ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮುಂಬರುವ ವರ್ಷಗಳಲ್ಲಿ ಲಾಹೋರ್ ನಲ್ಲಿ ಗಾಂಧಿ ಜಯಂತಿ ಆಚರಿಸುತ್ತೇವೆ'

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 13: 'ಪ್ರತ್ಯೇಕತಾವಾದಿ ಚಳವಳಿಯಿಂದ' ಪಾಕಿಸ್ತಾನ ಕುಸಿಯಲಿದೆ. ಮುಂಬರುವ ವರ್ಷಗಳಲ್ಲಿ ಗಾಂಧೀಜಿ ಜನ್ಮ ವರ್ಷಾಚರಣೆಯನ್ನು ಲಾಹೋರ್ ನಲ್ಲಿ (ಪಾಕಿಸ್ತಾನ) ಆಚರಿಸಲಿದ್ದೇವೆ ಎಂದು ಶುಕ್ರವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಮುಖಂಡ ಇಂದ್ರೇಶ್ ಕುಮಾರ್ ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮುಜಫರಾಬಾದ್ ನಲ್ಲಿ ಶುಕ್ರವಾರ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು, ಕಾಶ್ಮೀರಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಮ್ಮು - ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ರದ್ದು ಮಾಡಿದ ನಂತರ ಇದು ಅವರ ಎರಡನೇ ಭೇಟಿಯಾಗಿದೆ.

ಪಾಕಿಸ್ತಾನದಲ್ಲಿ ಮೊಹರಂ ದಿನ ಪೆಟ್ರೋಲ್ ಗಿಂತ ಹಾಲು ದುಬಾರಿಪಾಕಿಸ್ತಾನದಲ್ಲಿ ಮೊಹರಂ ದಿನ ಪೆಟ್ರೋಲ್ ಗಿಂತ ಹಾಲು ದುಬಾರಿ

"1947ಕ್ಕೂ ಮುನ್ನ ಪಾಕಿಸ್ತಾನವು ವಿಶ್ವ ಭೂಪಟದಲ್ಲಿ ಇರಲಿಲ್ಲ. ಇನ್ನು ಮುಂದೆ ಕೂಡ ಇರಲ್ಲ ಅಂತ ನಾನು ಅಂದುಕೊಳ್ತೀನಿ. ಅದು ಒಂದು ವೇಳೆ ನಿಜವಾದರೆ ಬಾಪೂ ಜಯಂತಿ ಹಾಗೂ ಹಿಂದಿ ದಿವಸ್ ನ ಲಾಹೋರ್ ನಲ್ಲಿ ಆಚರಿಸಬಹುದು, ನೀವಿದನ್ನು ಒಪ್ತೀರಾ?" ಎಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಇಂದ್ರೇಶ್ ಕುಮಾರ್ ಪ್ರಶ್ನಿಸಿದ್ದಾರೆ.

We Will Celebrate Gandhi Jayanti In Lahore In Up Coming Years, Said RSS Leader

ವಿಭಜನೆ ನಂತರ ಪಾಕಿಸ್ತಾನ ರಚನೆ ಆಯಿತು. 1971ರಲ್ಲಿ ಮತ್ತಷ್ಟು ವಿಭಜನೆ ಆಯಿತು. ಈಗ ಇನ್ನೂ ಐದಾರು ತುಂಡಾಗುವ ಹಂತದಲ್ಲಿ ಇದೆ. ಪಷ್ತೂನಿಸ್ತಾನ್, ಬಲೂಚಿಸ್ತಾನ್, ಸಿಂಧ್ ದೂರವಾಗಲು ಬಯಸುತ್ತಿವೆ. ತಜ್ಞರು ಪಾಕಿಸ್ತಾನದ ಈ ಸ್ಥಿತಿ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಪಾಕಿಸ್ತಾನ ದಿನದಿನಕ್ಕೂ ದುರ್ಬಲವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಆರೆಸ್ಸೆಸ್ ನಲ್ಲಿ ಹೇಗೆ ಪ್ರಚಾರಕ್ ಅಂತ ಇರುತ್ತಾರೋ ಅದೇ ರೀತಿ ಕಾಂಗ್ರೆಸ್ ನಲ್ಲಿ 'ಪ್ರೇರಕ್' ಎಂಬ ಹುದ್ದೆ ಸೃಷ್ಟಿಗೆ ಕೆಲವು ನಾಯಕರು ಆಲೋಚಿಸುತ್ತಿರುವ ಬಗ್ಗೆ ಮಾತನಾಡಿದ ಇಂದ್ರೇಶ್, ಕಾಂಗ್ರೆಸ್ ಗೆ 'ಪ್ರಚಾರಕರನ್ನು' ಹೊಂದಲು ಸಾಧ್ಯವಿಲ್ಲ. ಅದಕ್ಕೆ ಬದ್ಧತೆ, ತ್ಯಾಗ ಅಗತ್ಯ ಇದೆ ಎಂದರು.

ಪ್ರಚಾರಕ್ ಅಂದರೆ ಗುರಿ. ನಿಮಗೆ ಗುರಿ ಇಲ್ಲ ಅಂದರೆ ಅದು ಉಳಿಯಲ್ಲ. ನಾಟಕದ ಆಧಾರದಲ್ಲಿ ಗುರಿ ನಡೆಯಲ್ಲ. ಗುರಿ ಆರಂಭಿಸಲು ನಿಮಗೆ ತ್ಯಾಗ ಬೇಕು, ಸರಳತೆ, ಸಮರ್ಪಣೆ ಬೇಕು. ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಗುರಿಯ ಭಾಗ. ಅದು ತನ್ನ ಗುರಿಯನ್ನು ಬಿಟ್ಟ ಮೇಲೆ ಭಾರತದ ವಿಭಜನೆಗೆ ಕಾರಣ ಆಯಿತು. ಅವರು ದೇಶದಲ್ಲಿ ಭ್ರಷ್ಟ, ಅಪರಾಧ ಚಟುವಟಿಕೆಗೆ ಕಾರಣರಾದರು ಎಂದು ಇಂದ್ರೇಶ್ ಕುಮಾರ್ ಆರೋಪಿಸಿದರು.

English summary
Pakistan will break in to 5 to 6 pieces. We will celebrate Gandhi Jayanti in Lahore in upcoming years, said RSS leader Indresh Kumar in Delhi on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X