ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶೀಯ ಶಸ್ತ್ರಾಸ್ತ್ರಗಳ ಮೂಲಕವೇ ಮುಂದಿನ ಯುದ್ಧ ಗೆಲ್ಲುತ್ತೇವೆ: ಬಿಪಿನ್ ರಾವತ್

|
Google Oneindia Kannada News

ನವದೆಹಲಿ, ಅಕ್ಟೋಬರ್ 15: ದೇಶದ ರಕ್ಷಣಾ ಸೇವೆಗಳ ಅಗತ್ಯತೆಗಳನ್ನು ದೇಶೀಯ ಶಸ್ತ್ರಾಸ್ತ್ರಗಳ ಮೂಲಕವೇ ಪೂರೈಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಪ್ರಗತಿ ಸಾಧಿಸಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.

ಮುಂದಿನ ಯುದ್ಧವನ್ನು ಸ್ಥಳೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳ ಮೂಲಕ ಹೋರಾಡಿ ಗೆಲ್ಲಲಾಗುವುದು ಎಂದು ಹೇಳಿದರು.

ಜಮ್ಮು-ಕಾಶ್ಮೀರ: ಫಾರೂಕ್ ಅಬ್ದುಲ್ಲಾ ತಂಗಿ, ಮಗಳ ಬಂಧನಜಮ್ಮು-ಕಾಶ್ಮೀರ: ಫಾರೂಕ್ ಅಬ್ದುಲ್ಲಾ ತಂಗಿ, ಮಗಳ ಬಂಧನ

Recommended Video

ಮತ್ತೆ ಸಣ್ಣದೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿತೇ ಭಾರತ? | Oneindia Kannada

ದೇಶದಲ್ಲಿ ತಯಾರಿಸಿದ ಉಪಕರಣಗಳ ಮೂಲಕ ಅವಶ್ಯಕತೆಗಳನ್ನು ಪೂರೈಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಡಿಆರ್‌ಡಿಒ ಪ್ರಗತಿ ಸಾಧಿಸಿದೆ. ಸ್ಥಳೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಸಲಕರಣೆಗಳ ಮೂಲಕ ನಾವು ಮುಂದಿನ ಯುದ್ಧವನ್ನು ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

We Will Win Next War Through Indigenous Weapons

52 ಪ್ರಯೋಗಾಲಯಗಳ ಜಾಲವನ್ನು ಹೊಂದಿರುವ ಸರ್ಕಾರಿ ಸಂಸ್ಥೆ ಡಿಆರ್‌ಡಿಒಗೆ ಏರೋನಾಟಿಕ್ಸ್, ಲ್ಯಾಂಡ್ ಕಾಂಬ್ಯಾಟ್ ಎಂಜಿನಿಯರಿಂಗ್, ಶಸ್ತ್ರಾಸ್ತ್ರಗಳು, ಎಲೆಕ್ಟ್ರಾನಿಕ್ಸ್, ಕ್ಷಿಪಣಿಗಳು ಮತ್ತು ನೌಕಾ ವ್ಯವಸ್ಥೆಗಳಂತಹ ವಿವಿಧ ಕ್ಷೇತ್ರಗಳನ್ನು ಒಳಗೊಂಡಿದೆ.

ದೇಶದ ರಕ್ಷಣಾ ಉದ್ಯಮವು ಮೊಳಕೆಯೊಡೆಯುತ್ತಿರುವ ಉದ್ಯಮವಾಗಿದ್ದು, ಭವಿಷ್ಯದ ಯುದ್ಧಕ್ಕಾಗಿ ವ್ಯವಸ್ಥೆಗಳ ಅಭಿವೃದ್ಧಿಯನ್ನು ನೋಡುವ ಸಮಯ ಬಂದಿದೆ ಮತ್ತು "ಸಂಪರ್ಕ ರಹಿತ ಯುದ್ಧ" ಕ್ಕೆ ಸಿದ್ಧತೆ ಆರಂಭಿಸಲು ಸನ್ನದ್ಧರಾಗಿದ್ದೇವೆ.

ಕೃತಕ ಬುದ್ಧಿಮತ್ತೆಯ ಜೊತೆಗೆ, ಸೈಬರ್, ಬಾಹ್ಯಾಕಾಶ ತಂತ್ರಜ್ಞಾನ, ಲೇಸರ್, ಎಲೆಕ್ಟ್ರಾನಿಕ್ ವಾರ್ಫೇರ್ ಮತ್ತು ರೊಬೊಟಿಕ್ಸ್ ಅಭಿವೃದ್ಧಿಯಲ್ಲಿ ಭವಿಷ್ಯವಿದೆ ಎಂದು ಜನರಲ್ ರಾವತ್ ಪ್ರತಿಪಾದಿಸಿದರು.

"ನಾವು ಭವಿಷ್ಯದ ಯುದ್ಧಕ್ಕಾಗಿ ಸೈಬರ್, ಬಾಹ್ಯಾಕಾಶ, ಲೇಸರ್, ಎಲೆಕ್ಟ್ರಾನಿಕ್ ಮತ್ತು ರೊಬೊಟಿಕ್ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯತ್ತ ಹೆಚ್ಚು ಒತ್ತು ನೀಡಬೇಕಿದೆ'' ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಉಪಸ್ಥಿತರಿದ್ದರು.

English summary
Army Chief General Bipin Rawat today said the Defence Research and Development Organisation (DRDO) has made strides in ensuring that requirement of the country's defence services are met through home-grown solutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X