ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲಾಸ್ಮಾ ಥೆರಪಿ ನಿಲ್ಲಿಸಲ್ಲ: ಕೇಂದ್ರದ ಎಚ್ಚರಿಕೆಗೆ ಕಿವಿಕೊಡದ ಕೇಜ್ರಿವಾಲ್

|
Google Oneindia Kannada News

ದೆಹಲಿ, ಮೇ 1: ಕೊರೊನಾ ವೈರಸ್‌ಗೆ ಈವರೆಗೂ ‍ಔಷಧ ಪತ್ತೆ ಹಚ್ಚಿಲ್ಲ. ಈ ಮಹಾಮಾರಿಯನ್ನು ನಿಯಂತ್ರಿಸುವ ಉದ್ದೇಶದಿಂದ ಎಲ್ಲ ರೀತಿಯ ಪ್ರಯತ್ನಗಳನ್ನು ವೈದ್ಯರು ಮಾಡುತ್ತಿದ್ದಾರೆ. ಇಂತಹ ಪ್ರಯತ್ನದಲ್ಲಿ ಭಾರತೀಯರಿಗೆ ಸಮಾಧಾನ ತಂದ ಚಿಕಿತ್ಸೆ ಪ್ಲಾಸ್ಮಾ ಥೆರಪಿ.

Recommended Video

ಲಾಕ್ ಡೌನ್ ಸಡಿಲ ಪಡಿಸಲು ಸಿದ್ದರಾಮಯ್ಯ ಕೊಟ್ಟ ಮಾಸ್ಟರ್ ಪ್ಲಾನ್ ಇದು | Siddaramaiah | Oneindia Kannada

ಕೊವಿಡ್ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಗಳ ಪ್ಲಾಸ್ಮಾದಿಂದ ಉಳಿದ ಕೊರೊನಾ ಪೀಡಿತರನ್ನು ಪ್ರಾಣಾಪಾಯದಿಂದ ಕಾಪಾಡುವ ಸಾಧ್ಯತೆ ಇದೆ ಎಂದು ಪ್ರಯೋಗಗಳ ಫಲಿತಾಂಶದಲ್ಲಿ ಗೋಚರಿಸಿತ್ತು. ಬಳಿಕ, ದೇಶದ ಹಲವು ಕಡೆ ಪ್ಲಾಸ್ಮಾ ಥೆರಪಿ ಪ್ರಯೋಗಗಳು ನಡೆದಿದೆ.

ದೇಶದಲ್ಲಿ 130 ಜಿಲ್ಲೆ ರೆಡ್ ಜೋನ್: ದೆಹಲಿ, ಮುಂಬೈ, ಬೆಂಗಳೂರು ಡೇಂಜರ್ದೇಶದಲ್ಲಿ 130 ಜಿಲ್ಲೆ ರೆಡ್ ಜೋನ್: ದೆಹಲಿ, ಮುಂಬೈ, ಬೆಂಗಳೂರು ಡೇಂಜರ್

ಕೇಂದ್ರ ಸರ್ಕಾರ ಪ್ಲಾಸ್ಮಾ ಥೆರಪಿ ಬಳಸದಂತೆ ಎಚ್ಚರಿಕೆ ನೀಡಿದೆ. ಈ ಚಿಕಿತ್ಸೆ ಇನ್ನು ಪ್ರಯೋಗ ಹಂತದಲ್ಲಿದೆ. ಪೂರ್ಣ ಫಲಿತಾಂಶ ಹೊರಬಿದ್ದಿಲ್ಲ. ಇದು ಮಾರಣಾಂತಿಕ ತೊಂದರೆ ಉಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದು ಐಸಿಎಂಆರ್ ಹೇಳಿತ್ತು.

We Wont Stop plasma Therapy Delhi CM

ಆದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 'ನಾವು ಪ್ಲಾಸ್ಮಾ ಥೆರಪಿ ಚಿಕಿತ್ಸೆ ನಿಲ್ಲಿಸುವುದಿಲ್ಲ'' ಎಂದು ಹೇಳಿದ್ದಾರೆ. 'ಕೊರೊನಾ ಸೋಂಕಿತ ವ್ಯಕ್ತಿಯ ಸ್ಥಿತಿ ಗಂಭೀರವಾಗಿತ್ತು. ಆತನ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗ ಮಾಡಲಾಗಿತ್ತು. ಇಂದು ಆ ವ್ಯಕ್ತಿ ಗುಣಮುರಾಗಿ ಡಿಸ್ಚಾರ್ಜ್ ಆಗಿದ್ದಾರೆ' ಎಂದು ಕೇಜ್ರಿವಾಲ್ ಸಮರ್ಥಿಸಿಕೊಂಡಿದ್ದಾರೆ.

'ನಾವು ಪ್ಲಾಸ್ಮಾ ಚಿಕಿತ್ಸೆಯನ್ನು ನಿಲ್ಲಿಸುವುದಿಲ್ಲ. ಈ ಥೆರಪಿಯಿಂದ ಉತ್ತಮ ಫಲಿತಾಂಶ ಪಡೆದಿದ್ದೇವೆ' ಎಂದು ದೆಹಲಿ ಸಿಎಂ ಹೇಳಿದ್ದಾರೆ. 'ಸೋಂಕಿನಿಂದ ಚೇತರಿಸಿಕೊಂಡಿರುವ 1100 ಜನರನ್ನು ನಾವು ಸಂಪರ್ಕಿಸುತ್ತಿದ್ದು, ಅವರಿಂದ ಪ್ಲಾಸ್ಮಾ ದಾನ ಮಾಡಲು ಕೋರಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ.

ನೌಕರರ ತುಟ್ಟಿಭತ್ಯೆ ಹೆಚ್ಚಳ ತಡೆಹಿಡಿಯಲು ಅರವಿಂದ್ ಕೇಜ್ರಿವಾಲ್ ನಿರ್ಧಾರನೌಕರರ ತುಟ್ಟಿಭತ್ಯೆ ಹೆಚ್ಚಳ ತಡೆಹಿಡಿಯಲು ಅರವಿಂದ್ ಕೇಜ್ರಿವಾಲ್ ನಿರ್ಧಾರ

ಇನ್ನುಳಿದಂತೆ ರಾಜಸ್ಥಾನ ಕೋಟಾದಲ್ಲಿ ಸಿಲುಕಿಕೊಂಡಿರುವ ದೆಹಲಿ ಮೂಲದ ಜನರನ್ನು ವಾಪಸ್ ಕರೆತರಲು 40 ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ದೆಹಲಿಗೆ ಹಿಂತಿರುಗಿದ ನಂತರ 14 ದಿನಗಳ ಕಾಲ ಸ್ವಯಂ ಕ್ವಾರೆಂಟೈನ್‌ಗೆ ಒಳಗಾಗಬೇಕು. ದೆಹಲಿಯಲ್ಲಿ ಈವರೆಗೂ 3500 ಸೋಂಕಿತರು ವರದಿಯಾಗಿದ್ದು, 59 ಜನರು ಪ್ರಾಣ ಕಳೆದುಕೊಂಡಿದ್ದಾರೆ.

English summary
'We Won't stop plasma therapy' Delhi CM Arvind Kejriwal clarifies after central warns about Plasma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X