ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯಾ ತೀರ್ಪು: 5 ಎಕರೆ ಜಮೀನು ಭಿಕ್ಷೆ ನಮಗೆ ಬೇಡ ಎಂದ ಓವೈಸಿ

|
Google Oneindia Kannada News

ನವದೆಹಲಿ, ನವೆಂಬರ್ 9: ಅಯೋಧ್ಯಾ ರಾಮಮಂದಿರ-ಬಾಬ್ರಿ ಮಸೀದಿ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ತೃಪ್ತಿದಾಯಕವಾಗಿರಲಿಲ್ಲ ಎಂದು ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದರು.

ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದು, ನಾವು ನಮ್ಮ ಹಕ್ಕಿಗೋಸ್ಕರ ಹೋರಾಟ ಮಾಡುತ್ತಿದ್ದೆವು. ನಮಗೆ ಮಸೀದಿ ಕಟ್ಟಲು ಹಣವಿಲ್ಲವೆಂದಲ್ಲ. ನೀವು ಕೊಟ್ಟಿರುವ 5 ಎಕರೆ ಜಮೀನಿನ ಭಿಕ್ಷೆ ನಮಗೆ ಬೇಡ ಎಂದರು.

Ayodhya Verdict Live Updates: ವಿವಾದಿತ ಭೂಮಿ ಸರ್ಕಾರೇತರ ಸಂಸ್ಥೆಗೆAyodhya Verdict Live Updates: ವಿವಾದಿತ ಭೂಮಿ ಸರ್ಕಾರೇತರ ಸಂಸ್ಥೆಗೆ

ಸುಪ್ರೀಂಕೋರ್ಟ್ ತೀರ್ಪು ನಾವು ಅಂದುಕೊಂಡಂತೆ ಬಂದಿಲ್ಲ, ನಮಗೆ ಸಂವಿಧಾನದ ಮೇಲೆ ನಂಬಿಕೆ ಇದೆ. ಆದರೆ ಈ 5 ಎಕರೆ ಜಮೀನಿನ ಭಿಕ್ಷೆ ನಮಗೆ ಬೇಡ ಎಂದು ಹೇಳಿದ್ದಾರೆ.

We Dont Need 5 Acre Land As Donation Says Owaisi

ನಮ್ಮ ಲೀಗಲ್ ಕಮಿಟಿಯು ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸಲಿದೆ. ನಾವು ಧ್ವಂಸವಾಗಿರುವುದನ್ನು ಮತ್ತೆ ನಿರ್ಮಾಣ ಮಾಡುವ ಕೆಲಸ ಮಾಡಲಿದ್ದೇವೆ. ಉತ್ತರ ಪ್ರದೇಶದಲ್ಲಿ ಒಂದು ಮಸೀದಿ ನಿರ್ಮಿಸುವ ತಾಕತ್ತು ನಮಗೆ ಇದೆ. ಆದರೆ ಇಷ್ಟು ದಿನ ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೆವು ಎಂದಿದ್ದಾರೆ.

ಅಯೋಧ್ಯಾದ ವಿವಾದಿತ ಭೂಮಿ ರಾಮಜನ್ಮಭೂಮಿ ನ್ಯಾಸ ಟ್ರಸ್ಟಿಗೆ, ಕೇಂದ್ರ ಸರ್ಕಾರ ವಶದಲ್ಲಿದ್ದ ಭೂಮಿಯಲ್ಲಿ ಸುನ್ನಿ ವಕ್ಫ್ ಬೋರ್ಡಿಗೆ 5 ಎಕರೆ. ವಿವಾದಿತ ರಾಮಮಂದಿರ ನಿರ್ಮಾಣ ಮಾಡಲು ರಾಮಜನ್ಮಭೂಮಿ ನ್ಯಾಸ್ ಅಲ್ಲದೆ ಪ್ರತ್ಯೇಕ ಟ್ರಸ್ಟ್ ರಚನೆ ಆಗಬೇಕಿದೆ. ಮಸೀದಿಗೆ ಪರ್ಯಾಯ ಭೂಮಿಯನ್ನು 3 ರಿಂದ 4 ತಿಂಗಳುಗಳಲ್ಲಿ ಸರ್ಕಾರವು ನೀಡಬೇಕಾಗುತ್ತದೆ.

English summary
Not satisfied with the verdict. Supreme Court is indeed supreme but not infallible. We have full faith in the constitution, we were fighting for our right, we don't need 5 acre land as donation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X