಪುಸ್ತಕದಲ್ಲಿ ರಾಹುಲ್ ಕುರಿತ ಅಭಿಪ್ರಾಯಕ್ಕೆ ಸಂಜಯ್ ರಾವತ್ ವಿರೋಧ

|

ನವದೆಹಲಿ, ನವೆಂಬರ್ 14: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತನ್ನ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಶಿವಸೇನಾ ವಕ್ತಾರ ಸಂಜಯ್ ರಾವತ್ ವಿರೋಧ ವ್ಯಕ್ತಪಡಿಸಿದ್ದಾರೆ.

ಒಬಾಮಾ ಅವರು ತಮ್ಮ ಆತ್ಮ ಚರಿತ್ರೆ ಎ ಪ್ರಾಮಿಸ್ಡ್ ಲ್ಯಾಂಡ್ ಕೃತಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಾಹುಲ್ ಗಾಂಧಿಯ ಕುರಿತು ಉಲ್ಲೇಖಿಸಿದ್ದಾರೆ.

ಬರಾಕ್ ಒಬಾಮ ಹೊಸ ಪುಸ್ತಕದಲ್ಲಿ ರಾಹುಲ್ ಗಾಂಧಿ ಬಗ್ಗೆ ಲೇವಡಿ

ಅಧ್ಯಾಪಕರನ್ನು ಮೆಚ್ಚಿಸಲು ತುದಿಗಾಲಲ್ಲಿ ನಿಂತಿರುವ ಕೋರ್ಸ್ ವರ್ಕ್ ಮುಗಿಸಿದ ವಿದ್ಯಾರ್ಥಿಯೆಂಬಂತೆ ಅಳುಕು, ಅಪಕ್ವತೆಯನ್ನು ಹೊಂದಿದವರು ರಾಹುಲ್ ಗಾಂಧಿ ಎಂದು ಬರೆದಿದ್ದಾರೆ.

ನಾವು ಯಾವತ್ತೂ ಡೊನಾಲ್ಡ್ ಟ್ರಂಪ್‌ಗೆ ಸರಿಯಿಲ್ಲ ಎಂದು ಹೇಳಿಲ್ಲ, ಒಬಾಮಾಗೆ ಭಾರತದ ಬಗ್ಗೆ ಎಷ್ಟು ತಿಳಿದಿದೆ? ಎಂದು ಪ್ರಶ್ನಿಸಿದ್ದಾರೆ.

ವಿದೇಶಿ ರಾಜಕಾರಣಿಯೊಬ್ಬರು ಭಾರತದ ರಾಜಕೀಯ ನಾಯಕರ ಬಗ್ಗೆ ಅಂತಹ ಅಭಿಪ್ರಾಯಗಳನ್ನು ನೀಡುವುದು ತಪ್ಪು, ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ದೇಶೀಯ ರಾಜಕೀಯ ಪ್ರಹಸನಗಳೂ ಕೆಟ್ಟದದಾಗಿದೆ.

ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯನ್ನು ಲೇವಡಿ ಮಾಡಿ ಸಾಕಷ್ಟು ಅಪಹಾಸ್ಯ ಭರಿತ ಮಾತುಗಳು ಹಡಿದಾಡಿದ್ದವು.

ಒಬಾಮಾ ಅವರ ಪುಸ್ತಕದಲ್ಲಿನ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಹುಲ್ ಗಾಂಧಿ ಅವರ ಸಾಮರ್ಥ್ಯವನ್ನು ಅತ್ಯಂತ ವಿಧೇಯವಾಗಿ ಒಬಾಮಾ ಅಣಕಿಸಿದ್ದಾರೆ ಎಂದು ರಾಹುಲ್ ಸೈದ್ಧಾಂತಿಕ ವಿರೋಧಿಗಳು ಟೀಕಿಸಿದ್ದಾರೆ. ಇನ್ನೊಂದೆಡೆ ಅನೇಕರು ಒಬಾಮಾ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಬಾಮಾ ಮೇಲಿನ ಗೌರವ ಇದರಿಂದ ಕಳೆದುಹೋಯಿತು ಎಂದಿದ್ದಾರೆ. ಮನಮೋಹನ್ ಸಿಂಗ್ ಭಾವುಕ ಮನಮೋಹನ್ ಸಿಂಗ್ ಭಾವುಕ ಇನ್ನೊಂದೆಡೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಬಗ್ಗೆಯೂ ಒಬಾಮಾ ಉಲ್ಲೇಖಿಸಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರು ಭಾವಪೂರ್ಣ ಸ್ವಭಾವದ ವ್ಯಕ್ತಿಯಂತೆ ಕಂಡುಬಂದಿದ್ದಾರೆ ಎಂದು ಅವರು ಬರೆದಿದ್ದಾರೆ.

English summary
Two days after a massive row erupted over Barack Obama’s comments on Congress MP Rahul Gandhi in the former’s new book ‘A Promised Land’, senior Shiv Sena leader lashed out at the former US President and questioned his knowledge on India to make such comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X